Home Archive by category Manjeshwara (Page 3)

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಕಾರ್ಯಕರ್ತ ಶ್ರೀ ಗೋಪಾಲ್ ಚೆಟ್ಟಿಯಾರ್ ವಿಧಿವಶ

ಮಂಗಳೂರು, ಫೆಬ್ರವರಿ 6, 2024: ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್ ಆಗಿ, ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಆಗಿ, ಮಂಗಳೂರು ವಿಭಾಗ ಸಂಘಚಾಲಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಗೋಪಾಲ್ ಚೆಟ್ಟಿಯಾರ್ (78) ಅವರು ಇಂದು ಬೆಳಗ್ಗೆ 2:45ಕ್ಕೆ ದೈವಾಧೀನರಾಗಿದ್ದಾರೆ. ಅವರು ಮೂಲತಃ ಕೇರಳದ ಪೆರ್ಲದವರು. ವಿದ್ಯಾರ್ಥಿ

ಮೀಯಪದವು : ಜ.28ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕಣ್ಣಿನ ತಪಾಸಣೆ

ಗೆಳೆಯರ ಬಳಗದಿಂದ ದಡ್ಡಂಗಡಿ ಪ್ರಣಾಮ್ ಭಂಡಾರಿ ಸ್ಮರಣಾರ್ಥ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣೆಯು ಜ.28ರಂದು ಬಾಳಿಯೂರು ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಲಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣೆಯು ಬೆಳಿಗ್ಗೆ 9.30 ರಿಂದ 1 ಗಂಟೆಯವರೆಗೆ ನಡೆಯಲಿದೆ, ತಜ್ಞ ವೈದ್ಯರಿಂದ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ, ಗಂಟಲು, ಕಿವಿ,

ಮಂಜೇಶ್ವರ: ಶ್ರೀಮತ್ ಅನಂತೇಶ್ವರ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿನಿ ಅಪರ್ಣಾಳ ಸಾಧನೆ

ಮಂಜೇಶ್ವರದ ಶ್ರೀಮತ್ ಅನಂತೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅಪರ್ಣಾ .ಪಿ ಅವರು ಕೊಲ್ಲಂನಲ್ಲಿ ಜರುಗಿದ ಕೇರಳ ಶಾಲಾ ಕಲೋತ್ಸವದಲ್ಲಿ ಕಥಕ್ಕಳಿ ಸಂಗೀತ ಹುಡುಗಿಯರ ವಿಭಾಗದಲ್ಲಿ, ಇಂಗ್ಲೀಷ್ ಕಥಾರಚನೆಯಲ್ಲಿ ಎ ಗ್ರೇಡ್ ನೊಂದಿಗೆ ಶಾಲೆಗೆ ಹಾಗೂ ಕಾಸರಗೋಡು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ. ಸತತ ಪ್ರಯತ್ನ, ಕಲಿಯಬೇಕೆಂಬ ಹಠ, ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮಲಯಾಳಂ ಕಥಕ್ಕಳಿ ಸಂಗೀತವನ್ನು ನಿರರ್ಗಳವಾಗಿ ಹಾಡಿ

ತಹಶೀಲ್ದಾರ್‌ಗೆ ಹಲ್ಲೆ ಮಾಡಿದ ಶಾಸಕ : ಶಾಸಕರಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

: ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್‌ (MLA AKM Ashraf) ಸಹಿತ ನಾಲ್ವರಿಗೆ ಕಾಸರಗೋಡು ಜ್ಯುಡೀಶಿಯಲ್‌ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಒಂದು ವರ್ಷ ಸಜೆ ವಿಧಿಸಿದೆ.2015ರಲ್ಲಿ ನವೆಂಬರ್‌ 25 ರಂದು ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಕಾನ್ಪರೆನ್ಸ್‌ ಹಾಲ್‌ನಲ್ಲಿ ಚುನಾವಣೆ ಕುರಿತು ಹಿಯರಿಂಗ್‌ ನಡೆಯುತ್ತಿದ್ದ ಸಂದರ್ಭದಲ್ಲಿ ಮತದಾರನೋರ್ವನ ಅರ್ಜಿಯಲ್ಲಿ ಲೋಪ ಇರುವ ಕಾರಣ ಬದಿಗಿರಿಸಿದ್ದರು. ಇದರಿಂದ ಕೋಪಗೊಂಡ ಕೆಎಂ ಅಶ್ರಫ್‌ ಮತ್ತಿತರರು ಅಂದಿನ

ಕಾಸರಗೋಡು: ಮಂಗಲ್ಪಾಡಿ ಪಂಚಾಯತ್ ನಲ್ಲಿ ಅಧಿಕಾರಿಗಳ ಕೊರತೆ, ಪಂಚಾಯತ್ ಗೆ ಬೀಗ ಹಾಕಿದ ಪಂಚಾಯತ್ ಸದಸ್ಯ

ಕಾಸರಗೋಡು: ಉಪ್ಪಳ ಮಂಗಲ್ಪಾಡಿ ಪಂಚಾಯತ್ ನಲ್ಲಿ ಅಧಿಕಾರಿಗಳ ಕೊರತೆ, ಪಂಚಾಯತ್ ಗೆ ಬೀಗ ಹಾಕಿದ ಪಂಚಾಯತ್ ಸದಸ್ಯ ಉಪ್ಪಳದ ಮಂಗಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಅಧಿಕಾರಿಗಳ ಕೊರತೆಯ ಹಿನ್ನೆಲೆಯಲ್ಲಿ ಪಂಚಾಯತ್ ಗೆ ಬೀಗ ಹಾಕಿದ ಘಟನೆ ನಡೆದಿದೆ. ಮಂಗಲ್ಪಾಡಿ ಪಂಚಾಯತ್ ಆಫೀಸ್ನಲ್ಲಿ ಹಲವಾರು ದಿನಗಳಿಂದ ಉದ್ಯೋಗಸ್ತರ ಕೊರತೆ ಇದ್ದು,ಮೊನ್ನೆ ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ಸೂಚನಾ ಪ್ರತಿಭಟನೆ ನಡೆದರು ಈ ಬಗ್ಗೆ ತಮಗೇನು ಗೊಡವೆ ಇಲ್ಲದ ರೀತಿಯಲ್ಲಿ ವರ್ತಿಸುತ್ತಿರುವ

