Home Archive by category mangaluru (Page 45)

ಕುಂದಾಪುರ: ಉದಯೋನ್ಮುಖ ಪ್ರತಿಭೆ ರಾಜೇಶ್ ಕೆರ್ಗಾಲ್‌ರಿಗೆ ಸನ್ಮಾನ

ಉದ್ಯೋನ್ಮುಖ ಪ್ರತಿಭೆ ರಾಜೇಶ್ ಕೆರ್ಗಾಲ್ ಅವರಿಗೆ ಲಯನ್ಸ್ ಕ್ಲಬ್ ನಾವುಂದ ಹಾಗೂ ಸಾರ್ವಜನಿಕರ ವತಿಯಿಂದ ಅದ್ದೂರಿ ಸನ್ಮಾನದ ಕಾರ್ಯಕ್ರಮವು ಮಾಲಸ ಮಾಂಗಲ್ಯ ಆರ್ಕೇಡಾ ಅರೆಹೊಳೆ ಕ್ರಾಸ್ ನಲ್ಲಿ ಸಡಗರ ಸಂಭ್ರಮದಲ್ಲಿ ನಡೆಯಿತು. ತನ್ನಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಇನ್ನೊಬ್ಬರಿಗೆ ಸ್ಪೂರ್ತಿದಾಯಕವಾಗಿರುವ ಅದೆಷ್ಟು ಕಲಾವಿದರನ್ನು ಬೆಳೆಸಿದ ಅತಿ ಕಿರಿಯ

ಮಂಗಳೂರು : ಶೈಕ್ಷಣಿಕ ಮತ್ತು ಸಂಶೋಧನಾ ಕುರಿತ ಕಾರ್ಯಕ್ರಮಗಳ ಬಗ್ಗೆ ಒಪ್ಪಂದ

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಫಿ ವಿಭಾಗ ಮತ್ತು ಥೀಮ್ ಫಿಸಿಯೋಥೆರಫಿ ಯುನಿವರ್ಸಿಟಿ ನೆದರ್‌ಲ್ಯಾಂಡ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಮತ್ತು ಸಂಶೋಧನಾ ವಿನಿಮಯ ಕಾರ್ಯಕ್ರಮಗಳಲ್ಲಿ ಸಹಕರಿಸಲು ಒಪ್ಪಿಕೊಂಡಿವೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ರಿಚರ್ಡ್ ಅಲೊಶಿಯಸ್ ಕೊಯಿಲೊ ಅವರು, ಥೀಮ್ ವಿವಿಯ ನಿರ್ದೇಶಕರಾದ ಥೀಮ್‌ವಂಡರ್

ಮಂಗಳೂರು : ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ವರ್ಗಾವಣೆ

ಆಡಳಿತ ಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಕಳೆದ ಎರಡು ವರ್ಷಗಳಿಂದ ಹಾಗೂ ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಉತ್ತಮ ನಿರ್ವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು

ಮಂಗಳೂರು : ಪಳನೀರು ರಸ್ತೆ ಅಗಲೀಕರಣದ ಬಗ್ಗೆ ಜಾಗದ ತಕರಾರು

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಜತ್‌ಬೈಲ್ ದಕ್ಷಿಣ 15ನೇ ವಾರ್ಡ್ನ ಪಳನೀರು ರಸ್ತೆಯ ಅಗಲೀಕರಣದ ಬಗ್ಗೆ ಜಾಗದ ಮಾಲೀಕರ ತಕರಾರು ಇದ್ದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ಶಾಸಕರಾದ ಡಾ. ಭರತ್ ಶೆಟ್ಟಿಯವರು ಶುಕ್ರವಾರ ಪಳನೀರಿಗೆ ಭೇಟಿ ನೀಡಿ ಪರಸ್ಪರ ಸೌಹಾರ್ದ ಮಾತುಕಥೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ತಡೆಗೋಡೆ ಸಹಿತ ರಸ್ತೆ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಮೂಲಕ ಅಗಲೀಕರಣದ ಕಾಮಗಾರಿಗಿದ್ದ ಎಲ್ಲಾ

ಮಂಗಳೂರು : ಕಾಂತಾರ ಸಿನಿಮಾ ವೀಕ್ಷಿಸಿದ ಧರ್ಮಸ್ಥಳದ ಖಾವಂದರು

ದೈವದ ಮಹತ್ವ ಸಾರಿದ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಚಿತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕುಟುಂಬಸ್ಥರೊಂದಿಗೆ ಶನಿವಾರ ರಾತ್ರಿ ವೀಕ್ಷಿಸಿದರು.ಮಂಗಳೂರಿನ ಭಾರತ್ ಮಾಲ್ ಬಿಗ್ ಸಿನಿಮಾಸ್‌ನಲ್ಲಿ ರಾತ್ರಿ ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಪತ್ನಿ ಮತ್ತು ಕುಟುಂಬ ಸದಸ್ಯರು ಅವರೊಂದಿಗೆ ಚಿತ್ರ ಮಂದಿರಕ್ಕೆ ಆಗಮಿಸಿದ್ದರು. ಚಿತ್ರ

ದಕ್ಷಿಣ ಕನ್ನಡ : ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ವರ್ಗಾವಣೆ

ಕಳೆದ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಹಾಗೂ ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ಅಧಿಕಾರ ನಿಭಾಯಿಸಿದ ರಾಜೇಂದ್ರ ಕೆವಿ ಅವರು ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ದ.ಕ. ಜಿಲ್ಲಾಧಿಕಾರಿ ಆಗಿ ಜಿಪಂ ಸಿಇಓ ಡಾ.ಕುಮಾರ್ ಪ್ರಭಾರ ಅವರು ಚಾರ್ಜ್ ತೆಗೆದುಕೊಳ್ಳಲಿದ್ದಾರೆ

