ಮಂಗಳೂರು : ಫೆ.24ರಂದು ಕೆ.ಟಿ.ಗಟ್ಟಿ ಅವರಿಗೆ ನುಡಿ ನಮನ
ಮಂಗಳೂರು : ಇತ್ತೀಚೆಗೆ ನಿಧನರಾದ ಖ್ಯಾತ ಕಾದಂಬರಿಕಾರ , ಭಾಷಾ ತಜ್ಞ, ಶಿಕ್ಷಕ ಕೆ.ಟಿ.ಗಟ್ಟಿ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಫೆ.24 ರ ಶನಿವಾರ ಅಪರಾಹ್ನ ಗಂಟೆ 3.30ಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಸಮೀಪ ಇರುವ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಲಿದೆ.
ಕೆ.ಟಿ.ಗಟ್ಟಿಯವರ ಅಭಿಮಾನಿಗಳು, ಸಾಹಿತ್ಯ, ಸಾಮಾಜಿಕ, ರಾಜಕೀಯ , ಶೈಕ್ಷಣಿಕ ಕ್ಷೇತ್ರದವರೆಲ್ಲರೂ ಜೊತೆಯಾಗಿ ಗೌರವಪೂರ್ಣ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.