ಕಾಸರಗೋಡು: ಮಂಗಲ್ಪಾಡಿ ಪಂಚಾಯತ್ ನಲ್ಲಿ ಅಧಿಕಾರಿಗಳ ಕೊರತೆ, ಪಂಚಾಯತ್ ಗೆ ಬೀಗ ಹಾಕಿದ ಪಂಚಾಯತ್ ಸದಸ್ಯ
ಕಾಸರಗೋಡು: ಉಪ್ಪಳ ಮಂಗಲ್ಪಾಡಿ ಪಂಚಾಯತ್ ನಲ್ಲಿ ಅಧಿಕಾರಿಗಳ ಕೊರತೆ, ಪಂಚಾಯತ್ ಗೆ ಬೀಗ ಹಾಕಿದ ಪಂಚಾಯತ್ ಸದಸ್ಯ
ಉಪ್ಪಳದ ಮಂಗಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಅಧಿಕಾರಿಗಳ ಕೊರತೆಯ ಹಿನ್ನೆಲೆಯಲ್ಲಿ ಪಂಚಾಯತ್ ಗೆ ಬೀಗ ಹಾಕಿದ ಘಟನೆ ನಡೆದಿದೆ.
ಮಂಗಲ್ಪಾಡಿ ಪಂಚಾಯತ್ ಆಫೀಸ್ನಲ್ಲಿ ಹಲವಾರು ದಿನಗಳಿಂದ ಉದ್ಯೋಗಸ್ತರ ಕೊರತೆ ಇದ್ದು,ಮೊನ್ನೆ ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ಸೂಚನಾ ಪ್ರತಿಭಟನೆ ನಡೆದರು ಈ ಬಗ್ಗೆ ತಮಗೇನು ಗೊಡವೆ ಇಲ್ಲದ ರೀತಿಯಲ್ಲಿ ವರ್ತಿಸುತ್ತಿರುವ ಮುಸ್ಲಿಂ ಲೀಗ್ ನೇತೃತ್ವದ ಆಡಳಿತ ಪಕ್ಷದ ನಿಲುವಿಗೆ ವಿರುದ್ಧವಾಗಿ 18ನೇ ವಾರ್ಡ್ ಮೆಂಬರ್ ಹಾಗೂ ಬಾಜಪ ಪಕ್ಷದ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯುವ ನಾಯಕ ವಿಜಯ್ ಕುಮಾರ್ ರೈ ಮಲ್ಲಂಗೈ, ಹಾಗೂ ಬಾಜಪದ ಇತರ ಪಂಚಾಯತ್ ಸದಸ್ಯರಾದ ಕಿಶೋರ್ ಬಂದ್ಯೋಡ್ , ಶ್ರೀಮತಿ ಸುಧಾಗಣೇಶ್, ಶ್ರೀಮತಿ ರೇವತಿ ಚೆರುಗೋಳಿ ಮೊದಲಾದವರು ಸೇರಿ ಮಂಗಲ್ಪಾಡಿ ಪಂಚಾಯತ್ ಆಫೀಸಿಗೆ ಬೀಗ ಹಾಕಿ ಪ್ರತಿಭಟನೆ ವ್ಯಕ್ತ ಪಡಿಸಿದರು. ನಂತರ 45 ನಿಮಿಷಗಳ ಬಳಿಕ ಬೀಗ ತೆರೆಯಲಾಯುತು.
ಅಧಿಕಾರಿಗಳ ಸಮಸ್ಯೆಗಳನ್ನು ಬಗೆಹರಿಸಲು ಗುರುವಾರ ಮಧ್ಯಾಹ್ನ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದ್ದಾರೆ. ನ್ಯೂಸ್ ಬ್ಯುರೋ ಕಾಸರಗೋಡು