ಸುರತ್ಕಲ್ ; ಸೌಹಾರ್ದ ಆಟಿಕೂಟ, ಗ್ರಾಮೀಣ ಆಟೋಟ ಸ್ಪರ್ಧೆ
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಸುರತ್ಕಲ್ ಬ್ಲಾಕ್ ಕಿಸಾನ್ ಘಟಕದ ವತಿಯಿಂದ ಸುರತ್ಕಲ್ ಪಡ್ರೆಯಲ್ಲಿ ಸೌಹಾರ್ದ ಆಟಿಕೂಟ, ಗ್ರಾಮೀಣ ಆಟೋಟ ಸ್ಪರ್ಧೆ ನಡೆಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಸೌಹಾರ್ದ ಆಟಿಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸ್ಪರ ಅರಿತು ಬಾಳುವ, ಸೌಹಾರ್ದತೆಯಿಂದ ಬಾಂಧವ್ಯವನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸುರತ್ಕಲ್ ಬ್ಲಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ ಅಧ್ಯಕ್ಷತೆ ವಹಿಸಿದ್ದರು. ಆಟಿ ಕಳೆಂಜ ಕುರಿತು ಕುತ್ತಾರ್ ತಿಮ್ಮಕ್ಕ ಪಾರ್ದನ ಹಾಡು ಗಮನ ಸೆಳೆಯಿತು. ಕೆಸರು ಗದ್ದೆಯಲ್ಲಿ ಓಟ, ವಾಲಿಬಾಲ್ ಆಟ, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಮಡಕೆ ಒಡೆಯುವುದು ಮತ್ತಿತ್ತರ ಸ್ಪರ್ಧೆಯನ್ನು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಾಬು ಶೆಟ್ಟಿ, ಬಾಬು ಬಂಡ್ರಿಯಾಲ್, ಕಿಸಾನ್ ಘಟಕದ ರಾಜೇಶ್ ಶೆಟ್ಟಿ ಪಡ್ರೆ, ಮಾಜಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಪದ್ಮನಾಭ, ಮಾಜಿ ಮೇಯರ್ ಕವಿತಾ ಸನಿಲ್, ಪ್ರತಾಪ್ ಚಂದ್ರ ಶೆಟ್ಟಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.