Home Archive by category ವಿಶ್ವ (Page 3)

ಕೆಲವು ದೇಶಗಳ ಹಣ ಮೌಲ್ಯ ಜಾಗತಿಕವಾಗಿ ತಳಮಟ್ಟದಲ್ಲಿ ಇವೆ. ನಮ್ಮ ಒಂದು ಕಟ್ಟು ನೋಟಿಗೆ ಇಲ್ಲಿ ನೂರಾರು ಕಟ್ಟು ನೋಟು ಸಿಗುತ್ತದೆ.ಭಾರತೀಯ ಮಧ್ಯಮ ವರ್ಗದ ಬಡವರು ಈ ದೇಶಗಳ ತಾರಾ ಹೋಟೆಲುಗಳಲ್ಲಿ ತಂಗಬಹುದು. ಭಾರತದ ಒಂದು ರೂಪಾಯಿಗೆ ಆ ದೇಶಗಳ ಹಣ ಎಷ್ಟು ಸಿಗುತ್ತದೆ ಎಂದರೆ ಕಟ್ಟು ಕಟ್ಟು. ಇರಾನಿನ ರಿಯಲ್ ನಮ್ಮ ಒಂದು ರೂಪಾಯಿಗೆ 490; ವಿಯೆಟ್ನಾಮಿನ ಡಾಂಗ್ ನಮ್ಮ

ಅತಿ ಹೆಚ್ಚು ಗಸಗಸೆ ಬೆಳೆಯುವ ದೇಶಗಳು ಯಾವುದು ?

ಟರ್ಕಿ ದೇಶವು ಜಾಗತಿಕವಾಗಿ ಅತಿ ಹೆಚ್ಚು ಗಸಗಸೆ ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾಗಿದೆ; ಭಾರತವು ಮೂರನೆಯ ಸ್ಥಾನದಲ್ಲಿ ಇದೆ.ಇದನ್ನು ಓಪಿಯಂ ಸೀಡ್ ಎಂದು ಹೇಳಲು ಕಾರಣ ಓಪಿಯಂ ಎನ್ನುವುದು ಒಂದು ಮಾದಕ ದ್ರವ್ಯವಾಗಿದೆ. ಬೀಜ ಬಂಧದ ಮೇಲೆ ಗೀರಿ ಸೊನೆ ತೆಗೆದು ಓಪಿಯಂ ತಯಾರಿಸುವರು. ಅದು ಬೆಳೆದಾಗ ಬೀಜ ಬಂಧದೊಳಗೆ ಸಿಗುವುದೇ ಓಪಿಯಂ ಬೀಜ ಗಸಗಸೆ. ಗಟ್ಟಿ ಬೀಜಗಳ ಪರಿಮಳ, ಕಚಕಚ ರಚನೆ, ಪೌಷ್ಟಿಕ ಮೌಲ್ಯಗಳ ಗಸಗಸೆಯನ್ನು ಎಲ್ಲ ಬಗೆಯ ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ;

ಬೀದಿ ನಾಯಿಗಳ ಸಾಮ್ರಾಜ್ಯದ ಐದು ರಾಜ್ಯಗಳು ಯಾವುವು?

ಒಡಿಶಾ, ಜಮ್ಮು ಮತ್ತು ಕಾಶ್ಮೀರ ಉತ್ತರ ಪ್ರದೇಶ, ಮಹಾರಾಷ್ಟ, ಕೇರಳ ರಾಜ್ಯಗಳು ಸಾವಿರ ಮಂದಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯಗಳಾಗಿವೆ.ನಗರಗಳಲ್ಲಿ ತಿರುಗುತ್ತ, ಪ್ರವಾಸಿ ತಾಣಗಳಲ್ಲಿ ಬೆದರಿಸುತ್ತ, ತಮ್ಮದೇ ಗುಂಪು ಕಟ್ಟಿಕೊಂಡು, ತಮ್ಮದೊಂದು ಜಾಗ ಎಲ್ಲೆ ಗುರುತಿಸಿಕೊಂಡು ಯಾರಿಗೂ ಹೆದರದೆ ತಿರುಗುವ ಬೀದಿ ನಾಯಿಗಳ ಸಮಸ್ಯೆ ಇಡೀ ದೇಶವನ್ನು ಕಾಡುತ್ತಿದೆ.¸ಸಾವಿರ ಜನರಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯ ಒಡಿಶಾ. ಇಲ್ಲಿ ಒಂದು ಸಾವಿರ ಜನರಿಗೆ

ಶ್ರೀಹರಿಕೋಟಾ: ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶ್ರೀಹರಿಕೋಟಾದಿಂದ ತನ್ನ 101ನೇ ರಾಕೆಟ್ ಉಡಾವಣೆಯನ್ನು ಕೈಗೊಂಡಿದೆ. ಆದರೆ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಇಸ್ರೋ ಮುಖ್ಯಸ್ಥ ವಿ.ನಾರಾಯಣನ್ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇಸ್ರೋದ 101 ನೇ ಬಾಹ್ಯಾಕಾಶ ಯಾನವು ಉಡಾವಣೆಯಾದ ಸ್ವಲ್ಪ ಸಮಯದ ನಂತರ ತಾಂತ್ರಕ ದೋಷ ಕಂಡುಬಂದ

