ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಲೋಡುಗಟ್ಟಲೆ ತ್ಯಾಜ್ಯ
ಬ್ರಹ್ಮಾವರ: ಕರಾವಳಿ ಜಿಲ್ಲೆಯಲ್ಲಿ ಕಳೆದ ಕೆಲವುದಿನದಿಂದ ಸುರಿಯುವ ಬಾರೀ ಮಳೆಯಿಂದ ಪ್ರವಾಹದಿಂದ ತುಂಬಿಹರಿಯುವ ನದಿಯಲ್ಲಿ ಬಾರಕೂರು ಬಳಿಯ ಸೀತಾನದಿಯ ನೀಲಾವರ ಕಿಂಡಿ ಅಣೆಕಟ್ಟಿನಲ್ಲಿ ಲೋಡುಗಟ್ಟಲೆ ತ್ಯಾಜ್ಯಗಳು ಸಿಲಿಕಿಕೊಂಡು ನದಿ ತೀರದಲ್ಲಿ ಕೃತಕ ನೆರೆ ಉಂಟಾಗಿದೆ.
ಪೂರ್ವ ಭಾಗವಾದ ಕೊಕ್ಕರ್ಣೆ ,ಎಳ್ಳಂಪಳ್ಳಿ, ಕರ್ದಾಡಿ, ಕೂರಾಡಿ ಭಾಗದಲ್ಲಿ ಸೇತುವೆಯಿಂದ ನದಿಗೆ ಎಸೆಯುವಖಾಲಿ ಬಾಟಲಿಗಳು ಬೃಹತ್ ಮರದದಿಮ್ಮಿಗಳು ಸತ್ತು ಬಿದ್ದ ಪ್ರಾಣಿಗಳು ಇಲ್ಲಿನ ಕಿಂಡಿಅಣೆಕಟ್ಟಿನಲ್ಲಿ ಸಿಲುಕಿಕೊಂಡು ಕಿಂಡಿಯಲ್ಲಿ ಸರಾಗವಾಗಿ ನೀರುಹರಿದುಹೋಗದೆ ಪರಿಸರದ ಕೃಷಿಭೂಮಿಗೆ ಕೃತಕನೆರೆ ಆವರಿಸಿ ಹಾನಿ ಹೆಚ್ಚುತ್ತದೆ.
ಘಟನೆಯನ್ನು ಕಂಡ ಉಡುಪಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತುರ್ತು ಗಮನಹರಿಸಿ ಭಾನುವಾರ ಹತ್ತಾರು ಜನರಿಂದ ತೆರವುಕಾರ್ಯ ಮಾಡಲಾಗುತ್ತಿದೆ. ಬೇಡದ ವಸ್ತುಗಳನ್ನು ತೋಡು, ಸರೋವರ, ನದಿಗಳಿಗೆ ಮತ್ತು ಎಲ್ಲೆಂದರಲ್ಲಿ ಎಸೆಯುವ ಜನರೇ ಇದಕ್ಕೆ ಕಾರಣರಾಗಿ ಇಂತಹ ಅವಾಂತರಕ್ಕೆ ಕಾರಣವಾಗುತ್ತದೆ.