30 ಸೆಕೆಂಡ್‍ಗಳಲ್ಲಿ ಫುಟ್ಬಾಲ್‍ನೊಂದಿಗೆ 10 ನಟ್ ಮೆಗ್ ಮಾಡಿ ಗಿನ್ನೆಸ್ ದಾಖಲೆ ಬರೆದ ಮುಹಮ್ಮದ್ ಶಲೀಲ್
ಉಳ್ಳಾಲ: ಕೇವಲ ಮೂವತ್ತು ಸೆಕೆಂಡುಗಳಲ್ಲಿ ಫುಟ್ಬಾಲ್ ನೊಂದಿಗೆ 10 ನಟ್ ಮೆಗ್‍ಗಳನ್ನು ಮಾಡಿ ಸಾಧನೆ ಮಾಡುವ ಮೂಲಕ ಬೆಳ್ಮ ದೇರಳಕಟ್ಟೆ ನಿವಾಸಿ ಮೊಹಮ್ಮದ್ ಶಲೀಲ್ ಅನ್ನುವ ಯುವಕ ವಿಶ್ವದಲ್ಲಿ ಇಬ್ಬರ ದಾಖಲೆ ಮುರಿದು ಗಿನ್ನೆಸ್ ದಾಖಲೆ ಬರೆದಿದ್ದಾರೆ. 2017ರಲ್ಲಿ ಇಂಗ್ಲೆಂಡ್ ನ ಡೆಲೆ ಅಲ್ಲಿ ಅನ್ನುವ ವ್ಯಕ್ತಿ 30 ಸೆಕೆಂಡುಗಳಲ್ಲಿ 7 ನಟ್ ಮೆಗ್‍ಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನೆಸ್ ದಾಖಲೆ ಸಾಧಿಸಿದ್ದರು.2021 ರ ಫೆಬ್ರವರಿಯಲ್ಲಿ ಮಹಿಳಾ ಪುಟ್ಬಾಲ್ ಆಟಗಾರ್ತಿ ಅಮೆರಿಕಾ ಕ್ಯಾಲಿಪೋರ್ನಿಯಾದ ವೆಸ್ಟ್ ಲೇಕ್ ಹಳ್ಳಿಯ ತಾಷಾ ನಿಕೋಲ್ ತೇರಾನಿ ಒಂದು ನಿಮಿಷದಲ್ಲಿ 18 ಸುತ್ತುಗಳನ್ನು ಹೊಡೆಯುವ ಮೂಲಕ ಗಿನ್ನೆಸ್ ದಾಖಲೆ ಸಾಧಿಸಿ ಪುಸ್ತಕದ ಪುಟಗಳಲ್ಲಿ ಸೇರಿದ್ದರು. ಇದೀಗ ಅವರಿಬ್ಬರ ದಾಖಲೆಗಳನ್ನು ಮುರಿದು ಬೆಳ್ಮ ದೇರಳಕಟ್ಟೆ ನಿವಾಸಿ ಆರ್.ಬಿ ಅಬ್ದುಲ್ ಹಮೀದ್ ಮತ್ತು ಮುಮ್ತಾಝ್ ದಂಪತಿ ಪುತ್ರ ಮೊಹಮ್ಮದ್ ಶಲೀಲ್ ಸಾಧಿಸಿದ್ದಾರೆ.
