ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ.) ಮಿಜಾರು. ದ.ಕ ಕರ್ನಾಟಕ : ತುರ್ತು ಸೇವಾ ಯೋಜನೆ ಹಸ್ತಾಂತರ

ಬಂಟ್ವಾಳ ತಾಲೂಕಿನ ಮಡವು ನಿವಾಸಿಯಾಗಿರುವ ಯಾದವ ಪೂಜಾರಿ ಇವರಿಗೆ ಅಪಘಾತವಾಗಿ ಕೈ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಈಗ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ(ICU) ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರ ಚಿಕಿತ್ಸೆಗೆ ನಮ್ಮ ತಂಡದಿಂದ 10,000/- ರೂಗಳ ಚೆಕ್ಕ್ ನ್ನುಶ್ರೀ ಗೋಪಾಲಕೃಷ್ಣ ದೇವಸ್ಥಾನ ಪುಂಜಾಲಕಟ್ಟೆ ಇಲ್ಲಿ ದೇವರ ಸನ್ನಿಧಿಯಲ್ಲಿ ಯಾದವ ಇವರ ಕುಟುಂಬದ ಪರವಾಗಿ ಸ್ವರ್ಣ ಸಂಜೀವಿನಿ ಮಡವು ತಂಡದ ಸ್ಥಾಪಕರಾದ ಸಚಿನ್ ಸುವರ್ಣ ಇವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ತಂಡದ ಸೇವಾ ಮಾಣಿಕ್ಯರು ಹಾಗೂ ಇಂಚರ ಸೇವಾ ಬಳಗ ನಂದಳಿಕೆ ತಂಡದ ಸದಸ್ಯರು ಉಪಸ್ಥಿತರಿದ್ದರು..

ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದ ಶ್ರೀ ನಾಗಣ್ಣ ಗೌಡ ಕಡಬ ಇವರು ರೈಲು ದುರಂತದಲ್ಲಿ ಒಂದು ಕೈ ಹಾಗೂ ಕಾಲನ್ನು ಕಳೆದುಕೊಂಡು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸಾ ವೆಚ್ಚಕ್ಕೆ ನಮ್ಮ ತಂಡದ ವತಿಯಿಂದ 10,000/- ರೂಗಳ ಚೆಕ್ ನ್ನು ಓಬುಲೇಶ್ ರೆಡ್ಡಿ ಇವರು ಈ ಕುಟುಂಬಕ್ಕೆ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಸತೀಶ್, ಕುಶಾಲಪ್ಪ, ಗೋವಿಂದು, ವಿಲ್ಸನ್ ಕಡಬ ಉಪಸ್ಥಿತರಿದ್ದರು.