ಮಂಜೇಶ್ವರ: ರಸ್ತೆ ಬದಿ ಹೂವಿನ ಗಿಡ ನೆಡುವ ಕಾರ್ಯಕ್ರಮ
ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತ್ ಮತ್ತು ಕೆಎಯು –ಇಟಿಸಿ ಮಂಜೇಶ್ವರ ಸಹಯೋಗದಲ್ಲಿ ವರ್ಕಾಡಿ ಪಂಚಾಯತಿನ ಹದಿಮೂರನೇ ಧರ್ಮನಗರ ವಾರ್ಡ್‍ನ ಪಿ.ಎಚ್.ಸಿ- ಕೆವಿಕೆ ರಸ್ತೆಯ ಬದಿಗಳಲ್ಲಿ ಹೂವಿನ ಗಿಡಗಳನ್ನು ನೆಡುವ ಮೂಲಕ ಹರಿತ ರೋಡ್ ಕಾರ್ಯಕ್ರಮಕ್ಕೆ ಹೂವಿನ ಗಿಡಗಳನ್ನು ನೆಟ್ಟು ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಚಾಲನೆ ನೀಡಿದರು.
ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಸಾಮಾನಿ, ಪಂಚಾಯತ್ ಸದಸ್ಯರಾದ ಇಬ್ರಾಹಿಂ ಧರ್ಮನಗರ, ಕಾರ್ಯದರ್ಶಿ ಅನಿಲ್ ಕುಮಾರ್, ಆಸೂತ್ರಣ ಸಮಿತಿ ಉಪಾಧ್ಯಕ್ಷ ಮೊಹಮ್ಮದ್ ಮಜಾಲ್, ಕೆವಿಕೆ ಪೆÇ್ರಫೆಸರ್ ಆಡಿ. ರಮೇಶ್ ಬಾರಿಕ್ಕಾಡ್,ಅಸಿಸ್ಟೆಂಟ್ ಪೆÇ್ರಫೆಸರ್ ಆಡಿ. ಅಖಿಲ್ ಅಜಿತ್ , ಫಾರ್ಮ್ ಆಫೀಸರ್ ಉಮ್ಮು ರಾಹಿಲ, ಕೆನರಾ ಬ್ಯಾಂಕ್ ಮ್ಯಾನೇಜರ್ ಮಿಥುನ್ ಮತ್ತಿತರರು ಉಪಸ್ಥಿತರಿದ್ದರು.