ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬ್ರಹ್ಮಸಭೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ಸಾರಥ್ಯದಲ್ಲಿ ಬ್ರಹ್ಮಸಭೆಯು ನಂತೂರಿನ ಶ್ರೀ ಭಾರತೀ ಕಾಲೇಜಿನ ಶಂಕರ ಶ್ರೀ ಸಭಾಂಗಣದಲ್ಲಿ ನಡೆಯಿತು. ಮಂಗಳೂರಿನ ನಂತೂರು ಭಾರತಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬ್ರಹ್ಮಸಭೆಯ ಉದ್ಘಾಟನಾ ಸಮಾರಂಭ ಜರುಗಿತ್ತು. ಇನ್ನು ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆರ. ಅಶೋಕ್ ಹಾರನಹಳ್ಳಿ ಅವರು ಉದ್ಘಾಟಿಸಿದರು. ತದ ಬಳಿಕ ಮಾತನಾಡಿದ ಅವರು, ಒಂದು ಕಾಲದಲ್ಲಿ ನಾನು ಜಾತ್ಯತೀತ ಮನೋಭಾವದಲ್ಲಿದ್ದೆ. ಆದರೆ ಕಾಲಾಂತರದಲ್ಲಿ ಬ್ರಾಹ್ಮಣ ಎಂಬ ಕಾರಣಕ್ಕೆ ತುಳಿಯುವ ಕೆಲಸ ನಡೆಯಿತು. ಹಿಂದೊಮ್ಮೆ ಹೈಕೋರ್ಟ್ ಜಜ್ ಆಗುವ ಅವಕಾಶ ಇತ್ತು. ಆದರೆ ಬ್ರಾಹ್ಮಣ ಎಂಬ ಕಾರಣಕ್ಕೆ ನಿರಾಕರಿಸಲಾಯಿತು ಎಂದರು.

ಬ್ರಾಹ್ಮಣರಿಗೆ ಅವಕಾಶ ಕೊಟ್ಟರೆ ಉಳಿದ ಜಾತಿಗಳು ಆಕ್ರೋಶ ವ್ಯಕ್ತಪಡಿಸುತ್ತವೆ ಎಂಬ ಕಾರಣಕ್ಕೆ ಸರಕಾರ ಕೂಡಾ ಅವಕಾಶ ನಿರಾಕರಿಸಿ ತುಳಿಯುವ ಕೆಲಸ ಮಾಡುತ್ತಿದೆ. ಅರ್ಹತೆ, ಕೌಶಲ್ಯ ವಿಚಾರದಲ್ಲಿ ಮೀಸಲಾತಿ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಕೆಟ್ ತಂತ್ರಜ್ಞಾನ ಹೋಗಲೂ ಮೀಸಲಾತಿ ಕೊಡುತ್ತೀರ ? ಎಂದು ವ್ಯಂಗ್ಯವಾಡಿದರು. ಬ್ರಾಹ್ಮಣರಲ್ಲಿಯೂ ಅನೇಕರು ಸಂಕಷ್ಟಿದಲ್ಲಿದ್ದಾರೆ. ದೇವಸ್ಥಾನಗಳಲ್ಲಿ ಅರ್ಚಕರಿಗೆ ಕನಿಷ್ಠ ವೇತನ ಇಲ್ಲ. ಆಡಳಿತದಲ್ಲಿ ಲಂಚ ಭ್ರಷ್ಟಾಚಾರ ತಾಂಡವ ಆಡುತ್ತಿರುವಾಗ, ಅರ್ಚಕರ ತಟ್ಟೆ ಕಾಸಿನ ಕುರಿತು ಮಾತನಾಡುವುದರಲ್ಲಿ ಅರ್ಥವೇ ಇಲ್ಲ ಎಂದರು.

