ವಿದ್ಯಾರ್ಥಿಗಳೊಂದಿಗೆ ಬೆರೆತರೆ ಧನಾತ್ಮಕ ಚಿಂತನೆ; ಸಂಸದ ಬ್ರಿಜೇಶ್ ಚೌಟ

ನಾವು ಮಕ್ಕಳು ಅಥವಾ ವಿದ್ಯಾರ್ಥಿಗಳ ನಡುವೆ ಬೆರೆತರೆ ಯುವಕರಾಗಿ, ಯುವ ಮನಸ್ಸುಗಳಾಗಿ ಚಿಂತನೆ ಮಾಡಲು ಸಾಧ್ಯ ಮತ್ತು ನಮ್ಮಲ್ಲಿ ಧನಾತ್ಮಕ ಚಿಂತನೆ ಹೆಚ್ಚಾಗುತ್ತದೆ. ನವೋದಯ ಅಥವಾ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಸಹ ಶಿಕ್ಷಣದೊಂದಿಗೆ ಸಹಬಾಳ್ವೆಯ ಮಹತ್ವ ಬಹುಬೇಗನೆ ಅರಿತುಕೊಳ್ಳುತ್ತಾರೆ. ಭಾರತೀಯ ಸೇನೆಗಳಲ್ಲಿ ವಸತಿ ಶಾಲೆಗಳಲ್ಲಿ ಕಲಿತ ಯುವಕರೇ ಹೆಚ್ಚು ಇದ್ದಾರೆ ಎಂದು ಸಂಸದ ಬ್ರಿಜೇಶ್ ಚೌಟ ಅವರು ಹೇಳಿದರು.

ಅವರು ಮುಡಿಪುವಿನ ಪಿ.ಎಂ.ಶ್ರೀ ಜವಹಾರ್ ವಿದ್ಯಾಲಯದಲ್ಲಿ ನಡೆದ ಪಿಟಿಸಿ ಸಾಮಾನ್ಯ ಸಭೆ ಹಾಗೂ ಓಣಂ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳನ್ನು ಕೇವಲ ಶೈಕ್ಷಣಿಕವಾದ ಅಂಕಗಳಿಂದ ಮಾತ್ರ ಅಳೆಯುವುದು ತಪ್ಪು. ಪಠ್ಯ, ಪಠ್ಯೇತರ ಚಟುವಟಿಕೆಯ ಜೊತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಜೀವನದ ಮೌಲ್ಯಗಳು ಅವರ‌ ಭವಿಷ್ಯವನ್ನು ರೂಪಿಸುತ್ತದೆ. ಮೋದಿಜಿಯವರು ಹೇಳಿದಂತೆ ಇನ್ನು ಇಪ್ಪತ್ತೈದು ವರ್ಷಗಳು ಭಾರತದ ಅಮೃತ ಕಾಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ, ಯುವಕರ ಜವಬ್ಧಾರಿ ಮಹತ್ತರವಾದುದು ಎಂದರು.
ಜವಾಹಾರ್ ವಿದ್ಯಾಲಯದ ಪ್ರಾಂಶುಪಾಲರಾದ ಪಿ.ರಾಜೇಶ್ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ಮಾಜಿ ಅಧ್ಯಕ್ಣರಾದ ಸಂತೋಷ್ ಕುಮಾರ್ ಬೋಳಿಯಾರ್ , ವಿದ್ಯಾಲಯದ ಮಾನ್ಯೇಜ್ ಮೆಂಟ್ ಕಮಿಟಿ ಸದಸ್ಯ ಕೃಷ್ಣ ಕುಮಾರ್, ವಿನಯ ಕುಮಾರಿ, ಕೋಶಾಧಿಕಾರಿ ಮೋಹನ್ ದಾಸ್ ಅಮ್ಮೆಂಬಳ, ಶಿಕ್ಷಕ ರಕ್ಷಕ ಸಮಿತಿಯ ಪ್ರೊ.ಜಗದೀಶ್ ಪ್ರಸಾದ್, ಕೃಷ್ಣಪ್ಪ, ರಾಜೇಂದ್ರ ಶೆಟ್ಟಿ, ರಾಜೇಶ್ ಭಟ್, ಶ್ಯಾಮ್ ಸೂರ್ಯ, ಕೊರಗಪ್ಪ,ದಾಕ್ಷಾಯಿಣಿ,ಸುದಾ, ಶೀನ ಶೆಟ್ಟಿ, ಶಿಕ್ಷಕರಾದ ರೆಹಮಾನ್, ಮಹೇಶ್,ರಾಘವೇಂದ್ರ, ಯೋಗೀಶ್ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ರೆಹಮಾನ್ ಸ್ವಾಗತಿಸಿದರು. ಜೋಶ್ ವಿಪಿ ವಂದಿಸಿದರು. ಶಿಕ್ಷಕರಾದ ಯೋಗೀಶ್ ಅವರು ಕಾರ್ಯಕ್ರಮ ನಿರೂಪಿಸಿದರು.

Add - Clair veda ayur clinic

Related Posts

Leave a Reply

Your email address will not be published.