ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್‍ನ ಸಮಾರೋಪ ಸಮಾರಂಭ

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್‍ನ ಸಮಾರೋಪ ಹಾಗು ಉಡುಪಿ ಜಿಲ್ಲಾ ರಜತಮಹೋತ್ಸವದ ಸಮಾರೋಪ ಏಕಕಾಲದಲ್ಲಿಯೆ ನಡೆಯುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು.

ಅವರು ಪರಶುರಾಮ ಥೀಂ ಪಾರ್ಕ್‍ನ ಸಮಾರೋಪ ಸಮಾರಂಭ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಉತ್ಸವಗಳು ಅರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾಗಬೇಕು. ಕಾರ್ಕಳ ಉತ್ಸಾವವು ರಾಜ್ಯದಲ್ಲೆಲ್ಲ ಉತ್ಸಾಹವಾಗುವಂತೆ ಮಾಡಿದೆ ಎಂದರು. ಕಾರ್ಕಳ ಸಾಂಸ್ಕೃತಿಕ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದೆ .ಕಾರ್ಕಳ ತಾಲೂಕಿನ ಮಹಿಳ ಕಾರ್ಮಿಕರಿಗೆ ಅನುಕೂಲ ವಾಗುವಂತೆ ಜವಳಿ ಪಾರ್ಕ್ ನಿರ್ಮಾಣವಾಗುತ್ತಿದೆ.ಯಾವುದೇ ಟೀಕೆಗಳಿಗೆ ಒಳಪಡದೆ ರಾಜಕೀಯ ಮಾಡದೆ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುತಿದ್ದೇವೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ ಸುನೀಲ್ ಕುಮಾರ್ ಅವರ ಕಾರ್ಯವನ್ನು ಹೊಗಳಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ನಂತರ ಅಧುನಿಕ ಪರಶುರಾಮನ ಪ್ರತಿಮೆಯನ್ನು ಬಣ್ಣಿಸಿದರು..

ಇದೆ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಸುಪ್ರಿತ್ ರಾವ್ , ದೀಕ್ಷಿತ್, ಸಚಿನ್ ಕುಮಾರ್, ಗೌತಮ್, ಖ್ಯಾತ ವಿನ್ಯಾಸಕಾರ ಪುರುಷೋತ್ತಮ ಅಡ್ವೆ , ದೇವಾನಂದ , ಅನಿಲ್ , ಸದಾಶಿವ ಆಚಾರ್ , ಮೂರ್ತಿ ನಿಮಾರ್ತೃ ಕೃಷ್ಣ ನಾಯ್ಕ್ ತಂಡ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಧಿಕಾರಿ ಕೂರ್ಮಾರಾವ್, ಮುನಿಯಾಲು ಉದಯ ಕುಮಾರ್ ಶೆಟ್ಟಿ , ಗೆಸೆಟಿಯರ್ ಸಂಪಾದಕಿ ಎ ರಾಜಮ್ಮ ಚೌಡರೆಡ್ಡಿ ಗೆಸೆಟಿಯರ್ ,ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಜಿಲ್ಲಾ ಎಸ್ಪಿ ಅಕ್ಷಯ್ ಮಚೀಂದ್ರಾ , ಉದ್ಯಮಿಗಳಾದ ಎಸ್ ಹುರ್ಲಾಡಿ ರಘುವೀರಶೆಟ್ಟಿ, , ಸುಧೀರ್ ಹೆಗ್ಡೆ ಬೈಲೂರು , ತೆಳ್ಳಾರು ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು .

Related Posts

Leave a Reply

Your email address will not be published.