ಸಾರಿಗೆ ಇಲಾಖೆಗೆ ಮತ್ತು ಸಾರಿಗೆ ಸಚಿವರಿಗೆ ಚಾಲಕರಿಗಾಗಿ 1. ಚಾಲಕರ ನಿಗಮ ಮಂಡಳಿ ಮಾಡಿ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಕುಟುಂಬ ನಿರ್ವಹಣೆಗೆ ಅನುಕೂಲ ಅನುಕೂಲ ಮಾಡಿಕೊಡುವಂತೆ 2. ಚಾಲಕರ ದಿನಾಚರಣೆ ಎಚ್ ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಘೋಷಣೆಯಾಗಿದ್ದು ಪ್ರತಿ ಜಿಲ್ಲೆಯಲ್ಲಿ 10 ಚಾಲಕರಿಗೆ ಸಾರಥಿ ನಂಬರ್ ಒನ್ ಪ್ರಶಸ್ತಿ ಜೊತೆಗೆ 25,000 ಧನಸಹಾಯ ನೀಡುವ
ಕುಂದಾಪುರ: ಜಗತ್ಪ್ರಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ಬ್ರಹ್ಮ ರಥವನ್ನು ಲೋಕಾರ್ಪಣೆ ಮಾಡಲಾಯಿತು. ಕೋಟೇಶ್ವರದಿಂದ ಪುರ ಮೆರವಣಿಗೆಯಲ್ಲಿ ಕೊಲ್ಲೂರಿಗೆ ಬಂದಿದ್ದ ಬ್ರಹ್ಮ ರಥವನ್ನು ದೇವಸ್ಥಾನದ ಮುಂಭಾಗದಲ್ಲಿ ಇರಿಸಲಾಗಿದ್ದು, ಗುರುವಾರ ಬೆಳಿಗ್ಗೆ ಶುದ್ದಾದಿ ಕಾರ್ಯಗಳು ಮುಗಿದ ಬಳಿಕ ಬ್ರಹ್ಮ ರಥದ ಹಸ್ತಾಂತರ ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಋತ್ವೀಜರ ನೇತೃತ್ವದಲ್ಲಿ ಹೋಮ ನಡೆಸಲಾಯಿತು. ಬಳಿಕ ಹಳೆಯ ರಥದ ವಿಸರ್ಜನೆ ಹಾಗೂ ಕಳೆ ಇಳಿಸುವ ಸಲುವಾಗಿ
ಬಂಟ್ವಾಳ: ತಾಲೂಕಿನ ನಾವೂರ ಗ್ರಾಮದ ಕೂಡಿಬೈಲು ಎಂಬಲ್ಲಿ 12 ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳ” ವು ಮಾ.4 ರಂದು ವೈಭವಯುತವಾಗಿ ನಡೆಯಲಿದೆ ಎಂದು ಮಾಜಿ ಸಚಿವ, ಕಂಬಳ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ. ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಬಳದ ಯಶಸ್ವಿಗೆ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ ಎಂದರು. ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳ ವತಿಯಿಂದ ಧರ್ಮಸ್ಥಳದ
ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಗಳ ಅಸಮರ್ಪಕ ಕಾರ್ಯ ನಿರ್ವಾಹಣೆ ಹಾಗೂ ಅಸಮರ್ಪಕ ಅನುಷ್ಠಾನದ ಬಗ್ಗೆ ಕಳೆದ ಅನೇಕ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗುತ್ತಿದ್ದುಗುರುವಾರ ನಡೆದ ಸಾಮಾನ್ಯ ಸಭೆಯಲ್ಲೂ ಸಿಸಿ ಕ್ಯಾಮರ ನಿರ್ವಹಣೆಯ ಬಗ್ಗೆ ಹಿಂದಿನ ಸಭೆಯ ನಿರ್ಣಯ ಕಾರ್ಯಗತವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ವಿರೋಧ ಪಕ್ಷದ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಅಧ್ಯಕ್ಷರ ಪೀಠದ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
ಉಜಿರೆ ಎಸ್.ಡಿ. ಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಥಮ ವರ್ಷದ ಎಂ.ಸಿ.ಜೆ ವಿದ್ಯಾರ್ಥಿಗಳಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ಕ್ರೈಂ ರಿಪೋರ್ಟರ್ ಸುನಿಲ್ ಧರ್ಮಸ್ಥಳ ವೃತ್ತಿ ಕುರಿತು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಪೋಲಿಸ್ ಸ್ತರಗಳು ಮತ್ತು ಅದರೊಳಗಿನ ವಿಭಾಗಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಸುದ್ದಿಗಾರ ರಾಗ ಬಯಸುವವರು ಹೇಗೆ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆ
