ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ‘ಪಾರ್ಥ’ ಪುರುಷರ ಆಭರಣಗಳ ವಿಶೇಷ ಸಂಗ್ರಹ ಅನಾವರಣ
ಪ್ರತಿಷ್ಟಿತ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ‘ಪಾರ್ಥ’ ಪುರುಷರ ಆಭರಣಗಳ ಅತೀ ದೊಡ್ಡ ಹಾಗೂ ವಿಶೇಷ ಸಂಗ್ರಹವನ್ನು ನಾಯರ್ ಕನ್ಸ್ಟ್ರಕ್ಷನ್ ಮಾಲಕರಾದ ಸೂರಜ್ ನಾಯರ್ ಅವರು ಅನಾವರಣಗೊಳಿಸಿದರು. ಬಳಿಕ ಮಾತನಾಡಿ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಉತ್ತಮ ಸೇವೆ ಹಾಗೂ ವಿಫುಲವಾದ ಸಂಗ್ರಹ ಇದೆ. ನಾನು ಇಲ್ಲಿನ ಸಂತೃಪ್ತ ಗ್ರಾಹಕನಾಗಿದ್ದೇನೆ. ‘ಪಾರ್ಥ ಸಂಗ್ರಹದಿಂದ ಜಿಎಲ್ ಸಂಸ್ಥೆಯು ಯಶಸ್ವಿಯಾಗಲಿ ಎಂದು ಶುಭಹಾರೈಸಿದ್ರು.
ಈ ವೇಳೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಮಾಲಕರು ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.. ಇನ್ನು ಪಾರ್ಥ ಕಲೆಕ್ಷನ್ಸ್ ನಲ್ಲಿ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ Antique Finish ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ Watch ಚೈನ್ಸ್ ಅಲ್ಲದೇ ಇನ್ನು ವಿನೂತನ ವಿನ್ಯಾಸದ ಪಾರ್ಥ ಸಂಗ್ರಹ ಅನಾವರಣಗೊಂಡಿದೆ.