ಮಂಜೇಶ್ವರ: ಶ್ರೀಮತ್ ಅನಂತೇಶ್ವರ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿನಿ ಅಪರ್ಣಾಳ ಸಾಧನೆ

ಮಂಜೇಶ್ವರದ ಶ್ರೀಮತ್ ಅನಂತೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅಪರ್ಣಾ .ಪಿ ಅವರು ಕೊಲ್ಲಂನಲ್ಲಿ ಜರುಗಿದ ಕೇರಳ ಶಾಲಾ ಕಲೋತ್ಸವದಲ್ಲಿ ಕಥಕ್ಕಳಿ ಸಂಗೀತ ಹುಡುಗಿಯರ ವಿಭಾಗದಲ್ಲಿ, ಇಂಗ್ಲೀಷ್ ಕಥಾರಚನೆಯಲ್ಲಿ ಎ ಗ್ರೇಡ್ ನೊಂದಿಗೆ ಶಾಲೆಗೆ ಹಾಗೂ ಕಾಸರಗೋಡು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ.

ಸತತ ಪ್ರಯತ್ನ, ಕಲಿಯಬೇಕೆಂಬ ಹಠ, ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮಲಯಾಳಂ ಕಥಕ್ಕಳಿ ಸಂಗೀತವನ್ನು ನಿರರ್ಗಳವಾಗಿ ಹಾಡಿ ಮಳೆಯಾಳಿಗಳಿಗಿಂತ ನಾನೇನು ಕಡಮೆ ಇಲ್ಲ ಎಂದು ಸಾಬೀತು ಪಡಿಸಿದ ಸಾಧಕಿ. ಇದು ಮಾತ್ರವಲ್ಲದೇ ಸತತ ಎರಡು ವರ್ಷಗಳಿಂದ ಕೇರಳ ರಾಜ್ಯಮಟ್ಟದಲ್ಲಿ ಜರುಗಿದ ಸಿ.ವಿ ರಾಮನ್ ಪ್ರಬಂಧ ಸ್ಪರ್ಧೆಯಲ್ಲಿ ಎ ಗ್ರೇಡನ್ನು ಪಡೆದಿರುತ್ತಾಳೆ. ಇವಳು ಶ್ರೀ ಪೂರ್ಣಯ್ಯ ಪುರಾಣಿಕ ಹಾಗೂ ಶ್ರೀಮತಿ ಬೀನಾ ಎನ್.ಎ ಇವರ ಮಗಳಾಗಿರುತ್ತಾಳೆ.

ಅದೇ ರೀತಿ ಡಿಸೆಂಬರ್ 1 ಮತ್ತು 2 ರಂದು ತಿರುವನಂತಪುರದಲ್ಲಿ ನಡೆದ ರಾಜ್ಯ ಮಟ್ಟದ ಗಣಿತ ಮೇಳದಲ್ಲಿ ಸ್ಟಿಲ್ ಮೋಡೆಲ್ ನಲ್ಲಿ ಹತ್ತನೇ ತರಗತಿಯ ವಿನೀತ್.ಜಿ ಸತತ ಎರಡನೇ ಬಾರಿಗೆ ಎ ಗ್ರೇಡ್ ಪಡೆದಿರುತ್ತಾನೆ. ಈತ ಶ್ರೀ ಗಣೇಶ್ ಹಾಗೂ ಶ್ರೀಮತಿ ವಿಜಿ.ಜಿ ಅವರ ಪುತ್ರನಾಗಿರುತ್ತಾನೆ.
ಶಾಲೆಗೆ ಕೀರ್ತಿ ತಂದಿರುವ ಇನ್ನೊಬ್ಬಳು ಪ್ರತಿಭೆ ಪ್ರಣಮಿ ಪಿ.ಎನ್. ಈಕೆ ನವೆಂಬರ 24, 25 ರಂದು ಕೊಲ್ಲಂನಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯದಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸಿ ತಂಡಕ್ಕೆ ತೃತೀಯ ಬಹುಮಾನ ಬಂದಿರುತ್ತದೆ. ಇವಳು ಶ್ರೀ ಪ್ರಾಣೇಶ.ಯಂ ಹಾಗೂ ಶ್ರೀಮತಿ ನಮಿತ.ಬಿ ಅವರ ಸುಪುತ್ರಿಯಾಗಿದ್ದಾಳೆ.

Related Posts

Leave a Reply

Your email address will not be published.