ಸಂಘಟನಾ ಕಾರ್ಯದರ್ಶಿ ಬಿ.ಎಸ್. ರಾಘವೇಂದ್ರ ಭಟ್ ಮಾತನಾಡಿ, ಸಂಸ್ಕಾರ, ಸಂಘಟನೆ ಸ್ವಾವಲಂಬನೆ ಧ್ಯೇಯವಾಕ್ಯದಡಿ ಮಹಾಸಭೆ ಮುಂದಡಿ ಇಡುತ್ತಿದೆ. ಸಂಸ್ಕಾರ ಉಳಿಯಬೇಕಾದರೆ ಮಹಿಳೆಯರ ಪಾತ್ರ ಹಿರಿದು. ಬ್ರಾಹ್ಮಣ ಸಂಸ್ಕಾರದ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆ ತಲುಪಿಸಬೇಕಾದರೆ ತಾಯಂದಿರು ಮಕ್ಕಳಿಗೆ ತಿಳಿಸಬೇಕು. ಆದ್ದರಿಂದ ಮಹಿಳೆ ಮತ್ತು ಯುವಕರಿಗೆ ಸಂಘಟನೆ ಪ್ರಧಾನ್ಯತೆ ನೀಡಿದೆ ಎಂದು ಅವರು ಹೇಳಿದರು. ಅಶೋಕ್ ಹಾರನಹಳ್ಳಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಬ್ರಾಹ್ಮಣ ಬಂಧುಗಳ ಪರವಾಗಿ ಗೌರವಾರ್ಪಣೆ ನಡೆಯಿತು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮಂಗಳೂರು ವಿವಿ ಕುಲಪತಿ ವಿ.ಎಸ್. ಯಡಪಡಿತ್ತಾಯ, ಎಂ.ಆರ್.ವಾಸುದೇವ ಅವರು ಮಹಾ ಸಬಾ ಅಧ್ಯಕ್ಷ ಹಾರನಹಳ್ಳಿ ಅವರನ್ನು ಸನ್ಮಾನಿಸಿದರು. ಇದಕ್ಕೂ ಮೊದಲು ನಂತೂರಿನ ಶ್ರೀ ಭಾರತಿ ಕಾಲೇಜಿನಲ್ಲಿ ಕಚೇರಿಯನ್ನು ಉದ್ಘಾಟನೆಗೊಂಡಿತು.

ಈ ವೇಳೆ ಡಾ ಹರಿಕೃಷ್ಣ ಪುನರೂರು, ಸತ್ಯಶಂಕರ ಬೊಳ್ಳಾವ,ಶರವು ರಾಘವೇಂದ್ರ ಶಾಸ್ತ್ರಿ,ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಕಶೆಕೋಡಿ,ಉಪಾಧ್ಯಕ್ಷ ಮಹೇಶ್ ಕಜೆ, ಸದಸ್ಯ ಪೆÇಳಲಿ ಗಿರಿಪ್ರಕಾಶ ತಂತ್ರಿ, ಶಿವಳ್ಳಿ ಸ್ಪಂದನ ಅಧ್ಯಕ್ಷ ಕೃಷ್ಣ ಭಟ್ ಕದ್ರಿ, ರಾಮಚಂದ್ರಪುರ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ಕೂಟ ಮಹಾಜಗತ್ತಿನ ಅಧ್ಯಕ್ಷ ಚಂದ್ರಶೇಖರ ಮಯ್ಯ, ಕರಾಡ ಸಂಘ ಮಾಜಿ ಅಧ್ಯಕ್ಷ ಪುರುಷೋತ್ತಮ ಭಟ್, ಸ್ಥಾನಿಕ ಸಭಾ ಅಧ್ಯಕ್ಷ ಹರ್ಷ ಕುಮಾರ ಕೇದಿಗೆ, ಚಿತ್ಪಾವನ ಸಮಾಜದ ಅಧ್ಯಕ್ಷೆ ಪದ್ಮಜಾ, ಹೊಯ್ಸಳ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಮಂಗಳೂರು ವಲಯ ಅಧ್ಯಕ್ಷ ಎಂ.ಎಸ್. ಗುರುರಾಜ, ಹವ್ಯಕ ಮಹಾ ಮಂಡಲ ಮಂಗಳೂರು ಹೋಬಳಿ ಅಧ್ಯಕ್ಷ ಗಣೇಶಕೃಷ್ಣ ಕಾಶಿಮಠ, ಕಾರ್ಯಕಾರಿ ಸಮಿತಿಯ ಚೇತನಾ ದತ್ತಾತ್ರೇಯ, ಉಮಾ ಸೋಮಯಾಜಿ, ನ್ಯಾಯವಾದಿ ಮಹೇಶ್ ಕಜೆ , ಡಾ.ಗೋವಿಂದ ಪ್ರಸಾದ್ ಕಜೆ , ಹರಿಪ್ರಸಾದ್ ಪೆರಿಯಾಪು ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.