ಉಳ್ಳಾಲ: ಮಳೆಯಿಂದ ಹಾನಿಗೀಡಾದ ಬೆಳ್ಮ ಗ್ರಾ.ಪಂ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ತುರ್ತು ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.ಬೋರುಗುಡ್ಡೆ ಎರಡು ಮನೆಗಳ ಮೇಲೆ ಗುಡ್ಡೆ ಜರಿತವಾಗಿ ಹಾನಿ, ರೆಂಜಾಡಿಯ ಪಾಲೆದಡಿ ಮಸೀದಿ ಬಳಿ ಹಾನಿ, ಕೊಳಕೆಬೈಲ್ ಗುಡ್ಡ ಜರಿತ ಹಾಗೂ ಕಾನಕೆರೆ ಬಳಿ ಪೆಟ್ರೋಲ್ ಪಂಪ್ ಹಿಂಭಾಗದ ಒಂದು ಭಾಗ ಜರಿತ
ಅಖಿಲ ಭಾರತ ಉದ್ಯಮ ಅಭಿವೃದ್ಧಿ ಸಂಘವು ಮುಂಬೈ ಉದ್ಯಮಿ ಕನ್ನಡಿಗ ಶ್ರೀನಿವಾಸ್ ಎನ್ ಕಾಂಚನ್ ಅವರಿಗೆ ರಾಷ್ಟ್ರೀಯ ನಿರ್ಮಾಣ ರತನ್ ಅವಾರ್ಡ್ ಫಾರ್ ಇಂಡಸ್ಟ್ರಿ ಡೆವಲಪ್ಮೆಂಟ್’ ಎಂಬ ರಾಷ್ಟ್ರೀಯ ಪ್ರಶಸ್ತಿಯ ಗೌರವ ಪಡೆದರು. ಶ್ರೀನಿವಾಸ್ ಕಾಂಚನ್ ಅವರು ಹಿಂದುಳಿದ ಪ್ರದೇಶವಾದ ಮಹಾರಾಷ್ಟ್ರ ದ ನಾಸಿಕ್ ಗ್ರಾಮೀಣ ಪ್ರದೇಶದಲ್ಲಿ ಪಂಚಾವಟಿ ವಲ್ವೇಸ್ ಆಂಡ್ ಫ್ಲಾಲೆಂಗ್ಸ್ ಎಂಬ ಕಾರ್ಖಾನೆಯನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹಾಗೂ ಸ್ಥಳೀಯರಿಗೆ
ಮಂಗಳೂರಿನ ಕಂಕನಾಡಿಯಲ್ಲಿರುವ ವೆಸ್ಟ್ ಕೋಸ್ಟ್ ಮೋಟಾರ್ಸ್‍ನ ಹೀರೋ ಶೋರೂಮ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್‍ಗಳನ್ನು ಘೋಷಿಸಿದ್ದಾರೆ. ದ್ವಿಚಕ್ರ ವಾಹನ ಸವಾರರಿಗೆ ಶುಭ ಸುದ್ದಿ… ನಗರದಲ್ಲಿರುವ ವೆಸ್ಟ್ ಕೋಸ್ಟ್ ಮೋಟಾರ್ಸ್ ಹೀರೋ ಶೋರೂಮ್ ಉತ್ತಮ ಗುಣಮಟ್ಟದ ದ್ವಿಚಕ್ರ ವಾಹನದ ಜೊತೆಗೆ ಗ್ರಾಹಕರನ್ನು ಸಂತ್ರಪ್ತಿಗೊಳಿಸಲು ಲಾಂಚಿಂಗ್ ಆಫರ್ ನ್ನು ನೀಡುತ್ತಿದ್ದಾರೆ. ಇನ್ನು ಜೊತೆಗೆ ಹೆಲ್ಮೆಟ್ ಆಗಿದೆ, ಟಿಶರ್ಟ್ ಟ್ರ್ಯಾಕ್ ಪ್ಯಾಂಟ್, ರೈನ್ ಕೋಟ್,
ಮೂಡುಬಿದಿರೆ:ತಾಲ್ಲೂಕಿನ ವಿವಿದೆಡೆ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೈಟ್ ಎಂಜಿನಿಯರಿಂಗ್ ಕಾಲೇಜಿನ ಆವರಣಗೋಡೆ ಕುಸಿದು ಬಿದ್ದು ಮೂರು ವಾಹನಗಳಿಗೆ ಹಾನಿಯಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ನಡೆಯುತ್ತಿದ್ದು ಆವರಣಗೋಡೆಯ ಬದಿಯಲ್ಲಿ ಪೋಷಕರ ವಾಹನಗಳನ್ನು ನಿಲ್ಲಿಸಲಾಗಿತ್ತು. ನಿರಂತರ ಮಳೆಯಿಂದಾಗಿ ಸುಮಾರು 20 ಅಡಿ ಎತ್ತರದಲ್ಲಿದ್ದ ಆವರಣಗೋಡೆ ಕುಸಿದು ಹತ್ತಿರದಲ್ಲಿದ್ದ ಮೂರು
ಕುಂದಾಪುರ: ಕಾಲಿನ ಶಸ್ತೃಚಿಕಿತ್ಸೆಗೊಳಗಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರೂ ಊರುಗೋಲಿನ ಸಹಾಯದಿಂದ ಮರವಂತೆ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬಿದರು.ಪಕ್ಷದ ಮುಖಂಡರೊಂದಿಗೆ ಕಡಲ್ಕೊರೆತ ಪ್ರದೇಶ ಮರವಂತೆಗೆ ಭೇಟಿ ನೀಡಿದ ಅವರು, ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆಯಲ್ಲಿ ಮಾತನಾಡಿದ ಸ್ಥಳೀಯರು ಕಳೆದ ಹನ್ನೆರಡು ದಿನಗಳಿಗೂ ಅಧಿಕ
