ಶತಮಾನೋತ್ತರ ದಶಮಾನೋತ್ತರ ಸಂಭ್ರಮದಲ್ಲಿ ಎಂಸಿಸಿ ಬ್ಯಾಂಕ್

ಕರಾವಳಿಯ ಮುಂಚೂಣಿ ಸಹಕಾರಿ ಲಿಮಿಟೆಡ್ ಬ್ಯಾಂಕ್ಗಳಲ್ಲಿ ಒಂದಾದ ಎಂಸಿಸಿ ಬ್ಯಾಂಕ್ ಮಂಗಳೂರು ಇದ್ರ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮವು ನಗರದ ಮಿಲಾಗ್ರಿಸ್ ಕಾಲೇಜಿನ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಬಿಷಪ್ ರೆವರೆಂಡ್ ಡಾ. ಪೀಟರ್ ಪಾವ್ಲ್ ಸಲ್ಡಾನಾ ಮತ್ತು ಉಡುಪಿ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು, ಸಮಾಜಕ್ಕೆ ಸಲ್ಲತ್ತಕ್ಕದ್ದಕಿಂತಲೂ ಉದಾರತೆಯ ತತ್ವ ಅದನ್ನು ಯಾವುದೇ ಸಂಸ್ಥೆ ಮಾಡಿದಾಗ ಅದು ಸಮಾಜದ ಹೆಮ್ಮೆಯಾಗಿ ನಿಲ್ಲುತ್ತದೆ. ಎಂಸಿಸಿ ಬ್ಯಾಂಕ್ ತಮ್ಮ ನಿವ್ವಳ ಲಾಭದಿಂದ ಒಂದು ಭಾಗವಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಒದಗಿಸುವ ಮೂಲಕ ಆದರ್ಶ ಮೆರೆದಿದೆ ಎಂದು ಹೇಳಿದರು.

ಆನಂತರ ಆಶೀರ್ವಚನ ನೀಡಿದ ಉಡುಪಿ ಬಿಷಪ್ ರೇ.ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು, ಸೇವಾ ಕ್ಷೇತ್ರವೊಂದರ ಹಿರಿಮೆ ಹಾಗೂ ಗುಣಮಟ್ಟದಲ್ಲಿ ಶ್ರೇಷ್ಠತೆ ಪ್ರದರ್ಶಿಸಬೇಕಾದರೆ ಅದಕ್ಕೆ ಸೇವೆಯ ಶ್ರೇಷ್ಠತೆಯೇ ಮುಖ್ಯ ಎಂದು ಹೇಳಿದರು.
ಇದೇ ವೇಳೆ ಬ್ಯಾಂಕ್‍ನ ಮಾಜಿ ಅಧ್ಯಕ್ಷ ವೆಲಂಟೈನ್ ಡಿಸಿಲ್ವ ಅವರನ್ನು ಸನ್ಮಾನಿಸಲಾಯತು.ಎಂಸಿಸಿ ಬ್ಯಾಂಕ್‍ನ ಅಧ್ಯಕ್ಷ ಅನಿಲ್ ಲೋಬೋ ಅವರು ಸ್ವಾಗತಿಸಿ ಪ್ರಸ್ತಾವಿಸಿದರು. ಎಂಸಿಸಿ ಬ್ಯಾಂಕ್‍ನ ಸ್ಥಾಪಕ ಪಿಎಫ್‍ಎಕ್ಸ್ ಸಾಲ್ಡಾನಾ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಇದೇ ವೇಳೆ ಗಣ್ಯರು ಎಂಸಿಸಿ ಬ್ಯಾಂಕ್‍ನ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಎಂಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ಎಂಸಿಸಿ ಬ್ಯಾಂಕ್ ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್, ಎಂಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಆಂಡ್ರೂ ಡಿಸೋಜ, ಮಾರ್ಸೆಲ್ ಎಮ್ ಡಿಸೋಜ, ಜೋಸೆಫ್ ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೆರೋ, ಎಲ್ರೋಯ್ ಕೆ ಕ್ರಾಸ್ಟೊ, ಜೆ.ಪಿ ರೊಡ್ರಿಗಸ್, ಡೇವಿಡ್ ಡಿಸೋಜ, ರೋಶನ್ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೋ, ಡಾ. ಫ್ರೀಡಾ ಡಿಸೋಜ, ಸಿ.ಜಿ ಪಿಂಟೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಪಿ ಮೊಂತೇರೊ, ಶರ್ಮಿಳಾ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.