ಪುತ್ತೂರು: ಮದ್ಯಪಾನಕ್ಕೆ ಪಂಚೇದ್ರಿಯಗಳು ಆಕರ್ಷಣೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಕುಡಿತ ನಿಲ್ಲಿಸುವ ವಿಚಾರದಲ್ಲಿ ಗಟ್ಟಿ ಮತ್ತು ದೃಡವಾದ ಮನಸ್ಸು, ಚಂಚಲತೆ ಇಲ್ಲದ ಹತೋಟಿ ಬೇಕಾಗಿದೆ. ಮದ್ಯವರ್ಜನ ಶಿಬಿರದಲ್ಲಿ ಭಾಗವಿಸಿದ ಎಲ್ಲರೂ ಕುಡಿತ ಬಿಡುವ ಬಗ್ಗೆ ಸ್ವಯಂ ಮೂಗುದಾರ ಹಾಕಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭವು ಪಾಂಡೇಶ್ವರದ ಡಿಎಆರ್ ಪೆರೇಡ್ ಮೈದಾನ ಜರುಗಿತು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಖ್ಯ ಅಗ್ನಿಶಾಮಕ ಅಧಿಕಾರಿಗಳಾದ ತಿರುಮಲೇಶ್ ಬಿ.ಎಂ., ಕ್ರೀಡಾಪಟುಗಳು ಬಹಳ ಆಸಕ್ತಿಯಿಂದ ಭಾಗವಹಿಸಿರುತ್ತಾರೆ. ಕ್ರೀಡೆಯಿಂದ ದೇಹ ಮತ್ತು ಮನಸ್ಸಿನ ನೆಮ್ಮದಿ ಮತ್ತು ಆರೋಗ್ಯಕ್ಕೆ ಒಳಿತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ
ಮಂಗಳೂರು: ಆಗಸ್ತ್ಯ ಮುನಿಗಳಿಂದ ಸ್ಥಾಪಿಸಲ್ಪಟ್ಟ ಏಕೈಕ ಕ್ಷೇತ್ರವೊಂದು ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪದ ದರ್ಬೆಯಲ್ಲಿ ಪತ್ತೆಯಾಗಿದ್ದು ಇದೀಗ ಪುನರುತ್ಥಾನಕ್ಕೆ ಸಜ್ಜಾಗುತ್ತಿದೆ. ದರ್ಬೆ ದೇವಿ ಪುರ ಎಂಬಲ್ಲಿನ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ದೈವೀ ಸಾನಿಧ್ಯಗಳಿರುವ ಅಂಶಗಳು ಪ್ರಶ್ನಾಚಿಂತನೆಯಲ್ಲಿ ಬೆಳಕಿಗೆ ಬಂದಿದ್ದು ಇದೀಗ ಸಾನಿಧ್ಯವನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರೀ ಕ್ಷೇತ್ರವಾಗಿ ಪುನರ್ ನಿರ್ಮಿಸಲು ಯೋಜನೆ
ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂ ನಿಂದ ನೀರು ಹರಿದು ಬರುವ ರಭಸಕ್ಕೆ ಕೆಳಭಾಗದ ಬಲ ಪಾರ್ಶ್ವ ದಲ್ಲಿರುವ ಕೃಷಿ ಭೂಮಿ ಕೊಚ್ಚಿ ಹೋಗಿ ರೈತರು ನಷ್ಟ ಅನುಭವಿಸಿದ್ದು ಸೂಕ್ತ ಪರಿಹಾರ ಹಾಗೂ ಪರ್ಯಾಯ ವ್ಯವಸ್ಥೆ ಒದಗಿಸಿಕೊಡಿ ಎಂದು ಆಗ್ರಹಿಸಿ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ತುಂಬೆ ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿದರು. ಡ್ಯಾಂನ ಪ್ರವೇಶ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳಕ್ಕೆ ಬಾರದೆ ಇಲ್ಲಿಂದ
ಬೈಂದೂರಿನ ಹೊಸೂರಿನ ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ವಿವಿಧ ವೇಷಭೂಷಣ ಚಂಡೆ ವಾದನ ವಾದ್ಯಗೋಷ್ಠಿ ಮೆರವಣಿಗೆ ಮೆರುಗನ್ನು ಹೆಚ್ಚಿಸಿತು. ಬೈಂದೂರು ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಮರೆಯಲಾಗದ ಪ್ರಾಚೀನ ಕಾಲದ ವಸ್ತು ಸಂಗ್ರಾಲಯವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಪೂಜಾರಿ ಚಿತ್ರಕಲಾ ಪ್ರದರ್ಶನ ಕೇಂದ್ರವನ್ನು ಉದ್ಘಾಟಿಸಿದರು. ಶ್ರೀಮಹಾಲಿಂಗೇಶ್ವರ
