ಪಡುಬಿದ್ರೆ : “ತುಡರ್ ಪರ್ಬದ ಗಮ್ಮತ್” ಕಾರ್ಯಕ್ರಮ

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ತುಡರ್ ಪರ್ಬದ ಗಮ್ಮತ್ ಎಂಬ ಹೆಸರಿನಡಿಯಲ್ಲಿ ಬಹಳ ಅರ್ಥ ಗರ್ಭಿತವಾಗಿ ದೀಪಾವಳಿ ಆಚರಣೆಯನ್ನು ಕಾಪು ರಾಜೀವ ಭವನದಲ್ಲಿ ನಡೆಸಿದ್ದಾರೆ.

ಕಾರ್ಯಕ್ರಮದ ಪ್ರಮುಖ ಅಂಗವಾಗಿ ಬೇರೆ ಬೇರೆ ಮೂರು ಅನಾಥಾಶ್ರಮವನ್ನು ನಡೆಸುತ್ತಿರುವ ಗಣ್ಯರನ್ನು ಕರೆಯಿಸಿ ಅವರಿಗೆ ಸನ್ಮಾನಿಸಿ ಆಶ್ರಮದ ಸದಸ್ಯರಿಗೆ ಬೇಕಾಗುವ ಹೊಸ ಬಟ್ಟೆ ಸಿಹಿ ತಿಂಡಿಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ನಮ್ಮ ಭಾರತ ಸರ್ವ ಜಾತಿ ಧರ್ಮಗಳ ಹೂ ದೋಟ, ದೀಪಾವಳಿ ಹಬ್ಬ ಸರ್ವಧರ್ಮಿಯರು ಒಂದಾಗಿ ಆಚರಿಸುವ ಮೂಲಕ ನಮ್ಮಲ್ಲಿನ ಮನದ ಕ್ಲೇಷ ದೂರವಾಗುವ ಮೂಲಕ ಸಮಾಜದಲ್ಲಿ ಸುಖಶಾಂತಿ ನೆಲಸಲು ಸಾಧ್ಯ ಎಂದರು. ಈ ಸಂದರ್ಭ ಹಿರಿಯ ಪತ್ರಕರ್ತ ಮೋಹನ್ ಚಂದ್ರ ನಬಿಯಾರ್, ದೀಪಕ್ ಎರ್ಮಾಳ್, ಗೀತಾ ವಾಗ್ಳೆ, ನವೀನ್ ಶೆಟ್ಟಿ, ಶೇಖರ್ ಹೆಜಮಾಡಿ ಮುಂತಾದವರಿದ್ದರು.
