ಪ್ರಮೋದ್ ಮುತಾಲಿಕ್ ಮಾತಿಗೂ, ಕೃತಿಗೂ ಯಾವುದೇ ಸಂಬಂಧವಿಲ್ಲ:ಶ್ರೀರಾಮ ಸೇನೆಯ ಮಾಜಿ ರಾಜ್ಯ ಸಂಚಾಲಕ ರವಿ ವಿ. ಸಿಂದ್ಲಿಂಗ್
ಶ್ರೀರಾಮ ಸೇನೆಯ ಮಾಜಿ ರಾಜ್ಯ ಸಂಚಾಲಕ ರವಿ ವಿ. ಸಿಂದ್ಲಿಂಗ್ ಹೇಳಿಕೆಶ್ರೀ ರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ನೈಜ ಹಿಂದುತ್ವದ ರಕ್ಷಣೆಗೋಸ್ಕರ ಚುನಾವಣೆ ಸ್ಪರ್ಧಿಸುತ್ತಿದ್ದಾರೆ ಎಂಬ ಸಂಗತಿ ತಿಳಿದು ಅವರ ಈ ನೈಜ ಹಿಂದುತ್ವದ ನಕಲಿ ಮುಖದ ಹಿಂದಿರುವ ಕೆಲ ಅಸಲಿ ಸಂಗತಿಯನ್ನು ಮುಗ್ಧ ಕರಾವಳಿಯ ಜನರಿಗೆ ತಿಳಿಸುವುದು ನಮ್ಮ ಆದ್ಯ ಕರ್ತವ್ಯ ಮತ್ತು ಅವರ ಮಾತಿಗೂ ಅವರ ಕೃತಿಗೂ ಯಾವುದೇ ಸಂಬಂಧವಿಲ್ಲ. ಉತ್ತರ ಕರ್ನಾಟಕದ ನಮಗೆ ಮೋಸ ಮಾಡಿದ ಹಾಗೆ ತಾವು ಅವರನ್ನು ನಂಬಿ ಮೋಸ ಹೋಗಬೇಡಿ ಹಾಗೂ ನೈಜ ಹಿಂದುತ್ವ ಎಂದು ನಂಬಿ ನಕಲಿ ಹಿಂದುತ್ವಕ್ಕೆ ಯುವಕರು ಬಲಿಯಾಗದಿರಿ ಎಂದು ಶ್ರೀರಾಮ ಸೇನೆಯ ಮಾಜಿ ರಾಜ್ಯ ಸಂಚಾಲಕ ರವಿ ವಿ. ಸಿಂದ್ಲಿಂಗ್ ತಿಳಿಸಿದರು.
ಅವರು ಕಾರ್ಕಳದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ವಾಗ್ಧಾಳಿ ನಡೆಸಿದರು. ಮುತಾಲಿಕ್ ಅವರ ಹಿಂದುತ್ವ ಕೇವಲ ಭಾಷಣಕ್ಕಾಗಿ ಮಾತ್ರ. ಹಿಂದುತ್ವ ಮತ್ತು ಅದರೊಳಗಿನ ಸತ್ಯ ಹಾಗೂ ವ್ಯವಹಾರಗಳೇ ಬೇರೆ. ಬೇರೆ ಬೇರೆ ರಾಜ್ಯದ ಯುವಕರ ಹೆಸರಿನಲ್ಲಿ ಸಂಗ್ರಹವಾದ ಹಣ ಹಿಂದುತ್ವಕ್ಕಾಗಿ ಹುತಾತ್ಮರಾದ ಹಿಂದು ಯುವಕರ ಮನೆಗೆ ಮುಟ್ಟಿಲ್ಲ. ಉತ್ತರ ಕರ್ನಾಟಕ ಭಾಗದ ನಾವೆಲ್ಲರೂ ಅವರ ಸ್ವಾರ್ಥ ಹಾಗೂ ಜನದಾಹದ ಮನಸ್ಸಿನ ಅವರ ರಾಷ್ಟ್ರೀಯ ಹಿಂದು ಸೇನಾ ಪಕ್ಷದಿಂದ ಚುನಾವಣಾ ಕಣಕ್ಕಿಳಿಸಿ ನಮ್ಮನ್ನು ಬಲಿ ಹಾಕಿದರು ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವಿಲಾಸ್‍ರಾವ್ ಪವಾರ್, ಶ್ರೀರಾಮ ಸೇನೆ ಬೆಳಗಾವಿ ವಿಭಾಗದ ಮಾಜಿ ಪ್ರಮುಖ ಶಿವಶಂಕರ್ ಕಾನಾಪೂರ್, ಬೆಳಗಾವಿ ಜಿಲ್ಲಾ ಮಾಜಿ ಪ್ರಮುಖ ದೀಪಕ್ ಪೂಜಾರ್, ಮಾಜಿ ಉತ್ತರ ಪ್ರಾಂತ್ಯ ಪ್ರಮುಖ್ ಉಮೇಶ್ ಅಲ್ಮೇಲ್ಕರ್, ಜಮಖಂಡಿ ತಾಲೂಕು ಮಾಜಿ ಪ್ರಮುಖ ಮಹೇಶ್ ಅರಾಕೇರಿ, ಬಾಗಲಕೋಟ್ ಜಿಲ್ಲಾ ಪ್ರಮುಖ್ ಜ್ಯೋತಿಭಾ ಖಾಬುಲೆ, ಇನ್ನಿತರರು ಉಪಸ್ಥಿತರಿದ್ದರು.