ಶ್ರೀ ಮನೋಹರ್ ಕೆ ಪುತ್ರನ್ ಮುಂಬೈ(75) ನಿಧನ
ಮೂಲತ: ಎರ್ಮಾಳು ತೆಂಕ ದವರಾದ ಇವರು ತಮ್ಮ ವಿದ್ಯಾಭ್ಯಾಸವನ್ನು ಊರಿನಲ್ಲಿ ಮುಗಿಸಿ ಮುಂಬೈಯಲ್ಲಿ ಉನ್ನತ ವ್ಯಾಸಂಗ ವನ್ನು ಮಾಡಿ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಕಂಪನಿ ಯಲ್ಲಿ 35 ವರ್ಷ ಉನ್ನತ ಹುದ್ದೆ ಯಲ್ಲಿ ಇದ್ದು ನಿವೃತ್ತಿಯನ್ನು ಹೊಂದಿರುತ್ತಾರೆ.
ಮುಂಬೈ ಯಲ್ಲಿ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದು ಎರ್ಮಾಳು ತೆಂಕ ಮೊಗವೀರ ಸಭಾ ಮುಂಬೈ ಇದರ ಉಪಾಧ್ಯಕ್ಷರಾಗಿ ಕಾರ್ಯನಿರ್ವ ಹಿಸಿದ್ದು ಪ್ರಸ್ತುತ ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಮುಂಬೈ ಇದರ ಅಧ್ಯಕ್ಷರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಎರ್ಮಾಳು ತೆಂಕದಲ್ಲಿ ನಡೆಯುತ್ತಿರುವ ಕಿನಾರ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು. ಇವರ ನಿಧನ ಸುದ್ಧಿ ತಿಳಿಯುತ್ತಿದಂತೆ ಎರ್ಮಾಳಿಕ ಕಿನರಾ ಆಂಗ್ಲ ಮಾದ್ಯಮ ಶಾಲೆಗೆ ರಜೆ ಸಾರಲಾಗಿದೆ. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಯನ್ನು ಆಗಲಿದ್ದಾರೆ.