ನವದೆಹಲಿ: ಬ್ರಿಟಿಷರ ಕಾಲದ ಕ್ರಿಮಿನಲ್ ಕಾಯ್ದೆಗೆ ತಿದ್ದುಪಡಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ
ಇತ್ತೀಚೆಗೆ ಸಂಸತ್ತಿನಲ್ಲಿ ಪಾಸಾದ ಮೂರು ಕ್ರಿಮಿನಲ್ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕುವ ಮೂಲಕ ಅವನ್ನು ಕಾನೂನು ಆಗಿಸಿದರು. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆ ಇವೇ ಆ ಮೂರು. 1872ರ ಬ್ರಿಟಿಷರ ಕಾನೂನುಗಳಿಗೆ ಈ ಮೂಲಕ ಇನ್ನಷ್ಟು ತಿದ್ದುಪಡಿ ತರಲಾಗಿದೆ.