ಕೆಎಸ್ಆರ್ ಪಿ ಘಟಕದಲ್ಲಿ ವಿಶ್ವ ಪರಿಸರ ದಿನಾಚರಣೆ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯಮೀಸಲು ಪೊಲೀಸ್, 7ನೇ ಪಡೆ, ಮಂಗಳೂರು ಘಟಕದಲ್ಲಿ ಸರಳ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಅದರಂತೆ 7ನೇ ಪಡೆ ಕೆಎಸ್‍ಆರ್‍ಪಿ, ಮಂಗಳೂರು ಘಟಕದಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಪರಿಸರ ಉಳಿಸುವ ಹಿತದೃಷ್ಟಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಸೈಕಲ್ ಜಾಥಾಕ್ಕೆ ಘಟಕದ ಕಮಾಂಡೆಂಟ್ ಬಿ ಎಂ ಪ್ರಸಾದ್‍ರವರು ಚಾಲನೆ ನೀಡಿದರು. ಸೈಕಲ್ ಜಾಥಾವನ್ನು ಕರ್ನಾಟಕರಾಜ್ಯ ಮೀಸಲು ಪೊಲಿಸ್ ಘಟಕದ ಆಡಳಿತ ಕಛೇರಿಯ ಮುಂಭಾಗದಿಂದ ಪ್ರಾರಂಭಿಸಿ, ಅಸೈಗೋಳಿ ಮೂಲಕವಾಗಿ ಕೋಣಾಜೆ, ಮುಡಿಪು ಹಾಗೂ ಇರಾಗ್ರಾಮದವರೆಗೆ ಸೈಕಲ್‍ಜಾಥಾವನ್ನು ಮಾಡಲಾಯಿತು. ನಂತರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಇದೇ ಸಂದರ್ಭದಲ್ಲಿ ಘಟಕದ ಕಮಾಂಡೆಂಟ್‍ರವರಾದ ಬಿ ಎಂ ಪ್ರಸಾದ್, ಪೊಲೀಸ್‍ಇನ್ಸ್‍ಪೆಕ್ಟರ್‍ರವರಾದ ಗಣೇಶ ನಾಯ್ಕ, ಗಣೇಶ ಕೊನಬೇವು, ಮಹಮ್ಮದ್‍ಆರೀಸ್, ಸೋನು ಕಮಲ್‍ನಾಗಪಾಲ್, ಮತ್ತುಘಟಕದಅಧಿಕಾರಿ ಸಿಬ್ಬಂದಿಯವರು ಹಾಜರಿದ್ದರು.