ಬೆಳ್ತಂಗಡಿ: ಕರ್ನಾಟಕ ಸರಕಾರ ಪ್ರಸ್ತುತ ಪಡಿಸುವ 2022ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಶ್ರೀಧರ್ ಕುಲಾಲ್ ಆಯ್ಕೆಯಾಗಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಆಗಣ್ಯ ಸಾಧನೆಯನ್ನು ಮಾಡಿ ಯಶಸ್ವಿ ಕ್ರೀಡಾಪಟುವಾಗಿ ಹೊರ ಹೊಮ್ಮಿದ ಇವರನ್ನು ಸರ್ಕಾರ ಗುರುತಿಸಿ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕಟೀಲು ಮೇಳದ ಐದನೇ ಮೇಳದ ಚೌಕಿ ಸಹಾಯಕ ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ 45 ವರ್ಷದ ಅಚ್ಯುತ ನಾಯಕ್ ಅವರು ಹೃದಯ ಘಾತದಿಂದ ನಿಧನರಾದ ಮೇಳದ ಚೌಕಿ ಸಹಾಯರಾಗಿದ್ದಾರೆ. ಕಟೀಲು ಮೇಳದ ಯಕ್ಷಗಾನವು ಪ್ರಸ್ತುತ ಕಾಲಮಿತಿ ಯಕ್ಷಗಾನವಾಗಿದ್ದು, ರಾತ್ರಿ 1 ಗಂಟೆಯ ಸುಮಾರಿಗೆ ಯಕ್ಷಗಾನ ಮುಗಿದು ಪರಿಕರಗಳನ್ನು ಜೋಡಿಸುತ್ತಿದ್ದ ವೇಳೆ ಅಚ್ಯುತ ಅವರು ಏಕಾಏಕಿ ಅಸ್ವಸ್ಥತೆಗೊಂಡಿದ್ದಾರೆ ಎನ್ನಲಾಗಿದೆ. ಆಗ ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು
ಮೀನುಗಾರ ಮುಖಂಡರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ತಿಂಗಳಿಗೆ 300 ಲೀಟರ್ ಸೀಮೆಎಣ್ಣೆಯನ್ನು ಉಚಿತವಾಗಿ ವಿತರಿಸಲು ಆರಂಭಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಸೀಮೆಎಣ್ಣೆ ಸರಿಯಾಗಿ ವಿತರಣೆ ಆಗುತ್ತಿಲ್ಲ. ಕಳೆದ 10 ತಿಂಗಳಿನಿಂದ ಒಂದೇ ಒಂದು ಲೀಟರ್ ಸೀಮೆಎಣ್ಣೆ ಸಿಕ್ಕಿಲ್ಲ ಎಂದವರು ಹೇಳಿದರು. ಇತ್ತೀಚೆಗೆ ಸೀಮೆಎಣ್ಣೆ ಬಿಡುಗಡೆಗಾಗಿ ಮೀನುಗಾರರು
ಬಂಟ್ವಾಳ: ಚಳಿಗಾಲದಲ್ಲಿ ತಣ್ಣೀರ ಸ್ನಾನ ಮಾಡಲು ನಾವು ಹಿಂದೆಟ್ಟು ಹಾಕುತ್ತೇವೆ. ಅಂತಹುದರಲ್ಲಿ ಮೈ ಕೊರೆಯುವ ಚಳಿ, ಮೈನಸ್ 18 ಡಿಗ್ರೆ ಸೆಲ್ಸಿಯಸ್ ವಾತವರಣವಿರುವ ಅರುಣಾಚಲ ಪ್ರದೇಶದ ಕೊರೆಯುವ ಚಳಿಯಲ್ಲಿ ಗಡಿ ಕಾಯುವ ನಮ್ಮ ದೇಶದ ವೀರಯೋಧರ ನಿತ್ಯದ ಬದುಕು ಹೇಗಿರಬಹುದು? ಇದಕ್ಕೊಂದು ತಾಜಾ ಉದಾಹರಣೆ ಈ ವಿಡಿಯೋವೊಂದು ಇಲ್ಲಿದೆ. ಭಾರತ ಚೀನಾ ಗಡಿಭಾಗವಾಗಿರುವ ಅರುಣಚಲಪ್ರದೇಶದ ಎತ್ತರದ ಪರ್ವತ ಭಾಗದಲ್ಲಿ ನಮ್ಮ ವೀರ ಯೋಧರು ಗಡಿಕಾಯುತ್ತಿದ್ದಾರೆ. ಕೊರೆಯುವ ಚಳಿಗೆ
ಸುರತ್ಕಲ್ ಟೋಲ್ ಗೇಟ್ ದಾಟಿ ಮುಲ್ಕಿ, ಕಿನ್ನಿಗೋಳಿ, ಮುಕ್ಕ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳು ಪ್ರಯಾಣಿಕರ ಟಿಕೆಟ್ ಮೇಲೆ ಹಾಕಿದ್ದ ಟೋಲ್ ತೆರಿಗೆಯನ್ನು ತಕ್ಷಣವೇ ಕೈಬಿಟ್ಟು ಪ್ರಯಾಣ ದರವನ್ನು ಇಳಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಏಳು ವರ್ಷಗಳ ಹಿಂದೆ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಆರಂಭಗೊಂಡಾಗ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ ಮುಂತಾದ ಮಂಗಳೂರು ಗ್ರಾಮೀಣ ಭಾಗಗಳಿಗೆ ಸಂಚರಿಸುತ್ತಿದ್ದ ಖಾಸಗಿ
