❌ಪಡುಬಿದ್ರಿ: ವಯೋವೃದ್ದೆಗೆ ಸ್ಕೂಟರ್ ಡಿಕ್ಕಿ ತಲೆಗೆ ಗಾಯ
ಪಾದಚಾರಿ ಮಹಿಳೆಯೋರ್ವರಿಗೆ ಸ್ಕೂಟರೊಂದು ಡಿಕ್ಕಿಯಾಗಿ ತಲೆಗೆ ಗಾಯವಾದ ಘಟನೆ ಕಾರ್ಕಳ ರಸ್ತೆಯ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಗಾಯಗೊಂಡ ವೃದ್ದೆ ಸ್ಥಳೀಯ ನಿವಾಸಿ ಗುಲಾಬಿ (70) ಎಂದು ಗುರುತಿಸಲಾಗಿದೆ. ಮಳೆ ಸುರಿಯುತ್ತಿದ್ದ ವೇಳೆ ಪಕ್ಕದ ಅಂಗಡಿಗೆ ಹೋಗಿದ್ದು, ಪಡುಬಿದ್ರಿ ಕಡೆಯಿಂದ ಪಲಿಮಾರಿನ ಮನೆಗೆ ಹೋಗುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಮಹಿಳೆಯ ತಲೆಗೆ ಗಾಯವಾಗಿದೆ. ಸ್ಕೂಟರ್ ಸವಾರ ಪಕ್ಕಕ್ಕೆ ಬಿದ್ದಿದ್ದು, ಒಂದು ಕಣ್ಣಿಗೆ ಗಾಯವಾಗಿದೆ. ತಕ್ಷಣ ಸಾರ್ವಜನಿಕರು ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ.