ಎಲಾನ್ ಮಸ್ಕ್ ಈಗ ಪ್ರಧಾನಿ ಮೋದಿ ಯ ಫಾಲೋವರ್
ಟ್ವಿಟರ್ ಹಾಗೂ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುತ್ತಿದ್ದು, ಈ ವಿಚಾರ “ಈಗ ಭಾರತಕ್ಕೆ ಟೆಸ್ಲಾ ಕಾಲಿಡುವ ಮುನ್ಸೂಚನೆಯೇ’ ಎಂದು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಟ್ವಿಟರ್‌ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಮಸ್ಕ್ 195 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿದ್ದು, ಈ ಪೈಕಿ ಇತ್ತೀಚೆಗಷ್ಟೇ ಮೋದಿ ಕೂಡ ಸೇರ್ಪಡೆಗೊಂಡಿದ್ದಾರೆ. ಮೋದಿ ಅವರನ್ನು ಫಾಲೋ ಮಾಡುತ್ತಿರುವ ಸ್ಕ್ರೀನ್ ಶಾಟ್ ಅನ್ನು ಕೂಡ ಎಲಾನ್ ಅಲರ್ಟ್ಸ್ ಎನ್ನುವ ಪೇಜ್ ಹಂಚಿಕೊಂಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ಬಹುಶಃ ಟೆಸ್ಲಾ ಸಂಸ್ಥೆ ಶೀಘ್ರವೇ ಭಾರತದಲ್ಲಿ ತನ್ನ ಉತ್ಪಾದನಾ ಘಟಕ ತೆರೆಯಲಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.