ಬಹರೈನ್ ಅನಿವಾಸಿ ಮೊಗವೀರ ಸಮುದಾಯದ ಸಂಘಟನೆಯಾದ “ಮೊಗವೀರ್ಸ್ ಬಹರೈನ್ ” ಸಂಘಟನೆಯು “ಅಟಿಲ್” ಎನ್ನುವಂತಹ ವಿಶಿಷ್ಟ ಆಹಾರಗಳ ಮೇಳವನ್ನು ಬಹರೈನ್ ಪ್ಯಾಪಿಲಾನ್ ರೆಸ್ಟೋರೆಂಟಿನ ಸಭಾಂಗಣದಲ್ಲಿ ಆಯೋಜಿಸಿದ್ದರು. “ಮೊಗವೀರ್ಸ್ ಬಹರೈನ್ ” ಸಂಘಟೆನೆಯ ಸ್ಥಾಪಕ ಸದಸ್ಯರೂ, ಸಂಘಟೆನೆಯ ಉಪಾಧ್ಯಕ್ಷರೂ ಆಗಿ ಕಾರ್ಯನಿರ್ವಹಿಸಿ ಜನಾನುರಾಗಿಯಾಗಿ ಅಪಾರ ಮಿತ್ರ ಗೆಳೆಯರ ಬಳಗವನ್ನು ಹೊಂದಿ ಅಕಾಲಿಕ ನಿಧನ ಹೊಂದಿದ್ದ ದಿವಂಗತ ತೀರ್ಥ
ಬಹರೈನ್ ಕನ್ನಡ ಸಂಘ ಕೇವಲ ಕನ್ನಡಿಗರ ಸಂಘಟನೆಯಲ್ಲ ಇದು ಕನ್ನಡ ಕಲೆ, ಸಂಸ್ಕ್ರತಿ ,ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಂತಹ ಒಂದು ಪರಿಣಾಮಕಾರಿಯಾದ ಮಾಧ್ಯಮ. ಇಲ್ಲಿರುವ ನಮ್ಮ ಸಂಸ್ಕ್ರತಿಯ ಅಧ್ಯಯನ ಕೇಂದ್ರಗಳು ನಿಜವಾಗಿಯೂ ಕನ್ನಡ ಭಾಷೆ, ಕಲೆ, ಸಂಸ್ಕ್ರತಿಯ ಮೇಲೆ ಬಹರೈನ್ ಕನ್ನಡಿಗರಿಗಿರುವ ಅನನ್ಯ ಪ್ರೀತಿಗೆ ಸಾಕ್ಷಿಯಾಗಿದೆ ” ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು. ಅವರು, ಕನ್ನಡ ಸಂಘವು ಸಭಾಧ್ಯಕ್ಷರ ಬಹರೈನ್ ಭೇಟಿಯ
ವಿಜ್ಞಾನಿಗಳು ಜಗತ್ತಿನಲ್ಲಿ 3,90,900 ಹೂಬಿಡುವ ಸಸ್ಯಗಳನ್ನು ಗುರುತಿಸಿದ್ದಾರೆ. ಭಾರತದಲ್ಲಿ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ 46,000 ಹೂಬಿಡುವ ಸಸ್ಯಗಳನ್ನು ಗುರುತಿಸಿದೆ. ಸಸ್ಯಗಳಲ್ಲಿ ಸಾಮಾನ್ಯ ಮತ್ತು ಕ್ಷಣಿಕ ಅವಧಿಯವು ಎಂದು ಎರಡು ವಿಧ. ನಾವು ಕಾಡು ಗುಡ್ಡಗಳಲ್ಲಿ ಗುರುತೇ ಇಲ್ಲದ ಎಷ್ಟೋ ಹೂ ಗಿಡ ಕಾಯಿಗಳನ್ನು ಕಂಡಿದ್ದೇವೆ. ಮಂಗಳೂರಿನ ಯೆಯ್ಯಾಡಿ ಬಾರೆಬಯ್ಲು ರಸ್ತೆ ಬದಿ ಅರ್ಧ ಕಿಲೋಮೀಟರ್‍ನಲ್ಲಿ ಕಂಡ ಕೆಲವು ಹೆಸರು ತಿಳಿಯದ ಹೂವುಗಳು ಇವು.
ಇತ್ತೀಚೆಗೆ ಸಂಸತ್ತಿನಲ್ಲಿ ಪಾಸಾದ ಮೂರು ಕ್ರಿಮಿನಲ್ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕುವ ಮೂಲಕ ಅವನ್ನು ಕಾನೂನು ಆಗಿಸಿದರು. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆ ಇವೇ ಆ ಮೂರು. 1872ರ ಬ್ರಿಟಿಷರ ಕಾನೂನುಗಳಿಗೆ ಈ ಮೂಲಕ ಇನ್ನಷ್ಟು ತಿದ್ದುಪಡಿ ತರಲಾಗಿದೆ.
ನೆಲ್ಯಾಡಿ: ಪೆರಿಯಶಾಂತಿಯ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯರೂ ತೀವ್ರವಾದ ಗಾಯಗೊಂಡ ಘಟನೆ ಸಂಭವಿಸಿದೆ. ಕಡಬ ಸಮೀಪದ ಕುಟ್ರುಪಾಡಿ ನಿವಾಸಿಯಾದ ರಾಜು, ಅ್ಯನಿ, ಸಿನ್ಸಿ, ಮೇರಿ ಎಂಬುವರು ಕೆನಡಕ್ಕೆ ತೆರಳುವ ಮಗನನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಅ್ಯನಿ ಎಂಬ ಮಹಿಳೆಯ ಕೈ ಹಾಗೂ ಕಾಲುಳಿಗೆ ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಮಂಗಳೂರಿನ




























