ಕೊಯಮತ್ತೂರಿನ ಲಾಟರಿ ಮತ್ತು ಹೋಟೆಲ್ ಲಾಬಿ : ಭಾರತದ ಲಾಟರಿ ದೊರೆ ಮಾರ್ಟಿನ್ ಸಾಮ್ರಾಜ್ಯ
ಸಿಕ್ಕಿಂ ಸರಕಾರಕ್ಕೆ ರೂ. 4,500 ಕೋಟಿ ವಂಚಿಸಿರುವನು ಎನ್ನಲಾದ ಕೊಯಮತ್ತೂರು ಮೂಲದ ಸ್ಯಾಂಟಿಯಾಗೋ ಮಾರ್ಟಿನ್ ಮ್ಯಾನ್ಮಾರ್‌ನಲ್ಲಿ ಕೆಲಸ ಮಾಡಿ ಭಾರತಕ್ಕೆ ಹಿಂತಿರುಗಿದವನು. ನಾನಾ ದಾರಿಯಿಂದ ಲಾಟರಿ ರಾಜ ಎನಿಸಿ, ಫ್ಯೂಚರ್ ಗೇಮಿಂಗ್ ಹಾಗೂ ಹೋಟೆಲ್‌ಗಳ ಮಾಲಕನಾಗಿರುವನು.
1,368 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಕೊಂಡಿರುವ ಈತ ರಾಜಕೀಯ ಪಕ್ಷಗಳಿಗೆ ತನ್ನ ಇಷ್ಟಾನುಸಾರವಾಗಿ ಹಂಚಿಕೆ ಮಾಡಿದ್ದಾನೆ. ಮಾರ್ಟಿನ್ ಸಾಮ್ರಾಜ್ಯವು ಮಹಾರಾಷ್ಟ್ರ, ಸಿಕ್ಕಿಂ, ಪಂಜಾಬ್, ಪಡುವಣ ಬಂಗಾಳ, ಕೇರಳಗಳಲ್ಲಿ ಹೆಚ್ಚು ವ್ಯಾಪಿಸಿದೆ. ಎಲ್ಲ ಪಕ್ಷಗಳ ನಾಯಕರ ಜೊತೆಗೆ ಹೆಗಲು ಒರೆಸುತ್ತ ಎಲ್ಲ ಪಕ್ಷಗಳವರಿಗೆ ದೇಣಿಗೆ ನೀಡುತ್ತ ಆಳುವವರನ್ನು ಓಲೈಸುವ ಕದೀಮ. ಬಿಜೆಪಿಯ ಒಡನಾಡಿ ಆಗಿ ಸಹ ಮಾರ್ಟಿನ್ ಸಾಮ್ರಾಜ್ಯ ಬೆಳೆದಿದೆ.