ಮಂಗಳೂರು: ಕೆವಿಎಎಫ್‌ಎಸ್‌ಯುಗೆ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ನಾಮನಿರ್ದೇಶನ

ರೈಸನ್ ನ್ಯೂಟ್ರಿಷನ್ ಸಂಸ್ಥೆಯ ನಿರ್ದೇಶಕ ಡಾ. ಸುಶಾಂತ್ ರೈ ಬೆಳ್ಳಿಪ್ಪಾಡಿ ಅವರನ್ನು ಮೂರು ವರ್ಷಗಳ ಅವಧಿಗೆ ರಾಜ್ಯ ಸರ್ಕಾರವು ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ನಾಮನಿರ್ದೇಶನ ಮಾಡಿದೆ.

ಡಾ. ಸುಶಾಂತ್ ರೈ 2019-24ರ ವರೆಗೆ ಕರ್ನಾಟಕ ಕೋಳಿ ಸಾಕಾಣೆದಾರರ ಮತ್ತು ತಳಿಗಾರರ ಸಂಘದ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸಿದ್ದರು.
ಹೈದ್ರಾಬಾದ್‌ನ ಐಸಿಎಆರ್-ಎನ್ ಐಎಎನ್‌ಪಿ ಮತ್ತು ಐಸಿಎಆರ್-ಡಿಪಿಆರ್‌ನ ಸಂಶೋಧನ ಸಲಹಾ ಸಮಿತಿ ಸದಸ್ಯರಾಗಿದ್ದ ಅವರು, 2024ರಲ್ಲಿ ಕರ್ನಾಟಕದಿಂದ ವಿಸಿಐ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ.