ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮುಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಅ.6ರ ರವಿವಾರ ಕೂಳೂರು ಸೇತುವೆ ಮೇಲೆ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ. ರವಿವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಮಹೇಶ್ ಎಂಬ ಖಾಸಗಿ ಬಸ್‌ಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಈಜು ತಜ್ಞರಾದ ಈಶ್ವರ್ ಮಲ್ಪೆ, ಅಗ್ನಿಶಾಮಕ ದಳದವರು
ಪುತ್ತೂರು: ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ತಮ್ಮ ಬಿಳಿ ಅಂಗಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲ ಎಂದು ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂಗಿಯಲ್ಲಿ ಈಗ ಬಿಳಿ ಎಲ್ಲಿದೆ ಎಂದು ಹುಡುಕಬೇಕಿದೆ. ಬರೀ ಕಪ್ಪು ಚುಕ್ಕೆಗಳೇ ತುಂಬಿವೆ ಎಂದು ಸಂಸದ ಕ್ಯಾö. ಬ್ರಿಜೇಶ್ ಚೌಟ ಆಪಾದಿಸಿದರು. ಶನಿವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಅವರು, ದಲಿತ ಭೂಮಿಯನ್ನು ನುಂಗಿದ ಸಿದ್ದರಾಮಯ್ಯ ಅವರು ಅದನ್ನು ತಮ್ಮ ಪತ್ನಿಯ
ಮಂಗಳೂರಿನ ಯೆಯ್ಯಾಡಿಯಲ್ಲಿರುವ ವಿ ಕೆ ಫರ್ನಿಚರ್ ಮತ್ತು ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಶೋರೂಮ್‌ನಲ್ಲಿ “ವಿ ಕೆ ಉತ್ಸವ 2024” ಅನ್ನು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮುಂದಿನ ಮೂರು ತಿಂಗಳುಗಳ ಕಾಲ ನಡೆಯಲಿರುವ ಈ ಉತ್ಸವವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಟ್ಟಲ್ ಕುಲಾಲ್ ಮತ್ತು ಅವರ ಪತ್ನಿ ವಿನುತಾ ಕುಲಾಲ್, ಸಿಬ್ಬಂದಿ ಮನೀಶ್, ಸಂತೋಷ್, ಸಂದೀಪ್, ಗಿರೀಶ್, ರೂಬನ್ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು. ದಸರಾ ಮತ್ತು
ಕುಂದಾಪುರ: ಶ್ರೀ ಕ್ಷೇತ್ರ ಕಾನ್‍ಬೇರು ಹೊಸೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮ ಅಕ್ಟೋಬರ್ 3 ರಿಂದ ಆರಂಭಗೊಂಡು ಅಕ್ಟೋಬರ್ 12 ರ ತನಕ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿಯ ಸನ್ನಿಧಾನದಲ್ಲಿ ಪ್ರತಿ ದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಚಂಡಿಕಾ ಹೋಮ, ದುರ್ಗಾ ಹೋಮ ಮತ್ತು ವಿಶೇಷ ಪೂಜೆ ಜರುಗಲಿದೆ. ಸಂಜೆ 5 ರಿಂದ ಶ್ರೀ ದೇವಿಯ
ನವರಾತ್ರಿಯ ಶುಭ ಸಂದರ್ಭದಲ್ಲಿ ವಿಸ್ಡಮ್ ಎಡ್‌ನ ನೂತನ ಕಚೇರಿಯು ಬಳ್ಳಾಲ್ ಬಾಗ್‌ನ ತಕ್ಷಶಿಲಾ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತು. ವಿಸ್ಡಮ್ ಎಡ್ ಸಂಸ್ಥೆಯು ಉನ್ನತ ಶಿಕ್ಷಣ, ವಿದ್ಯಾರ್ಥಿವೇತ, ಜಾಗತಿಕ ವಿಶ್ವವಿದ್ಯಾಲಯದ ಪ್ರವೇಶಗಳು, ಶಿಕ್ಷಣ ಸಾಲ ಮಾರ್ಗದರ್ಶಿ, ಪರೀಕ್ಷಾ ತಯಾರಿ ತರಬೇತಿ ಸೇರಿದಂತೆ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮಾರ್ಗದರ್ಶನವನ್ನು ನೀಡುವ ಸಂಸ್ಥೆಯಾಗಿದ್ದು, ಈಗಾಗಲೇ ದೇಶ ವಿದೇಶಗಳಿಗೆ ತೆರಳಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದೀಗ
ಬಂಟ್ವಾಳ: ಕೇಂದ್ರ ಸರಕಾರದ ನಿಕ್ಷಯ ಮಿತ್ರ ಯೋಜನೆಯಡಿ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಿಗಳಿಗೆ ಧವಸ ಧಾನ್ಯಗಳನ್ನೊಳಗೊಂಡ ಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಸಮಾರಂಭ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು. ಆಹಾರ ಕಿಟ್ ವಿತರಿಸಿದ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸಂಜಿತ್ ಎಸ್.ಶೆಟ್ಟಿ ಮಾತನಾಡಿ, ಸೇವಾ ಕಾರ್ಯಗಳಿಗೆ ಮನಸ್ಸು ಅತಿ ಮುಖ್ಯವಾಗಿದ್ದು, ಆಗ ನಾವು ನೀಡಿದ ಸೇವೆಯೂ ಸಾರ್ಥಕತೆಯನ್ನು ಪಡೆಯುತ್ತದೆ. ಸೇವಾ ಕಾರ್ಯಗಳಲ್ಲಿ
ಮಂಜೇಶ್ವರ : ಶಾಲಾ ವಿದ್ಯಾರ್ಥಿ ಹಾಗೂ ಅದ್ಯಾಪಿಕೆಯರನ್ನು ಹೇರಿ ಕೊಂಡು ಹೋಗುತ್ತಿದ್ದ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಮಗುಚಿ ಬಿದ್ದು 6 ವಿದ್ಯಾರ್ಥಿಗಳು ಹಾಗೂ ಒಬ್ಬಳು ಅಧ್ಯಾಪಿಕೆ ಗಾಯಗೊಂಡಿದ್ದಾರೆ. ಮಂಜೇಶ್ವರ ಪಾವೂರಿನಲ್ಲಿ ಕಾರ್ಯಾಚರಿಸುತ್ತಿರುವ ಫಾತಿಮಾ ಆಂಗ್ಲ ಮಾಧ್ಯಮ ಶಾಲೆಯ ವಾಹನ ಶಾಲಾ ವಿದ್ಯಾರ್ಥಿಗಳನ್ನು ಮರಳಿ ಮನೆಗೆ ಕೊಂಡೊಯ್ಯುತ್ತಿರುವ ಮಧ್ಯೆ ಶನಿವಾರ ಸಂಜೆ ಆರ್ವಾರ್ – ಅಂಬುತ್ತಡಿ ರಸ್ತೆಯ ಸೇತುವೆ ಸಮೀಪ ಚಾಲಕನ ನಿಯಂತ್ರಣ
ಶಟರ್‌ಬಾಕ್ಸ್ ಫಿಲಮ್ಸ್‌ನ ಸಚಿನ್ ಶೆಟ್ಟಿ ಮತ್ತು ಅಭಿ ಶೆಟ್ಟಿ ಅವರು ತಮ್ಮ ಕನಸಿನ ಟ್ರಿಪ್ ಮೂಲಕ ದೇಶ ವಿದೇಶದ ಕಲೆ, ಕರಾವಳಿಯ ಸಂಸ್ಕೃತಿಯನ್ನು ಪಸರಿಸಲು ಮುಂದಾಗಿದ್ದು, ಈ ಬಾರಿ, ನೋರ್ತ್ ಈಸ್ಟ್ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಬಾರಿ ಚೈನಾ, ಮಯನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಪ್ರದೇಶಕ್ಕೆ ಜಿಮ್ಮಿ ವಾಹನದ ಮೂಲಕ ತೆರಳಲಿದ್ದು, ಅಲ್ಲಿನ ಕಲೆ, ಸಂಸ್ಕೃತಿ, ಆಹಾರ, ಇತ್ಯಾದಿ ವಿಚಾರಗಳನ್ನು ತಿಳಿಸುವ ಉದ್ದೇಶದಿಂದ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಆ ದೇಶದ
ಕೇರಳ ಸಮಾಜಂನ ಮಾಜಿ ಅಧ್ಯಕ್ಷ, ಹಿರಿಯ ಸಂಘಟಕ, ತರಂಗಿಣಿ ಖ್ಯಾತಿಯ ಕೆ.ಎಂ ಸಚ್ಚೀಂದ್ರನಾಥ್(89) ಅವರು ನಿಧನ ಹೊಂದಿದ್ದಾರೆ.ಮೂಲತಃ ಕೇರಳದವರಾಗಿರುವ ಅವರು ಕುದ್ರೋಳಿಯಲ್ಲಿ ವಾಸವಾಗಿದ್ದರು. ಭಾರತ್ ಫ್ಲೈವುಡ್‌ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಅವರು ನಂತರ ಕುದ್ರೋಳಿಯಲ್ಲಿ ಮಂಗಳೂರು ಫ್ಲೈವುಡ್ ಉದ್ಯಮ ನಡೆಸುತ್ತಿದ್ದರು.ತರಂಗಿಣಿ ಎಂಬ ಸಂಸ್ಥೆಯ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಮಂಗಳೂರಿನಲ್ಲಿ ನಿರಂತರವಾಗಿ ಆಯೋಜಿಸುತ್ತಿದ್ದರು.
ಮೂಡುಬಿದಿರೆಯ ಪೊನ್ನೆಚಾರಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದ ಸಮಿತಿಯು ಶಾರದಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಲಂಗಾರು ಶ್ರೀ ಈಶ್ವರ ಭಟ್ ಅವರನ್ನು ಶಾರದಾನುಗ್ರಹ -2024 ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಪೊನ್ನೆಚಾರಿ ಲಕ್ಷ್ಮಿ ವೆಂಕಟರಮಣ ದೇವಾಲಯದ ಆಡಳಿತ ಮೊಕ್ತೇಸರರು ಪೊನ್ನೆಚಾರಿ ಶಾರದಾ ಪೂಜಾ ಮಹೋತ್ಸವ ಹಾಗೂ ಮೂಡುಬಿದಿರಿ ದಸರಾ ಉತ್ಸವದ ರೂವಾರಿ ಅಶೋಕ ಕಾಮತ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಐದು ಶತಮಾನಗಳ ಇತಿಹಾಸವನ್ನು ಹೊಂದಿರುವ ಪೊನ್ನಚಾರಿ




