ಪಾಕಿಸ್ತಾನದ ಡ್ರೋನ್ ದಾಳಿ ವಿಫಲ:ಸರಣಿ ಸ್ಫೋಟಗಳು ಮತ್ತು ಮೊಳಗಿದ ಸೈರನ್ ಸದ್ದು

ಭಾರತ-ಪಾಕ್ ಮಧ್ಯೆ ಯುದ್ಧದ ಕಾರ್ಮೋಡ ಕವಿದಿದ್ದು, ಇಂದು ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಭಾರತೀಯ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಲು ಪಾಕಿಸ್ತಾನ ವಿಫಲ ಪ್ರಯತ್ನ ಮಾಡಿದ ನಂತರ ಸರಣಿ ಸ್ಫೋಟಗಳು ಮತ್ತು ಸೈರನ್‌ಗಳು ಕೇಳಿಬರುತ್ತಿವೆ. ನಸುಕಿನ ಜಾವ 3:50 ರಿಂದ 4:45 ರ ನಡುವೆ ಕೇಳಿದ ಸ್ಫೋಟಗಳಿಂದ ಜಮ್ಮು ನಗರದ ಕೆಲವು ಭಾಗಗಳಲ್ಲಿ ಕತ್ತಲೆಯಾಗಿದ್ದು, ಆಕಾಶದಲ್ಲಿ ಯುದ್ಧಸಾಮಗ್ರಿಗಳು ಕಂಡುಬಂದವು.

ದುಬೈ : “ಮಿಡ್ಲ್ ಕ್ಲಾಸ್ ಫ್ಯಾಮಿಲಿ ” ತುಳು ಚಿತ್ರದ ಪ್ರೀಮಿಯರ್ ಟಿಕೆಟ್ ಬಿಡುಗಡೆ ಕಾರ್ಯಕ್ರಮ

ದುಬೈ : ಯುವ ನಟ – ನಿರ್ದೇಶಕ ರಾಹುಲ್ ಅಮೀನ್ ನಿರ್ದೇಶಿಸಿ, ವಿನೀತ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಚಿತ್ರದ ಯುಎಇ ರಾಷ್ಟ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು. ಡಿಸೆಂಬರ್ .8 ರಂದು ದುಬೈನ ಮಾರ್ಕೊ ಪೋಲೊ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,

ದಿಲ್ಲಿ : ವಿಮಾನಗಳಲ್ಲಿ ಬಾಂಬಿಟ್ಟ ಸುಳ್ಳು ಕರೆಗಳ ಸರಣಿ: ಮರಳಿ ಬಂದಿಳಿದ ಲಂಡನ್ ದಿಲ್ಲಿ ವಿಮಾನ

ಇದೇ ಸೋಮವಾರದಿಂದ ವಿಮಾನಗಳಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಕರೆಗಳು ಬರುತ್ತಿದ್ದು, ಕಳೆದ ೨೪ ಗಂಟೆಗಳಲ್ಲಿನ 3 ಸೇರಿ ಒಟ್ಟು ೩೫ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಕಾರಣಕ್ಕೆ ವಿಮಾನಗಳನ್ನು ಬೇರೆಡೆ ತಿರುಗಿಸಿದೆ, ಇಲ್ಲವೇ ತುರ್ತಾಗಿ ಅಲ್ಲೇ ಕೆಳಕ್ಕೆ ಇಳಿಸಲಾಯಿತು. ಕಳೆದ 24 ಗಂಟೆಗಳಲ್ಲಿ ಮೂರು ಪ್ರಮುಖ ವಿಮಾನ ಯಾನಗಳು ತತ್ತರಿಸಿವೆ. ವಿಸ್ತಾರ ಸೇವೆಯ ಲಂಡನ್ ದಿಲ್ಲಿ ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತಿರುಗಿಸಲಾಗಿದೆ. ಜೈಪುರ ದುಬಾಯಿ, ಬೆಂಗಳೂರು

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ

ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದ ನಿತೇಶ್

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇಂದು ಎರಡನೇ ಚಿನ್ನದ ಪದಕ ಲಭಿಸಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್​ಎಲ್3 ವಿಭಾಗದಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ನಿತೇಶ್ 21-14, 18-21, 23-21 ರಿಂದ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಟ್ಟರು. ಇದರೊಂದಿಗೆ ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು 9 ಪದಕಗಳನ್ನು ತನ್ನದಾಗಿಸಿಕೊಂಡಂತ್ತಾಗಿದೆ.

18ರ ಲಗ್ನ ವಿಘ್ನ, 21ರ ವಿವಾಹ ವಿಚಾರಗಳು

ಮಗು ಮದುವೆ, ಬಾಲ್ಯ ವಿವಾಹ ಭಾರತ ಮತ್ತು ಕರ್ನಾಟಕದ ಒಂದು ಅಂಟು ಜಾಡ್ಯವಾಗಿ ಬಲಿತು ಕುಳಿತಿದೆ.ಲಗ್ನದ ವಯಸ್ಸನ್ನು 21ಕ್ಕೆ ಏರಿಸಿದರೂ ಸಮಸ್ಯೆ ಪರಿಹಾರ ಆಗಿಲ್ಲ. ಮದುವೆಯ ವಯಸ್ಸು 21 ಎಂದಾಗ ಹೆಣ್ಣು ಉನ್ನತ ಓದು ಮುಗಿಸಿರುವುದು ಸಾಧ್ಯ. 18 ಎಂದರೆ ಕಲಿಕೆ ಕಡೆ ಇಲ್ಲವೇ ಸಂಸಾರ ತೂಗಿಸಿಕೊಂಡು ಓದಬೇಕು. 21ಕ್ಕೆ ಹೆಣ್ಣು ಕೆಲಸಕ್ಕೆ ಸೇರಿರುವುದೂ ಸಾಧ್ಯ. ಇದು ಸಂಸಾರಕ್ಕೆ ಅನುಕೂಲ. ಭಾರತೀಯ ಸಮಾಜದಲ್ಲಿ ಅನಾನುಕೂಲವೂ ಆಗಬಹುದು. 21ರಲ್ಲಿ ಹೆಣ್ಣು ಸ್ವತಂತ್ರವಾಗಿ