ಮೂಡುಬಿದಿರೆಯ ವಾಲ್ಪಾಡಿಯಲ್ಲಿ ಸೋಣದ ಕೋಲ

ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ವಾಲ್ಪಾಡಿ ಗ್ರಾಮದಲ್ಲಿ ಶ್ರೀ ರಾಜಂದೈವ ಮತ್ತು ಬ್ರಹ್ಮ ಬೈದರ್ಕಳ ದೈವಸ್ಥಾನ ಇಲ್ಲಿ ಮಂಗಳವಾರ ಕೊಡಮಣಿತ್ತಾಯ ಮತ್ತು ಕುಕ್ಕಿನಂತ್ತಾಯ ದೈವಗಳಿಗೆ ಸೋಣದ ಕೋಲ ನಡೆಯಿತು.

ಸುಮಾರು 105 ವರ್ಷಗಳ ಇತಿಹಾಸವಿರುವ ಈ ದೈವಸ್ಥಾನವನ್ನು ಏಳ್ನಾಡು ಗುತ್ತಿನವರು ಕಟ್ಟಿ ಬೆಳೆಸಿದ್ದರು. ನಂತರ ನಾಗಣ್ಣ ಹೆಗ್ಡೆ ಅವರ ಅವರ ನೇತೃತ್ವದಲ್ಲಿ ಪುನರ್ ನಿರ್ಮಾಣಗೊಂಡಿದ್ದು ಕಳೆದ 10 ವರ್ಷಗಳಿಂದ ಇಲ್ಲಿ ಸೋಣದ ಕೋಲ ನಡೆಯುತ್ತಾ ಬರುತ್ತಿದೆ.

sonada kola

ಊರಿನ ನಾಲ್ಕು ಗುತ್ತು ಬರ್ಕೆಯವರು ಸೇರಿ ಈ ಸೋಣದ ಕೋಲವನ್ನು ನಡೆಸುತ್ತಾರೆ. ಬೆಳಗಿನ ವೇಳೆ ದೈವಗಳ ಭಂಡಾರ ಆಗಮನವಾಗಿ ಶುದ್ಧೀಕರಣದ ನಂತರ ದೈವಗಳಿಗೆ ಗಗ್ಗರ ಸೇವೆ ನಡೆದು ಬಳಿಕÉ. ಬಹಳ ಕಟ್ಟುನಿಟ್ಟಾಗಿ ನಡೆಯುವ ಈ ಕೋಲದಲ್ಲಿ ಗುತ್ತು ಬರ್ಕೆಯ ಮನೆಯಿಂದ ಭಂಡಾರ ತರುವಾಗ ಕೋಲಕ್ಕೆ ಬಳಸುವ ಯಾವುದೇ ವಸ್ತುವನ್ನು ಬಿಟ್ಟು ಬರುವಂತಿಲ್ಲ ಎಲ್ಲಾ ವಸ್ತುಗಳನ್ನು ಒಂದೇ ಸಲ ತರಬೇಕು ಯಾವುದೇ ವಸ್ತುವನ್ನು ಬಿಟ್ಟು ಬಂದರೆ ಹಿಂತಿರುಗಿ ಮನೆಗೆ ಹೋಗಿ ತರುವಂತಿಲ್ಲ. ಕೋಲ ಮುಗಿದ ನಂತರವೇ ಮನೆಗೆ ಹಿಂತಿರುಗಿ ಹೋಗಬೇಕೆಂಬ ಪ್ರತೀತಿ ಇದೆ.

sonada kola

ಕಮಿಟಿಯ ಮಾಜಿ ಅಧ್ಯಕ್ಷ ಏಳ್ನಾಡು ಗುತ್ತಿನ ವಿಶ್ವನಾಥ ಹೆಗ್ಡೆ ಅವರು ಸೋಣದ ಕೋಲದ ಬಗ್ಗೆ ಮಾಹಿತಿಯನ್ನು ನೀಡಿಕೃಷಿ ಪ್ರಧಾನವಾಗಿರುವ ಈ ಪ್ರದೇಶದಲ್ಲಿ ಫಸಲು ಹೆಚ್ಚಾಗಬೇಕು. ತೆಂಗು ಬತ್ತ ಹಾಗೂ ಅಡಕೆ ಕೃಷಿಗೆ ರೋಗ ರುಜಿನಗಳು ಬರಬಾರದೆಂದು ದೈವಗಳಿಗೆ ಸೋಣದ ಕೋಲವನ್ನು ನೀಡಲಾಗುತ್ತಿದೆ. ದೈವದ ಭಂಡಾರ ಇರುವ ಮನೆಗಳಿಂದ ಭಂಡಾರವನ್ನು ತರುವಾಗ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಭಂಡಾರವನ್ನು ಹೊತ್ತುಕೊಂಡು ಬರುವಾಗ ಹೊಳೆಯನ್ನು ದಾಟಿ ತರಬೇಕಾಗುತ್ತದೆ ಆದ್ದರಿಂದ ಇಲ್ಲಿ ಸೇತುವೆಯ ನಿರ್ಮಾಣ ಅಗತ್ಯವಾಗಿ ಬೇಕಾಗಿದೆ. ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಸೇತುವೆ ನಿರ್ಮಾಣ ಆಗಲಿದೆ ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸಮಿತಿಯ ಅಧ್ಯಕ್ಷ ಸತೀಶ್ ವಿ.ಶೆಟ್ಟಿ, ಉಪಾಧ್ಯಕ್ಷ ಸತ್ಯಪ್ರಕಾಶ್ ಹೆಗ್ಡೆ, ಕಾರ್ಯದರ್ಶಿ ರವಿ ಕುಂತಿಲೆ, ಪ್ರ.ಕಾರ್ಯದರ್ಶಿ ಗೋಪಾಲ ಪೂಜಾರಿ, ಜಗದೀಶ್ ಮತ್ತು ಬದ್ರಿನಾಥ್ ಅವರು ಸಮಿತಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

Related Posts

Leave a Reply

Your email address will not be published.