ಜೆಸಿಐ ವಲಯ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ

ಜೆಸಿಐನ ವಲಯ ಎಕ್ಸ್‍ವಿ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನವು ವಿಟ್ಲದಲ್ಲಿ ನಡೆದಿದ್ದು,ಜೇಸಿಐ ಕುಂದಾಪುರ ಸಿಟಿ ಘಟಕವು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಗೆ ಭಾಜನವಾಗಿದೆ. ಮಾತ್ರವಲ್ಲದೆ ಸುಮಾರು ಒಂದೂವರೆ ಲಕ್ಷದಷ್ಟು ದೇಣಿಗೆಯನ್ನು ಜೇಸಿಐ ಇಂಡಿಯಾ ಫೌಂಡೇಶನ್ ಗೆ ನೀಡುವುದರ ಮೂಲಕ,ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ವಲಯದಲ್ಲೇ ಟಾಪ್ ಒನ್ ಘಟಕವಾಗಿ ಮೂಡಿಬಂದಿದೆ.

ಈ ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆ ಸಿ ಪೆÇನ್ನರಾಜ್,ವಲಯ ಹದಿನೈದರ ವಲಯಾಧ್ಯಕ್ಷರಾದ ಜೆಸಿ ರಾಯನ್ ಉದಯ ಕ್ರಾಸ್ತಾ ನಿಕಟಪೂರ್ವ ವಲಯಾಧ್ಯಕ್ಷ ಸೌಜನ್ಯ ಹೆಗ್ಡೆ ಪೂರ್ವ ವಲಯಾಧ್ಯಕ್ಷ ಅಲನ್ ರೋಹನ್ ವಾಜ್ ಸೀನಿಯರ್ ಮೆಂಬರ್ ಅಸೋಸಿಯೇಷನ್ ಛೇರ್ಮನ್ ಜಗನಾಥ್ ರೈ ಚೇರ್ ಮ್ಯಾನ್ ಅಬ್ದುಲ್ ಜಬ್ಬಾರ್ ಸದ್ಯಸ್ಯರಾದ ಆಶಾ ಅಲನ್ ವಲಯ ಉಪಾಧ್ಯಕ್ಷ ದಿನೇಶ್ ಶೆಟ್ಟಿ ವಲಯ 15 ರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗ ದ ನಿರ್ದೇಶಕರಾದ ಮರಿಯಪ್ಪ ವಿತರಿಸಿದರು.

ಪೂರ್ವ ವಲಯ ಅಧ್ಯಕ್ಷರಾದ ಜೆಸಿ ಕಾರ್ತಿಕೇಯ ಮಧ್ಯಸ್ಥ,ಘಟಕಾಧ್ಯಕ್ಷ ಜೇಸಿ ಅಭಿಲಾಷ್ ಬಿ ಎ ಸ್ಥಾಪಕಾಧ್ಯಕ್ಷರಾದ ಜೇಸಿ ಹುಸೇನ್ ಹೈಕಾಡಿ,ಪೂರ್ವ ಅಧ್ಯಕ್ಷರಾದ ಜೆ ಸಿ ರಾಘವೇಂದ್ರ ನಾವಡ ಜೆ ಸಿ ಜಯಚಂದ್ರ ಶೆಟ್ಟಿ ಜೆಸಿ ಚಂದ್ರಕಾಂತ್ ಜೆ ಸಿ ಪ್ರಶಾಂತ್ ಹವಲ್ದಾರ್ , ಸದಸ್ಯರಾದ ಜೆ ಸಿ ಗುರುರಾಜ್ ಕೊತ್ವಾಲ್ ಜೆ ಸಿ ನಾಗರಾಜ್ ಪಟ್ವಾಲ್ ಪೂರ್ವ ವಲಯಾಧ್ಯಕ್ಷರು ವಲಯ ಉಪಾಧ್ಯಕ್ಷರು ವಲಯ 15 ರ ವಲಯ ಆಡಳಿತ ಮಂಡಳಿಯ ಸದ್ಯಸ್ಯರು ವಲಯ15 ರ ಎಲ್ಲ ಘಟಕದ ಅಧ್ಯಕ್ಷರು ಇನ್ನಿತರರು ಘಟಕದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

Related Posts

Leave a Reply

Your email address will not be published.