ಕಡಬದಲ್ಲಿ ಜರಗಿದ ಡಿಸಿ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ 45ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿದರು. ದಾರಿ ತಕರಾರುಗಳ ಅರ್ಜಿಗಳನ್ನು ಪರಿಶೀಲಿಸಿದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಪಿಡಿಓಗಳು ಹಾಗೂ ಕಂದಾಯ ಅಧಿಕಾರಿಗಳಿಗೆ ಆದೇಶಿಸಿದರು. 11 ಇ ಅರ್ಜಿಗಳ ವಿಲೇವಾರಿಗೆ ವೇಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದವರು ಆ
ಉಳ್ಳಾಲ: ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ಅಶ್ವಿತ್(೧೯) ನೀರುಪಾಲಾಗಿದ್ದು, ಆತನ ಮೃತದೇಹ ಬುಧವಾರ ಉಳ್ಳಾಲದ ಕೋಟೆಪುರ ಕೋಡಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಪೊಲೀಸ್, ಅಗ್ನಿಶಾಮಕ ದಳ ಸ್ಥಳೀಯರ ಸಹಾಯದಿಂದ ಹುಡುಕಾಟವನ್ನು ಸತತ ಮೂರು ದಿನಗಳಿಂದ ನಡೆಸಲಾಗುತ್ತಿತ್ತು. ಸಜಿಪಪಡುವಿನ ತಲೆಮೊಗರು ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ಮಗುವನ್ನ ತೊಟ್ಟಿಲು ತೂಗುವ ಸಮಾರಂಭ
ಬಂಟ್ವಾಳ: ಮಳೆಗಾಲ ಆರಂಭವಾದಾಗ ಅನೇಕ ಜಲಪಾತಗಳು ಮೈದುಂಬಿಕೊಂಡು ಹರಿಯಲಾಂಭಿಸುತ್ತವೆ. ದಟ್ಟ ಅರಣ್ಯಗಳ ಮಧ್ಯೆ ಅದೆಷ್ಟೋ ಸುಂದರವಾದ ಜಲಪಾತಗಳು ಇದ್ದರೂ ಹೊರ ಜಗತ್ತಿಗೆ ತಿಳಿಯದೇ ಅಜ್ಞಾತವಾಗಿಯೇ ಉಳಿಯುತ್ತವೆ. ಈ ಪೈಕಿ ತಾಲೂಕಿನ ವೀರಕಂಬ ಗ್ರಾಮದ ಕಲ್ಮಲೆ ಎಂಬಲ್ಲಿ ದಟ್ಟ ಅರಣ್ಯದ ಮಧ್ಯೆ, ಪ್ರಕೃತಿ ರಮಣೀಯ ಸ್ಥಳದಲ್ಲಿ ಇರುವ ಜಲಪಾತವೊಂದು ಬಂಡೆಕಲ್ಲುಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಬೈಂದೂರು :ಮರವಂತೆಯಲ್ಲಿ ಮತ್ತೆ ಕಡಲು ಕೊರೆತ ಉಂಟಾಗಿದ್ದು ತೆಂಗಿನ ಮರಗಳು ಹಾಗೂ ಮೀನುಗಾರಿಕೆ ಸಲಕರಣೆಗಳು ಶೇಡ್ಡ್ ಗಳು ನೀರು ಪಾಲಾಗಿದ್ದು, ಹಾಕಿದ ಕಲ್ಲು ಸಂಪೂರ್ಣ ಸಮುದ್ರ ಪಾಲಾಗಿದೆ,ಈಗಾಗಲೇ ಅಧಿಕಾರಿಗಳು ಬಂದುಹೋದರು ಎನು ಪ್ರಯೊಜನೆ ಆಗಲಿಲ್ಲ, ಇವತ್ತು ಸಮುದ್ರದ ಅಬ್ಬರದ ಅಲೆಗಳು ಜಾಸ್ತಿ ಆಗಿರುದರಿಂದ ಕಡಲು ತೀರ ಪ್ರದೇಶದಲ್ಲಿ ಅಪಾಯದಪರಿಸ್ಥಿತಿ ಉಂಟಾಗಿದು ಜನರಗೋಳನ್ನು ಕೇಳುವರು ಯಾರು ಇಲ್ಲದಂತಾಗಿದೆಕಡಲು ಕೊರತೆ ಹೀಗೆ ಮುಂದುವರಿದರೇ ನೂರಾರು ಮೀನು ಗಾರರ
ಜೆಸಿಐನ ವಲಯ ಎಕ್ಸ್‍ವಿ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನವು ವಿಟ್ಲದಲ್ಲಿ ನಡೆದಿದ್ದು,ಜೇಸಿಐ ಕುಂದಾಪುರ ಸಿಟಿ ಘಟಕವು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಗೆ ಭಾಜನವಾಗಿದೆ. ಮಾತ್ರವಲ್ಲದೆ ಸುಮಾರು ಒಂದೂವರೆ ಲಕ್ಷದಷ್ಟು ದೇಣಿಗೆಯನ್ನು ಜೇಸಿಐ ಇಂಡಿಯಾ ಫೌಂಡೇಶನ್ ಗೆ ನೀಡುವುದರ ಮೂಲಕ,ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ವಲಯದಲ್ಲೇ ಟಾಪ್ ಒನ್ ಘಟಕವಾಗಿ ಮೂಡಿಬಂದಿದೆ. ಈ ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ



