ದೆಹಲಿಯಲ್ಲಿ ನಡೆದ 2023 ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಉಜಿರೆ ಎಸ್ ಡಿ ಎಮ್ ಕಾಲೇಜಿನ ನೌಕಾ ವಿಭಾಗದ 6 ಕೆಡೆಟ್ ಗಳು ಶಿಪ್ ಮೊಡೆಲಿಂಗ್ ವಿಭಾಗದಲ್ಲಿ ಬಂಗಾರದ ಪದಕವನ್ನು ಗಳಿಸಿ ಸಂಸ್ಥೆಗೆ ಗೌರವವನ್ನು ತಂದಿದ್ದಾರೆ. ಪಿಓ ಕೆಡೆಟ್ ಶ್ರೀರಾಮ ಮರಾಠೆ ಮತ್ತು ಪಿಓ ಕೆಡೆಟ್ ಅನನ್ಯಾ ಕೆ.ಪಿ ಇವರು ಪವರ್ ಮಾಡೆಲ್ ವಿಭಾಗದಲ್ಲಿ ಬಂಗಾರದ ಪದಕವನ್ನು ಸಂಪಾದಿಸಿದ್ದಾರೆ. ಇಡೀ ದೇಶದ 17 ಡೈರೆಕ್ಟರೇಟ್ ನವರು ಸಿದ್ಧಪಡಿಸಿ ಪರೀಕ್ಷೆಗೊಳಪಡಿಸಿದ ಈ ಸ್ಪರ್ಧೆಗಳಲ್ಲಿ ಇವರು
ಮಂಗಳೂರು: ಬಹುಭಾಷಾ ನಟ ಡಾ. ಸುಮನ್ ತಲ್ವಾರ್‌ಗೆ ಮಂಗಳೂರಿನ ಅಭಿನಂದನಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಗುರುವಾರ ‘ಸುಮನ ತಮ್ಮನ’ ಅಭಿನಂದನಾ ಕಾರ್ಯಕ್ರಮ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಕಲಾರಾಧನೆಯ ಮೂಲಕ ದಕ್ಷಿಣ ಭಾರತದ 1 ಭಾಷೆಗಳಲ್ಲಿ 700ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ ಮಂಗಳೂರಿನ ನಟ ಸುಮನ್ ತಲ್ವಾರ್ ತುಳುನಾಡಿನ ಕಲಾ ರಾಯಭಾರಿಯಾಗಿದ್ದಾರೆ. ತುಳುನಾಡಿನ ಹಲವು ಶ್ರೇಷ್ಠ ನಟ-ನಟಿಯರು ವಿವಿಧ ಭಾಷೆಗಳ ಸಿನೆಮಾದಲ್ಲಿ ಅಭಿನಯಿಸಿ
ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ (ಮೌಲ್ಯಮಾಪನ) ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಜು ಕೃಷ್ಣ ಚಲ್ಲಣ್ಣವರ್ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಸರ್ಕಾರದ ಅಧಿಸೂಚನೆಯಂತೆ ಕುಲಸಚಿವ (ಮೌಲ್ಯಮಾಪನ) ರಾಗಿದ್ದ ಪ್ರೊ. ಪಿ ಎಲ್ ಧರ್ಮ ಅವರು ನೂತನ ಕುಲಸಚಿವರಿಗೆ ಅಧಿಕಾರ ಹಸ್ತಾಂತರಿಸಿದರು. ಪ್ರೊ. ಪಿ ಎಲ್ ಧರ್ಮ ಅವರು ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಮುಂದುವರಿಯಲಿದ್ದಾರೆ. ಅನ್ವಯಿಕ
ಮೂಡುಬಿದಿರೆ: ಯಕ್ಷರಂಗದ ಭಾಗವತಿಕೆಯ ಭೀಷ್ಮ ಎಂದೇ ಖ್ಯಾತರಾಗಿರುವ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು(86) ಗುರುವಾರ ಸಾಯಂಕಾಲ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಮಾರೂರಿನಲ್ಲಿರುವ ನೂಯಿ ಸ್ವಗೃಹದಲ್ಲಿ ನಿಧನರಾದರು. ಕಳೆದ ಕೆಲವು ದಶಕಗಳಿಂದ ಯಕ್ಷಗಾನ ಭಾಗವತಿಕೆಯಲ್ಲಿ ತಮ್ಮ ಕಂಚಿನ ಕಂಠದ ಮೂಲಕ ಸುಪ್ರಸಿದ್ಧರಾಗಿದ್ದ ಅವರು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು.ವರ್ಷ ಪ್ರಾಯದ ಭಾಗವತರು ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ ನಿಧನರಾಗಿದ್ದಾರೆ.ನಾಲ್ವರು
ಶಿವಪಾಡಿ ಶ್ರೀ ಉಮಾಮಹೇಶ್ವರ ಸನ್ನಿಧಿಯಲ್ಲಿ ಫೆಬ್ರವರಿ 18 ರಂದು ಆಚರಿಸಲ್ಪಡುವ ಮಹಾಶಿವರಾತ್ರಿಯ ಅಂಗವಾಗಿ ‘ಮಹಾಶಿವರಾತ್ರಿ ಮಹೋತ್ಸವ’ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 06:30 ರಿಂದ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಹಾಗೂ ಸರ್ವ ಸೇವೆಗಳು ನೆರವೇರಲಿವೆ. ರಾತ್ರಿ 10:30 ರಿಂದ ಸಹಸ್ರ ಬಿಲ್ವಾರ್ಚನೆ, ಮಹಾರಂಗಾ ಪೂಜಾದಿಗಳು ಜರುಗಲಿದ್ದು, ರಾತ್ರಿ 09:30 ರಿಂದ ಪ್ರಾತಃಕಾಲದವರೆಗೆ ದೇವಸ್ಥಾನದ ವಠಾರದಲ್ಲಿ ಶ್ರೀ ಮಯೂರ



