ಮಂಜೇಶ್ವರ:ವಿದ್ಯಾರ್ಥಿಗೆ ಕಾರು ಢಿಕ್ಕಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು

ಮಂಜೇಶ್ವರ:ವಿದ್ಯಾರ್ಥಿಗೆ ಕಾರು ಢಿಕ್ಕಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಗೆ ಕುಂಜತ್ತೂರು ಮಾಡ ಎಂಬಲ್ಲಿ ಕಾರು ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕುಂಜತ್ತೂರು ಮಾಡ ವಲಯದ ರಘು ಶೆಟ್ಡಿ ಎಂಬವರ ಪುತ್ರ ಸುಮಂತ್ (17) ಗಾಯಗೊಂಡ ಬಾಲಕ ಎಂದು ತಿಳಿದುಬಂದಿದೆ.ಕಾಲೇಜಿನಿಂದ ಮನೆಗೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಗಂಭೀರ ಗಾಯಗೊಂಡಿರುವ ಸುಮಂತ್

ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವ

ಮಂಜೇಶ್ವರ : ಕಳೆದ ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವದ ದಿನಾಂಕ ನಿಗದಿ ಸಮಾರಂಭವು ನಡೆಯಿತು. “ಕುದಿಕಳ” ಎಂಬ ಹೆಸರಿನಲ್ಲಿ ಸಂಪ್ರದಾಯ ಪ್ರಕಾರ ನಡೆಯುವ ಸಮಾರಂಭದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬನಿಂದ ದೈವಪಾತ್ರಿಗಳೇ ವೀಳ್ಯದೆಲೆ ಹಾಗೂ ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ.ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ

ಕಾನೂನಿನ ಅರಿವಿನ ಬಗ್ಗೆ ತರಬೇತಿ ಶಿಬಿರ – ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರದಿಂದ ಕಾರ್ಯಕ್ರಮ

ಮಂಜೇಶ್ವರ: ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಕಾನೂನಿನ ಅರಿವಿನ ಬಗ್ಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಯಿತು.ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಸದಸ್ಯ ಕೆ ಆರ್ ಜಯಾನಂದ ರವರ ಅಧ್ಯಕ್ಷತೆಯಲ್ಲಿ ನಡೆದ ತರಭೇತಿ ಶಿಬಿರವನ್ನು ಜಿಲ್ಲಾ ನ್ಯಾಯಾಧೀಶ ಸಿ ಕೃಷ್ಣ ಕುಮಾರ್ ಉದ್ಘಾಟಿಸಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಕ್ಕಳ ದೌರ್ಜನ್ಯ ಹಾಗೂ ಹಿರಿಯ ನಾಗರಿಕರಿಗೆ ಸಿಗುವ

ಮಂಜೇಶ್ವರ: ಕುಂಜತ್ತೂರು ಶಾಲೆಯಲ್ಲಿ ಮಾದಕದ್ರವ್ಯ ವಿರೋಧಿ ಮಾಸಾಚರಣೆ

ಮಂಜೇಶ್ವರ: ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ಮಾದಕದ್ರವ್ಯ ವಿರೋಧಿ ಮಾಸಾಚರಣೆಯ ಸಮಾರೋಪ ಸಮಾರಂಭ ನಡೆಯಿತು. ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಕಾರ್ಯಕ್ರಮದ ಸಂದೇಶವನ್ನು ಶಿಕ್ಷಕರುಗಳಾದ ರವೀಂದ್ರ ರೈ, ಅಶ್ರಫ್ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ. ಜಿ. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಮೋಹಿನಿ, ಉಪಾಧ್ಯಕ್ಷೆ ಮುಮ್ತಾಜ್, ಎಸ್.ಎಂ.ಸಿ.ವೈಸ್ ಚೇರ್ಮನ್ ಕೆ.ಪಿ.ಮೊಹಮ್ಮದ್,

ಮಂಜೇಶ್ವರ : ಎಲ್‌ಡಿಎಫ್ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ

ಮಂಜೇಶ್ವರ: ಮಂಗಲ್ಪಾಡಿ ಗ್ರಾಮ ಪಂ. ವ್ಯಾಪ್ತಿಯ ಸಾರ್ವಜನಿಕ ಸ್ಥಳ, ಶಾಲಾ ಮದ್ರಸ ಪರಿಸರ ಸೇರಿದಂತೆ ಕಳೆದೆರಡು ವರ್ಷಗಳಿಂದ ರಾಶಿ ಬಿದ್ದು ಗುಬ್ಬೆದ್ದು ನಾರುತ್ತಿರುವ ತ್ಯಾಜ್ಯ ಗಳ ಹಾಗೂ ಆಡಳಿತ ಸಮಿತಿಯ ಬ್ರಷ್ಟಾಚಾರದ ವಿರುದ್ಧ ಎಲ್ ಡಿ ಎಫ್ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಮಂಗಲ್ಪಾಡಿ ಪಂ. ಮುಂಬಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಿತು. ಪಂಚಾಯತು ಕಚೇರಿ ಮುಂಬಾಗದಲ್ಲಿ ನಡೆದ ಧರಣಿ ಸತ್ಯಾಗ್ರಹಕ್ಕೆ ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