ತೆಂಗಿನ ಮರ ಹತ್ತುವವರಿಗೆ ಕೇರಾ ಸುರಕ್ಷಾ ವಿಮೆ ,ಮಾಹಿತಿ ಹಾಗೂ ನೋಂದಾವಣೆ ಕಾರ್ಯಕ್ರಮ
ಸಣ್ಣ ಪುಟ್ಟ ಕೂಲಿ ಕೆಲಸ ಮಾಡುವವರಿಗೂ ಸರ್ಕಾರದ ವಿವಿಧ ಸವಲತ್ತುಗಳು ದೊರೆಯುತ್ತೆ, ಆದರೆ ಕಷ್ಟ ಪಟ್ಟು ತೆಂಗಿನ ಮರ ಹತ್ತಿ ಜೀವನ ನಡೆಸುವವರಿಗೆ ಯಾವುದೇ ಪೂರಕ ವ್ಯವಸ್ಥೆಗಳು ಇಲ್ಲ ಎಂಬ ನೆಲೆಯಲ್ಲಿ ಪ್ರಾಣೇಶ್ ಹೆಜಮಾಡಿ ನೇತ್ರತ್ವದಲ್ಲಿ ಕೇರಾ ಸುರಕ್ಷಾ ವಿಮೆ ಬಗ್ಗೆ ಮಾಹಿತಿ ಹಾಗೂ ನೋಂದಣಿ ಕಾರ್ಯಕ್ರಮ ಹೆಜಮಾಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಲಾಲಾಜಿ ಆರ್. ಮೆಂಡನ್, ಬಾರೀ ಕಷ್ಟದ ಬದುಕು ತೆಂಗಿನ ಮರ ಹತ್ತುವ ಮಂದಿಯದ್ದು, ಯಾವುದೇ ಕಾರಣದಿಂದ ತೆಂಗಿನ ಮರದಿಂದ ಬಿದ್ದರೆ ಮೊದಲು ಏಟು ತಗುಲುವುದು ಬೆನ್ನು ಹುರಿಗೆ, ಬೆನ್ನು ಹುರಿಗೆ ಏಟು ಆಯಿತು ಎಂದರೆ ಆತ ಜೀವನ ಪರ್ಯಂತ ಕೆಲಸ ಮಾಡುವಂತ್ತಿಲ್ಲ, ಬಳಿಕ ಆತ ಮನೆಮಂದಿಗೆ ಹೊರೆಯಾಗಿ ಜೀವಿಸುವ ಅನಿವಾರ್ಯ ಸ್ಥಿತಿ, ಈ ಪರಿಸ್ಥಿಯಲ್ಲಿ ಹೆಜಮಾಡಿ ಗ್ರಾ.ಪಂ. ತೋಟಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಪಂಚಾಯುತಿ ಪ್ರಣೇಶ್ ಹೆಜಮಾಡಿ ನೇತ್ರತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಶ್ಲಾಘನೀಯ ಎಂದರು.
ವಿಮೆಯ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕಾ ಇಲಾಖಾ ಅಧಿಕಾರಿ ಭುವನೇಶ್ವರಿ, ತೆಂಗಿನ ಮರ ಹತ್ತುವವರು ಕೇವಲ. 99 ರೂಪಾಯಿ ಪ್ರೀಮಿಯಂ ಹಣ ಪಾವತಿಸಿ ಕೇರಾ ಸುರಕ್ಷಾ ವಿಮೆ ಮಾಡಿಸಿದ್ದಲ್ಲಿ, ಅವಘಢ ನಡೆದು ಪ್ರಾಣ ಕಳಕೊಂಡರೇ ಇಲ್ಲವೇ ಕೆಲಸ ಮಾಡಲು ಅಸಾಧ್ಯವಾದ ಸ್ಥಿತಿಯಲ್ಲಿ ಐದು ಲಕ್ಷ ರೂಪಾಯಿ ಪರಿಹಾರ ದೊರೆಯುತ್ತೆ. ಇಲ್ಲ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆ ಸೇರಿದರೆ ಎರಡುವರೆ ಲಕ್ಷ ರೂಪಾಯಿ ಪರಿಹಾರ ಮೊತ್ತ ದೊರೆಯುತ್ತೆ ಅಲ್ಲದೆ ಬೇರೆ ಬೇರೆ ರೂಪದಲ್ಲಿ ಇದರ ಪ್ರಯೋಜನಗಳು ದೊರೆಯುತ್ತದೆ ಎಂದರು. ಹೆಜಮಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪಾಂಡುರಂಗ ಕರ್ಕೇರ ವಹಿಸಿದ್ದರು. ಅಥಿತಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಪವಿತ್ರಾ ಗಿರೀಶ್ , ಅಭಿವೃದ್ಧಿ ಅಧಿಕಾರಿ ಇನಾಯತ್ ಆಲಿ, ಪಡುಬಿದ್ರಿ ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಿ.ಕೆ. ಸದಾನಂದ್, ಹಿರಿಯ ನಿವೃತ್ತ ತೋಟಗಾರಿಕಾ ಅಧಿಕಾರಿ ಸಂಜೀವ ನಾಯ್ಕ್, ಸಂಘಟಕ ಪ್ರಾಣೇಶ್ ಹೆಜಮಾಡಿ, ರಾಜೇಶ್ ಶೇರಿಗಾರ್ ಉಪಸ್ಥಿತರಿದ್ದರು.