ಗಣೇಶ್ ಸೈಕಲ್ ವರ್ಕ್ಸ್ ನ ನಾಗೇಶ್ ರಾವ್ ಮೂಡುಬಿದಿರೆ
ಮೂಡುಬಿದಿರೆ :ಇಲ್ಲಿನ ಲಾವಂತಬೆಟ್ಟು ಪರಿಸರದಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಗಣೇಶ್ ಸೈಕಲ್ ವರ್ಕ್ಸ್ ಮೂಲಕ ಜನಾನುರಾಗಿಯಾಗಿದ್ದ ನಾಗೇಶ್ ರಾವ್ ( 85 ವ) ಸೋಮವಾರ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ ,ಪುತ್ರಿಯನ್ನು ಅಗಲಿದ್ದಾರೆ. ಎಂಬತ್ತರ ದಶಕದಲ್ಲಿ ಮೂಡುಬಿದಿರೆಯಲ್ಲಿ ಬಾಡಿಗೆ ಸೈಕಲ್ ಗಳ ಮೊದಲ ವರ್ತಕರಾಗಿ ಬಹಳಷ್ಟು ಎಳೆಯ ಹುಡುಗರಿಗೆ ಅಂದಿನ ದಿನಗಳಲ್ಲಿ ಬಾಡಿಗೆ ಸೈಕಲ್ ಮೂಲಕ ಸೈಕಲ್ ಕಲಿಕೆಗೆ ಅವರು ಕಾರಣರಾಗಿದ್ದರು ಸೈಕಲ್ ರಿಪೇರಿಯ ಜೊತೆಗೆ ಸಣ್ಣ ವ್ಯಾಪಾರಿಯಾಗಿಯೂ ಅವರು ಗುರುತಿಸಿಕೊಂಡಿದ್ದರು ಮೂಡಬಿದಿರೆಯ ರಾಮ ಕ್ಷತ್ರಿಯ ಸೇವಾ ಸಂಘದ ಗೌರವಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.