ಎಲ್ಲೋ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಡೆಯಿತು ಎಂಬ ಕಾರಣಕ್ಕೆ ಎಲ್ಲಾ ಗ್ರಾ.ಪಂ. ಪ್ರತಿನಿಧಿಗಳ ಅಧಿಕಾರ ಕಿತ್ತು ಕೊಳ್ಳುವ ಸರ್ಕಾರ ನಿರ್ಧಾರ ಸರಿಯಲ್ಲ, ಇದು ಸರಿಯಾಗಿದ್ದರೆ ಭ್ರಷ್ಟಾಚಾರವೇ ತಾಂಡವಾಡುತ್ತಿರುವ ಸರ್ಕಾರವನ್ನು ಏನು ಮಾಡುತ್ತೀರಿ ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂಬುದಾಗಿ ಗ್ರಾ.ಪಂ.ಒಕ್ಕೂಟಗಳ ಅಧ್ಯಕ್ಷ ಬೆಳಪು ದೇವಿ ಪ್ರಸಾದ್
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತುಡರ್ ಪರ್ಬದ ಗಮ್ಮತ್ ಎಂಬ ಹೆಸರಿನಡಿಯಲ್ಲಿ ಬಹಳ ಅರ್ಥ ಗರ್ಭಿತವಾಗಿ ದೀಪಾವಳಿ ಆಚರಣೆಯನ್ನು ಕಾಪು ರಾಜೀವ ಭವನದಲ್ಲಿ ನಡೆಸಿದ್ದಾರೆ. ಕಾರ್ಯಕ್ರಮದ ಪ್ರಮುಖ ಅಂಗವಾಗಿ ಬೇರೆ ಬೇರೆ ಮೂರು ಅನಾಥಾಶ್ರಮವನ್ನು ನಡೆಸುತ್ತಿರುವ ಗಣ್ಯರನ್ನು ಕರೆಯಿಸಿ ಅವರಿಗೆ ಸನ್ಮಾನಿಸಿ ಆಶ್ರಮದ ಸದಸ್ಯರಿಗೆ ಬೇಕಾಗುವ ಹೊಸ ಬಟ್ಟೆ ಸಿಹಿ ತಿಂಡಿಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ನಮ್ಮ ಭಾರತ
ಪಡುಬಿದ್ರಿ ಕರ್ಣಾಟಕ ಪಬ್ಲಿಕ್ ಸ್ಕೂಲ್ ಆಟದ ಮೈದಾನ ಜಲ್ಲಿಕಲ್ಲು, ಕ್ರಷರ್ ಹುಡಿ ಶೇಖರಣಾ ಘಟಕವಾಗಿ ಬದಲಾಗಿದ್ದು, ಈ ಬಗ್ಗೆ ಆಕ್ರೋಶಿತರಾದ ಶಾಲಾ ಹಳೆ ವಿದ್ಯಾರ್ಥಿಗಳು ಒಂದು ವಾರದೊಳಗೆ ತೆರವುಗೊಳಿಸದಿದ್ದಲ್ಲಿ ನಾವು ಅದನ್ನು ಬೇರೆಗೆ ವರ್ಗಾಹಿಸುವ ಕೆಲಸ ಮಾಡಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ. ರಸ್ತೆ ದುರಸ್ಥಿಗಾಗಿ ಕಾರ್ಕಳ ಮೂಲದ ಗುತ್ತಿಗೆದಾರನೊರ್ವ ಕಳೆದ ಒಂದು ತಿಂಗಳ ಹಿಂದೆ ರಾಶಿ ರಾಶಿ ಜಲ್ಲಿಕಲ್ಲು ಸಹಿತ ಕ್ರೆಷರ್ ಹುಡಿಯನ್ನು ತಂದು ಮೈದಾನಕ್ಕೆ
ಪಡುಬಿದ್ರಿಯಲ್ಲಿ ನವೀಕೃತ ಹವಾನಿಯಂತ್ರಿತ ಸಿಟಿ ಶಾಖೆಯ ಉದ್ಘಾಟನಾ ಸಮಾರಂಭ ಹಾಗೂ ಕೃಷಿ ಸಲಕರಣೆಗಳ ಮಾರಾಟ ವಿಭಾಗದ ಶುಭಾರಂಭವು ಜು. 9 ರಂದು ನಡೆಯಲಿದೆ.ಗ್ರಾಹಕರಿಗೆ ಹವಾನಿಯಂತ್ರಿತ ಶಾಖೆಯೊಂದಿಗೆ ಸೊಸೈಟಿಯಲ್ಲಿ ದೊರಕುತ್ತಿರುವ ವಿವಿಧ ಸೇವೆಗಳನ್ನು ಆಧುನೀಕರಣ ಗೊಳಿಸುವ ಸಲುವಾಗಿ ಪಡುಬಿದ್ರಿ ಸೊಸೈಟಿಯ ಹೃದಯ ಶಾಖೆಯಾದÀ ಸಿಟಿ ಶಾಖೆಯನ್ನು ಸಂಪೂರ್ಣ ಹವಾನಿಯಂತ್ರಿತ ಶಾಖೆಯನ್ನಾಗಿ ನವೀಕೃತ ಗೊಳಿಸಿ ಇದರೊಂದಿಗೆ ಕೃಷಿ ಸಲಕರಣೆ ಮಾರಾಟ ವಿಭಾಗದ ಉದ್ಘಾಟನೆಯನ್ನು
ಲಾರಿಯೊಂದು ದ್ವಿಚಕ್ರ ವಾಹನದ ಮೇಲೆ ಮಗುಚಿ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರಿ ಜಂಕ್ಷನ್ ನಲ್ಲಿ ನಡೆದಿದೆ.ಮೃತರನ್ನು ಕಂಚಿನಡ್ಕ ನಿವಾಸಿ ಶಂಸುದ್ದೀನ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಲಾರಿ ಪಡುಬಿದ್ರಿ ಜಂಕ್ಷನ್‍ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದ ಮೇಲೆ ಮಗುಚಿಬಿತ್ತು. ಸ್ಥಳದಲ್ಲೇ ಮೃತಪಟ್ಟ ಶಂಶುದ್ದೀನ್ ಅವರ ಮೃತದೇಹವನ್ನು ಪೋಲಿಸರು ಸ್ಥಳೀಯರ























