ಬಂಟ್ವಾಳ :- ಅಗ್ರಾರ್ ದರ್ಬೆಯಲ್ಲೊಂದು ಅಪರೂಪದ ದೈವೀ ತಾಣ
ಮಂಗಳೂರು: ಆಗಸ್ತ್ಯ ಮುನಿಗಳಿಂದ ಸ್ಥಾಪಿಸಲ್ಪಟ್ಟ ಏಕೈಕ ಕ್ಷೇತ್ರವೊಂದು ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪದ ದರ್ಬೆಯಲ್ಲಿ ಪತ್ತೆಯಾಗಿದ್ದು ಇದೀಗ ಪುನರುತ್ಥಾನಕ್ಕೆ ಸಜ್ಜಾಗುತ್ತಿದೆ.
ದರ್ಬೆ ದೇವಿ ಪುರ ಎಂಬಲ್ಲಿನ ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ದೈವೀ ಸಾನಿಧ್ಯಗಳಿರುವ ಅಂಶಗಳು ಪ್ರಶ್ನಾಚಿಂತನೆಯಲ್ಲಿ ಬೆಳಕಿಗೆ ಬಂದಿದ್ದು ಇದೀಗ ಸಾನಿಧ್ಯವನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರೀ ಕ್ಷೇತ್ರವಾಗಿ ಪುನರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಪೌರಾಣಿಕ ಹಿನ್ನೆಲೆಯೊಂದಿಗೆ ಇತಿಹಾಸದಲ್ಲಿ ವೈಭವದಿಂದ ಮೆರೆದ ತುಳುನಾಡಿನಲ್ಲೇ ಅತ್ಯಂತ ಅಪರೂಪದ ಈ ದೈವೀ ಸಾನಿಧ್ಯವನ್ನು ಆಗಸ್ತ್ಯ ಮುನಿಗಳು ಯಜ್ಞದ ಮೂಲಕ ಉದ್ಬವಿಸಿ ಪ್ರತಿಷ್ಠಾಪಿಸಿದರು. ನಂತರ ನಾಥ ಪಂಥದವರಿಗೆ ತಪಸ್ಸು ಹಾಗೂ ಪೂಜೆಗಾಗಿ ಇಲ್ಲಿನ ಸಾನಿಧ್ಯ ಮತ್ತು ಭೂಮಿಯನ್ನು ಬಿಟ್ಟು ಕೊಟ್ಟರೆಂಬ ಪ್ರತೀತಿ ಇದೆ.
ಕಾಲಕ್ರಮೇಣ ನಾಥಪಂಥದವರು, ಪುಲಿನಾಪುರದ ಅರಸ ಸುರಥ ಮಹಾರಾಜ ಹಾಗೂ ಕಾರ್ಕಳದ ಅರಸ ಬೈರವ ಸೂಡರ ಕಾಲದಲ್ಲಿ ವೈಭವದಿಂದ ಮೆರೆದ ಐತಿಹಾಸಿಕ ಹಿನ್ನೆಲೆಯು ಶ್ರೀ ಕ್ಷೇತ್ರಕ್ಕಿದ್ದು ಪೆÇಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಸಾನಿಧ್ಯಕ್ಕೂ ಇಲ್ಲಿಗೂ ಅವಿನಾಭಾವ ಸಂಬಂಧವಿರುವುದು ಗಮನಾರ್ಹ ಅಂಶವಾಗಿದೆ.