ಶ್ರೀಕ್ಷೇತ್ರ ಬಿಬಿಲಚ್ಚಿಲ್ : 108 ದಿನಗಳ ಸಂಧ್ಯಾ ಭಜನಾ ಕಾರ್ಯಕ್ರಮ

ಮಂಗಳೂರಿನ ಅದ್ಯಪಾಡಿ ಶ್ರೀಕ್ಷೇತ್ರ ಬಿಬಿಲಚ್ಚಿಲ್ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮ ಕಲಶೋತ್ಸವ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ನಡೆಯುತ್ತಿರುವ 108 ದಿನಗಳ ಸಂದ್ಯಾ ಭಜನೆಯು ನಡೆಯುತ್ತಿದ್ದೂ ನಿನ್ನೆ ಶ್ರೀ ಬಾಲ ವಿಠೋಭಾ ಭಜನಾ ಮಂಡಳಿ ಪಲ್ಲಿಪಾಡಿ ಕರಿಯಂಗಳ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಈಗಾಗಲೇ ಹಲವಾರು ಭಜನಾ ತಂಡಗಳು ನೋಂದಣಿ ಮಾಡಿಸಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ತಂಡ ಪಾಲ್ಗೊಳ್ಳುವಂತೆ ಶ್ರೀ

ಮಂಗಳೂರು : ಯಶಸ್ವಿಯಾಗಿ ನಡೆದ ಮಿಲಾಗ್ರಿಸ್ ಪಿ.ಯು. ಕಾಲೇಜು ಎನ್.ಎಸ್.ಎಸ್. ಶಿಬಿರ

ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಶಿಬಿರವು ನಗರದ ಕಾಸ್ಸಿಯಾ ಸಂತ ರೀಟಾ ವಿದ್ಯಾ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರವನ್ನು ಮಹಾನಗರ ಪಾಲಿಕೆ ಸದಸ್ಯೆ ಭಾನುಮತಿ ಅವರು ಉದ್ಘಾಟಿಸಿ ಮಾತನಾಡಿ, ಎನ್.ಎಸ್.ಎಸ್. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ , ಶಿಸ್ತು, ಸಮಯ ಪ್ರಜ್ನೆ , ಸಾಮರಸ್ಯದ ಗುಣಗಳನ್ನು ಬೆಳೆಸಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದು ಹೇಳಿದರು.ಸಂತ ರೀಟಾ ವಿದ್ಯಾಸಂಸ್ಥೆಯ

ಮಂಗಳೂರು : ಎ.ಜೆ. ಸ್ವಾಸ್ಥ್ಯ ಕಾರ್ಡ್ ಉದ್ಘಾಟನಾ ಕಾರ್ಯಕ್ರಮ

ಎ.ಜೆ ಸ್ವಾಸ್ಥ್ಯ ಹೆಲ್ತಕಾರ್ಡನ್ನು ನಡೆದ ವಾರ್ಷಿಕ ದಿನಾಚರಣೆಯಂದು, ಎ.ಜೆ ಸಮೂಹ ಸಂಸ್ಥೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದಡಾ. ಎ.ಜೆ. ಶೆಟ್ಟಿ ಅನಾವರಣಗೊಳಿಸಿದರು. ಇದೊಂದು ವಿಷಿಷ್ಟ ವಾದಅರೋಗ್ಯಕಾರ್ಡ್ಆಗಿದ್ದು, ಫಲಾನುಭವಿಗಳಿಗೆ ಆಸ್ಪತ್ರೆ ಸೇವೆಗಳನ್ನುರಿಯಾಯಿತಿಯೊಂದಿಗೆ ಪಡೆದುಕೊಳ್ಳಲ್ಲು ಅನುವು ಮಾಡಿಕೊಡುತ್ತದೆ.ಕಾರ್ಡ್ ಶುಲ್ಕವನ್ನು ಪಾವತಿಸಿ ಮತ್ತುಆಧಾರ್‌ನ್ನು ಪುರಾವೆಯಾಗಿ ನೀಡುವ ಮೂಲಕ ಈ ಕಾರ್ಡ್ಗೆ ನೋಂದಾಯಿಸಿಕೊಳ್ಳಬಹುದು.ಈ

ಮಂಗಳೂರು : ಪ್ಲಾಸ್ಟಿಕ್ ಹೆಕ್ಕಿಕೋ ಜನಜಾಗೃತಿ ಕಾರ್ಯಕ್ರಮ

ನಗರದ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕ, ಕಾಶ್ಯ ವಾರ್ಡ್ ಇವರ ಸಹಯೋಗದೊಂದಿಗೆ ಕಾಶ್ಯ ಪೇಟೆಯಲ್ಲಿ ಪ್ಲಾಸ್ಟಿಕ್ ನಿರ್ಮೂಲನದ ಬಗ್ಗೆ ಪ್ಲಾಸ್ಟಿಕ್ ಹೆಕ್ಕಿಕೋ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭವು ಸಂತ ರೀಟಾ ವಿದ್ಯಾಸಂಸ್ಥೆ ಕಾಸ್ಸಿಯಾ ಶಾಲಾ ಸಭಾಭವನದಲ್ಲಿ ಜರಗಿತು.ಎನ್.ಎಸ್.ಎಸ್ ಶಿಬಿರ ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಡಿದ ಮಂಗಳೂರು ಮಹಾನಗರ ಪಾಲಿಕೆ