ಕುಂದಾಪುರ: ಉದಯೋನ್ಮುಖ ಪ್ರತಿಭೆ ರಾಜೇಶ್ ಕೆರ್ಗಾಲ್‌ರಿಗೆ ಸನ್ಮಾನ

ಉದ್ಯೋನ್ಮುಖ ಪ್ರತಿಭೆ ರಾಜೇಶ್ ಕೆರ್ಗಾಲ್ ಅವರಿಗೆ ಲಯನ್ಸ್ ಕ್ಲಬ್ ನಾವುಂದ ಹಾಗೂ ಸಾರ್ವಜನಿಕರ ವತಿಯಿಂದ ಅದ್ದೂರಿ ಸನ್ಮಾನದ ಕಾರ್ಯಕ್ರಮವು ಮಾಲಸ ಮಾಂಗಲ್ಯ ಆರ್ಕೇಡಾ ಅರೆಹೊಳೆ ಕ್ರಾಸ್ ನಲ್ಲಿ ಸಡಗರ ಸಂಭ್ರಮದಲ್ಲಿ ನಡೆಯಿತು.

rajesh kergal

ತನ್ನಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಇನ್ನೊಬ್ಬರಿಗೆ ಸ್ಪೂರ್ತಿದಾಯಕವಾಗಿರುವ ಅದೆಷ್ಟು ಕಲಾವಿದರನ್ನು ಬೆಳೆಸಿದ ಅತಿ ಕಿರಿಯ ಪ್ರತಿಭೆ ರಾಜೇಶ್ ಕೆರ್ಗಾಲ್ ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಇವರ ಸಿನಿಮಾ ತಂಡದಲ್ಲಿ ಕೆಲಸ ಮಾಡುವುದರ ಜೊತೆಗೆ.. ಅವರ ಸಂಗೀತ ನಿರ್ದೇಶನದ ಕೆಜಿಎಫ್ 2 ಮದಗಜ, ಮಡ್ಡಿ ,ಅಬ್ಬರ ,ಕಬ್ಜ ,ಚಿತ್ರದ ಟೀಸರ್‌ಗೆ ಹಿನ್ನಲೆ ಸಂಗೀತಕ್ಕೆ ಕೋರಸ್ ಸಿಂಗರ್ ಬ್ಯಾಚ್‌ನಲ್ಲಿ ಧ್ವನಿ ನೀಡಿರುತ್ತಾರೆ. ಇವರು ನಿರ್ದೇಶನ ಮಾಡಿದ ಅಪ್ಪಯ್ಯ ಕ್ಲಿನಿಕ್ ಕಿರುಚಿತ್ರಕ್ಕೆ ಅವಾರ್ಡ್ ಗಳ ಸುರಿಮಳೆ ಸುರಿದಿದೆ

rajesh kergal

ಅದೆಷ್ಟು ಅಭಿಮಾನಿಗಳ ಮನಸ್ಸನ್ನು ಸೆಳೆದಿದ್ದಾರೆ. ಕಲಬುರ್ಗಿ ಅಂತಾರಾಷ್ಟಿಯ ಚಲನಚಿತ್ರ ಪ್ರಶಸ್ತಿ , ಮುಂಬೈ ಅಂತಾರಾಷ್ಟಿಯ ಚಲನಚಿತ್ರ ಪ್ರಶಸ್ತಿ, ಟಾಗೋರ್ ಅಂತಾರಾಷ್ಟಿಯ ಚಲನಚಿತ್ರ ಪ್ರಶಸ್ತಿ ಮೊಕೋ ಅಂತಾರಾಷ್ಟಿಯ ಚಲನಚಿತ್ರ ಪ್ರಶಸ್ತಿ ,7 ಆರ್ಟ್ ಇಂಡಿಪೆoಡೆoಟ್ ಅಂತಾರಾಷ್ಟಿಯ ಚಲನಚಿತ್ರ ಪ್ರಶಸ್ತಿ ,ಹಾಗೂ ಗೋವಾ ಅಂತಾರಾಷ್ಟಿಯ ಚಲನಚಿತ್ರ ಪ್ರಶಸ್ತಿ ,ಹಾಗೆ ಆಳ್ವಾಸ್ ಅರೇನಾ ಉತ್ತಮ ನಿರ್ದೇಶನ ಪ್ರಶಸ್ತಿಯನ್ನ ಪಡೆದುಕೊಂಡಿರುತ್ತಾರೆ .. ಅಲ್ಲದೆ ನಾಟಕ ರಚನಾಕಾರನಾಗಿಯು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೆ ಮೊನ್ನೆಸ್ಟೇ ಬಿಡುಗಡೆಯಾದ ಕಾಂತಾರ ಚಿತ್ರದಲ್ಲಿ ಕೂಡ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಸಮಾರಭದ ಅಧ್ಯಕ್ಷತೆಯನ್ನು ಲ! ಜಗದೀಶ್ ಶೆಟ್ಟಿ ಇವರು ವಹಿಸಿಕೊಂಡಿದ್ದರು. ವಲಯ ಅಧ್ಯಕ್ಷ ನರಸಿಂಹ ದೇವಾಡಿಗ, ಲ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ,ಸರ್ವ ಸದಸ್ಯರು ಉಪಸ್ಥಿತರಿದ್ದರು, ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ದಿನೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.