ಕಟೀಲು ಮೇಳದ ಚೌಕಿ ಸಹಾಯಕ ನಿಧನ

ಕಟೀಲು ಮೇಳದ ಐದನೇ ಮೇಳದ ಚೌಕಿ ಸಹಾಯಕ ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ 45 ವರ್ಷದ ಅಚ್ಯುತ ನಾಯಕ್ ಅವರು ಹೃದಯ ಘಾತದಿಂದ ನಿಧನರಾದ ಮೇಳದ ಚೌಕಿ ಸಹಾಯರಾಗಿದ್ದಾರೆ.
ಕಟೀಲು ಮೇಳದ ಯಕ್ಷಗಾನವು ಪ್ರಸ್ತುತ ಕಾಲಮಿತಿ ಯಕ್ಷಗಾನವಾಗಿದ್ದು, ರಾತ್ರಿ 1 ಗಂಟೆಯ ಸುಮಾರಿಗೆ ಯಕ್ಷಗಾನ ಮುಗಿದು ಪರಿಕರಗಳನ್ನು ಜೋಡಿಸುತ್ತಿದ್ದ ವೇಳೆ ಅಚ್ಯುತ ಅವರು ಏಕಾಏಕಿ ಅಸ್ವಸ್ಥತೆಗೊಂಡಿದ್ದಾರೆ ಎನ್ನಲಾಗಿದೆ. ಆಗ ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