ಮಂಜೇಶ್ವರ: ಉದ್ಯಾವರ ಎಎಚ್‍ಎಸ್ ತಂಡದ ಪ್ರಾಯೋಜಕತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿನ ಸಹಕಾರದೊಂದಿಗೆ ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್ ನಲ್ಲಿ ಸಂಭ್ರಮದ ಬೀಚ್ ಫೆಸ್ಟ್ ಗೆ ಚಾಲನೆ ದೊರಕಿತು. ಇನ್ನು ಮುಂದಿನ ಒಂದು ತಿಂಗಳಿನಲ್ಲಿ ನಡೆಯಲಿರುವ ಬೀಚ್ ಫೆಸ್ಟ್ ಮಂಜೇಶ್ವರದ ಬೀಚ್‍ನಲ್ಲಿ ಉತ್ಸವದ ಸಂಭ್ರಮವಾಗಲಿದೆ. ಈ ಸಲದ ಮಂಜೇಶ್ವರ ಕಂಡು ಕೊಳಕೆ ಬೀಚ್ ಫೆಸ್ಟ್ ವಿವಿಧ ವಿನ್ಯಾಸಗಳನ್ನು ಹೊಂದಿದ್ದು, ಮಕ್ಕಳಿಗೆ ಹಾಗೂ
ಪುತ್ತೂರು: ಮತದಾರನ ಗುರುತಿನ ಚೀಟಿಯನ್ನು ಅನಧಿಕೃತವಾಗಿ ವಿತರಣೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಜನಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಅಂಗಡಿಗೆ ಬೀಗ ಹಾಕಿದ ಘಟನೆ ನಡೆದಿದೆ. ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಜನಸೇವಾ ಕೇಂದ್ರದ ಮೇಲೆ ದಾಳಿ ಮಾಡಿದೆ. ತಹಸೀಲ್ದಾರ್ ನಿಸರ್ಗ ಪ್ರಿಯ ಮತ್ತು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ
ಉಳ್ಳಾಲ: `ರಮ್ ಕುಡಿದು ಪೆಪ್ಪರ್ ಹಾಕಿ ಮೊಟ್ಟೆ ತಿಂದರೆ ಕೊರೊನಾ ದೂರವಾಗುತ್ತದೆ’ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿ ದೇಶಾದ್ಯಂತ ಸುದ್ಧಿಯಾದ ಉಳ್ಳಾಲ ನಗರಸಭೆ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ ಇವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಆದೇಶ ಹೊರಡಿಸಿದೆ. ಮೊನ್ನೆ ನಡೆದ
ಬೆಂಗಳೂರು, ಡಿ. 5: ರಾಜ್ಯ ವ್ಯಾಪ್ತಿಯ ಡಿಜಿಟಲ್ ಮಾಧ್ಯಮ ಸಂಘಟನೆ ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್’ ಇದರ ಉದ್ಘಾಟನೆ, ಲಾಂಛನ ಅನಾವರಣ ಹಾಗೂ ವಾರ್ಷಿಕ ಮಾಧ್ಯಮ ಸಾಧನಾ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಬೆಂಗಳೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಚಿತ್ರನಟ, ಸಂಗೀತ ನಿರ್ದೇಶಕ ವಿ. ಮನೋಹರ್, ವಿಜಯ ಕರ್ನಾಟಕ ಆನ್ ಲೈನ್ ಎಡಿಟರ್ ಪ್ರಸಾದ್ ನಾಯಕ್, ‘ಡಿ.ಎಕ್ಸ್
ಬೇರೆಲ್ಲೂ ಕಾಣದ ವಿಶಿಷ್ಠ ಉತ್ಸವ : ಇಳಿದ ಕೊಪ್ಪರಿಗೆ: ಮಹಾಸಂಪ್ರೋಕ್ಷಣೆ : ಯಶಸ್ವಿಯನೀರಾಟ : ಚಿಣ್ಣರ ಸಂಭ್ರಮ ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವವು ಸೋಮವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊoಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿದಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ




























