ಕಾರ್ಕಳ: ಹಣ್ಣು ಹಂಪಲಿನ ಅಂಗಡಿ ಬೆಂಕಿಗಾಹುತಿ: ಅಪಾರ ನಷ್ಟ
ಕಾರ್ಕಳದ ಪುಲ್ಕೇರಿ ಭವಾನಿ ವೃತ್ತದ ಬಳಿ ಇರುವ ಶಬ್ಬೀರ್ ಎಂಬವರ ಹಣ್ಣು ಹಂಪಲಿನ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಪಾರ ಪ್ರಮಾಣದ ಹಣ್ಣು ಹಂಪಲು ಹಾಗೂ ಮಾಪನ ಉಪಕರಣ ಮತ್ತು ಸಂಪೂರ್ಣ ಅಂಗಡಿ ಬೆಂಕಿಗೆ ಆಹುತಿಯಾಗಿದೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿಯನ್ನು ನಂದಿಸಿರುತ್ತಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು ತನಿಖೆ ಮಾಡುತ್ತಿದ್ದಾರೆ.