ಕೂಳೂರು ಯೆನೆಪೆÇೀಯ ಸಂಸ್ಥೆಯಲ್ಲಿ ಏವಿಯೇಷನ್ ಆಂಡ್ ಲಾಜಿಸ್ಟಿಕ್ಸ್ ಕಾಲೇಜಿನ ಅಂತಿಮ ವಿದ್ಯಾರ್ಥಿಯಾಗಿರುವ ಶಲೀಲ್ ಹವ್ಯಾಸಿ ಫುಟ್ಬಾಲ್ ಆಟಗಾರ. ಒಂದು ತಿಂಗಳ ಹಿಂದೆ ಆನ್ಲೈನ್ ಮೂಲಕ ಗಿನ್ನೆಸ್ ದಾಖಲೆ ಸಾಧಿಸಲು ಅರ್ಜಿಯನ್ನು ಹಾಕಲಾಗಿತ್ತು. ತಿಂಗಳ ಬಳಿಕ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಆನ್ಲೈನ್ ವೀಡಿಯೋ ಮೂಲಕ ಪರೀಕ್ಷೆಯನ್ನು ಕೊಟ್ಟಿದ್ದೆನು. ಒಂದು ವಾರದಲ್ಲಿ ಇಮೇಲ್ ಗೆ ಫಲಿತಾಂಶ ಬಂದಿದೆ. 10ರ ಹರೆಯದಿಂದಲೇ ಫುಟ್ಬಾಲ್ ಆಟದಲ್ಲಿ ಆಸಕ್ತಿ ಹೊಂದಿದ್ದು, ಗೆಳೆಯರ ಜೊತೆಗೆ ನಿರಂತರವಾಗಿ ಮನೆ ಹಿಂಬದಿಯಲ್ಲೇ ಆಟವಾಡುತ್ತಿದ್ದೆವು. ಹೀಗೆ ` ಮೋಸ್ಟ್ ಬಿಟ್ವೀನ್ ದ ಲೆಗ್ ಫಿಗರ್ ಎಯ್ಟ್?ಸ ‘ ಕುರಿತು ಆನ್ಲೈನ್ ಮೂಲಕ ನೋಡಿ ಆಸಕ್ತಿಯನ್ನು ಹೊಂದಿ ಸಾಧಿಸುವ ಛಲವನ್ನು ಇಟ್ಟುಕೊಂಡಿದ್ದೆನು. ಅದಕ್ಕಾಗಿ ಎರಡು ವರ್ಷಗಳಿಂದ ನಿರಂತರ ತರಬೇತಿಯನ್ನು ಮಾಡಿಕೊಳ್ಳುತ್ತಿದ್ದೆನು.
ಪರಿಶ್ರಮ , ಮನೆಯವರ ಪ್ರೀತಿ, ಸಹೋದರ ಹಾಗೂ ಸೋದರ ಸಂಬಂಧಿಗಳ ಪ್ರೋತ್ಸಾಹ ಕೈಬಿಡಲಿಲ್ಲ. ಕಾಸರಗೋಡಿನ ಗೆಳೆಯ ಮುದಸ್ಸಿರ್ ದಾಶ್ ಬೆಲೆಬಾಳುವ ಫುಟ್ಬಾಲ್ ಅನ್ನು ಕೊಡುಗೆಯಾಗಿ ನೀಡಿದರು. ಹೆತ್ತವರು, ಗೆಳೆಯರು, ಸಹೋದರ ಬಾಷಿಂ ಹಾಗೂ ಸೋದರ ಸಂಬಂಧಿ ಶಾಹಿಲ್ ಇಬ್ಬರ ಪ್ರೋತ್ಸಾಹ ಇಷ್ಟೆತ್ತರಕೆ ಬೆಳೆಸಿದೆ ಅನ್ನುವ ಹೆಮ್ಮೆಯಿದೆ. ಒಂದು ವಾರದ ಬಳಿಕ ಪ್ರಮಾಣ ಪತ್ರ ಕೈಗೆ ಸಿಗುವುದು. ಅಧ್ಯಯನ ನಡೆಸುತ್ತಿರುವ ಕಾಲೇಜಿನ ಪ್ರಾಂಶುಪಾಲರು ಅಭಿನಂದಿಸಿದ್ದಾರೆ, ಕಾಲೇಜಿನಲ್ಲಿ ಸಿಹಿತಿಂಡಿಯನ್ನೂ ಹಂಚಿ ಸಂಭ್ರಮಿಸಿದ್ದಾರೆ. ಗೂಗಲ್ ನಲ್ಲಿ ವಿಶ್ವಖ್ಯಾತಿಯನ್ನು ಗಳಿಸಿ ದಾಖಲಾಗಿರುವ ನನ್ನ ಹೆಸರು ಕಂಡು ತುಂಬಾ ಖುಷಿಯಾಗುತ್ತಿದೆ. ಇನ್ನಷ್ಟು ಹೆಚ್ಚು ಅಭ್ಯಾಸ ಕೈಗೊಂಡು ಮತ್ತೆ ದಾಖಲೆ ನಡೆಸುವ ಪ್ರಯತ್ನ ಮುಂದುವರಿಸುವೆ. ಅವಕಾಶ ಸಿಕ್ಕಿದಲ್ಲಿ ರಾಜ್ಯ ಫುಟ್ಬಾಲ್ ತಂಡ ಮತ್ತು ರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿ ಭಾಗಿಯಾಗುವ ದೂರಾಲೋಚನೆಯನ್ನು ಇಟ್ಟುಕೊಂಡಿರುವೆ ‘ ಎಂದು ಪ್ರತಿಕ್ರಿಯಿಸಿದ್ದಾರೆ.