ಪಡುಮಾರ್ನಾಡು ಮಹಿಳೆಗೆ ಹಲ್ಲೆ : ಇಬ್ಬರ ಬಂಧನ


ಮೂಡುಬಿದಿರೆ: ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ ಕಲ್ಲೊಟ್ಟುವಿನಲ್ಲಿ ಕುಮ್ಮಿ ಜಾಗದ ವಿಚಾರದಲ್ಲಿ ವಿವಾದ ಉಂಟಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಶನಿವಾರ ಬಂದಿ ಸಿದ್ದಾರೆ.

ಪಡುಮಾರ್ನಾಡು ಗ್ರಾ.ಪಂ. ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್ ಮತ್ತು ಅವರ ಸ್ನೇಹಿತ ಹರೀಶ್ ಹೆಗ್ಡೆ ಬಂಧಿತರು. ಪಡುಮಾರ್ನಾಡಿನಲ್ಲಿ ಕುಮ್ಮಿ ಹಕ್ಕಿಗೆ ಸಂಬಂಧಿಸಿದಂತೆ ಹರೀಶ್ ಮತ್ತು ಶಕುಂತಳ ಮಧ್ಯೆ ವ್ಯಾಜ್ಯ ಇತ್ತೆನ್ನಲಾಗಿದೆ. ಶುಕ್ರವಾರ ಈ ಜಾಗದಲ್ಲಿ ಶಕುಂತಳಾ ಕಡೆಯವರು ಸಸಿ ನೆಡಲು ಹೋದಾಗ ಹರೀಶ್ ಕಡೆಯವರು ವಿರೋಧ ವ್ಯಕ್ತಪಡಿಸಿದರೆನ್ನಲಾಗಿದೆ. ಈ ವೇಳೆ ಇತ್ತಂಡಗಳ ಮಧ್ಯೆ ಮಾತಿಗೆ ಮಾತು ಬೆಳೆದು ಹರೀಶ್ ಮತ್ತು ಅಭಿನಂದನ್ ಅವರು ಶಕುಂತಾಳರಿಗೆ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಂಜೆ ವೇಳೆಗೆ ಈ ಪ್ರಕರಣ ಬಳಿಕ ರಾಜಕೀಯ ಸ್ವರೂಪ ಪಡೆದು ಕೊಂಡಿದ್ದು ಬಿಜೆಪಿ ಬೆಂಬಲಿತ ಕೆಲವರು ಶುಕ್ರವಾರ ರಾತ್ರಿ ಪೊಲೀಸ್ ರಾಣಿ ಎದುರು ಅವಾಸಿ ಮಹಿಳೆಗೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕೆಂದು ಒತ್ತಡ ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶನಿವಾರ ಆರೋಪಿಗಳನ್ನು ಬಂಧಿಸಿ ಇಲ್ಲಿನ ಕೋರ್ಟ್‍ಗೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಿದೆ.

Related Posts

Leave a Reply

Your email address will not be published.