ಕಾಲಕ್ರಮೇಣ ಕಾಲಗರ್ಭದ ಸುಳಿಗೆ ಸಿಲುಕಿದ ಈ ಸಾನಿಧ್ಯದ ಸ್ಥಳದಲ್ಲಿ ಕುಟುಂಬವೊಂದು ವಾಸವಾಗಿ ದೈವದೇವರ ಸೇವೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ದೇವಿ ಉಪಾಸಕರಾದ ಶ್ರೀಮತಿ ರಂಜಿತಾ ದೀಕ್ಷಿತ್ ಅವರು ದರ್ಶನ ಸೇವೆ, ಪ್ರಶ್ನಾಚಿಂತನೆಯ ಮೂಲಕ ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಊರ-ಪರವೂರ ಭಕ್ತರು ಸಾನಿಧ್ಯಕ್ಕೆ ಆಗಮಿಸಿ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳುತ್ತಿದ್ದಾರೆ.
ಇದೀಗ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಸಾನಿಧ್ಯವನ್ನು ಪುನರ್ ನಿರ್ಮಿಸಲು ಸಂಕಲ್ಪಿಸಲಾಗಿದ್ದು ಗರ್ಭಗುಡಿ, ಸುತ್ತು ಪೌಳಿ, ಮುಖಮಂಟಪ, ಧ್ವಜಸ್ತಂಭ ನಿರ್ಮಾಣ, ಆಗಸ್ತ್ಯ ಮಹರ್ಷಿಗಳ ಗುರುಪೀಠ ಸ್ಥಾಪನೆ, ಸಾನಿಧ್ಯದ ಪರಿವಾರ ಶಕ್ತಿಗಳಾದ ಕ್ಷೇತ್ರಪಾಲ, ಭದ್ರಕಾಳಿ,ಶ್ರೀ ನಾಗದೇವರು, ಚಾಮುಂಡಿ-ಗುಳಿಗ, ಕೊರಗಜ್ಜ ಹಾಗೂ ಧರ್ಮದೈವಗಳಿಗೆ ಸಾನಿಧ್ಯ ಸಹಿತ ಸಕಲ ಮೂಲಭೂತ ಸೌಕರ್ಯಗಳನ್ನು ಅನುಷ್ಠಾನಗೊಳಿಸಲು ಉದ್ಧೇಶಿಸಲಾಗಿದೆ.
ಶ್ರೀ ಜ್ವಾಲಾ ಕರಾಲ ಭದ್ರಕಾಳಿ ಅಮ್ಮನವರ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ವಸಂತ್ ಪಂಡಿತ್ ಕೊಯಿಲ, ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ವಿಶ್ವನಾಥ ಕರ್ಕೆರ, ಶ್ರೀ ದೇವಿಯ ಉಪಾಸಕರಾದ ಶ್ರೀಮತಿ ರಂಜಿತಾ ದೀಕ್ಷಿತ್ ಅವರ ನೇತೃತ್ವದಲ್ಲಿ ಕ್ಷೇತ್ರದ ಸರ್ವ ಧರ್ಮಿಯ ಭಕ್ತಾದಿಗಳ ಸಹಕಾರದೊಂದಿಗೆ ಶೀಘ್ರದಲ್ಲಿ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯ ನಡೆಯಲಿದೆ.
ಕ್ಷೇತ್ರದ ಪುನರ್ ನಿರ್ಮಾಣ ಯೋಜನೆಗಳು ಯಶಸ್ವಿಯಾಗಿ ನೆರವೇರಲು ಸಹೃದಯಿ ಸದ್ಭಕ್ತರ ತನು-ಮನ-ಧನದ ಆತ್ಮಪೂರ್ವಕ ಸಹಕಾರವನ್ನು ನಿರೀಕ್ಷಿಸಲಾಗಿದೆ.
ಕ್ಷೇತ್ರದ ಅಭಿವೃದ್ಧಿಗೆ ದೇಣಿಗೆ ನೀಡುವವರು ಹೆಚ್ ಡಿ ಎಫ್ ಸಿ ಬ್ಯಾಂಕ್ ಬಿ.ಸಿ.ರೋಡು ಶಾಖೆಯ ಖಾತೆ ನಂಬ್ರ 502000067243738( IFSC Code: HDFC0003316) ಗೆ ಪಾವತಿಸಬಹುದಾಗಿದೆ.