ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ : ಪದಕ ವಿಜೇತ ಸತೀಶ್ ಖಾರ್ವಿಗೆ ಅದ್ಧೂರಿ ಸ್ವಾಗತ

ಕುಂದಾಪುರ: ಡೆಡ್‍ಲಿಫ್ಟ್‍ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ನನಗೆ, ಕಾಮನ್‍ವೆಲ್ತ್‍ನಲ್ಲೂ ವೈಯಕ್ತಿಕ ದಾಖಲೆ ನಿರ್ಮಿಸಬೇಕೆಂಬ ಹಂಬಲವಿತ್ತು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಆದರೆ ಅಲ್ಲಿ ವಿಪರೀತ ಚಳಿಯಿಂದಾಗಿ ಭಾರ ಎತ್ತಲು ಸಾಧ್ಯವಾಗಲಿಲ್ಲ. ಇದರಿಂದ ವೈಯಕ್ತಿಕ ದಾಖಲೆ ಕೈ ತಪ್ಪಿ ಹೋಯಿತು ಎಂದು ಫವರ್ ಲಿಪ್ರರ್ ಕುಂದಾಪುರದ ಸತೀಶ್ ಖಾರ್ವಿ ಹೇಳಿದರು.

ನ್ಯೂಜಿಲ್ಯಾಂಡ್‍ನ ಆಕ್ಲಂಡ್‍ನಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ, ಬೆಂಚ್ ಪ್ರೆಸ್‍ನಲ್ಲಿ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಪವರ್ ಲಿಫ್ಟಿಂಗ್‍ನಲ್ಲಿ 4 ಚಿನ್ನದ ಪದಕ ವಿಜೇತರಾಗಿ ಬುಧವಾರ ಹುಟ್ಟೂರಿಗೆ ಆಗಮಿಸಿದ ಸತೀಶ್ ಖಾರ್ವಿಯವರಿಗೆ ಕುಂದಾಪುರದದಲ್ಲಿ ಹಮ್ಮಿಕೊಂಡ ಅದ್ಧೂರಿ ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸತೀಶ್ ಖಾರ್ವಿ ಅವರನ್ನು ನಗರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ತಾಲೂಕು ಆಡಳಿತ, ವಿವಿಧ ಸಂಘ-ಸಂಸ್ಥೆಗಳು, ಕೊಂಕಣಿ ಖಾರ್ವಿ ಸಮಾಜ ಬಂಧುಗಳು, ಸಾರ್ವಜನಿಕರು ಹಾಗೂ ಅಭಿಮಾನಿಗಳ ಪರವಾಗಿ ಸಾರ್ವಜನಿಕವಾಗಿ ಅಭಿನಂದಿಸಲಾಯಿತು. ಇದಕ್ಕೂ ಮುನ್ನ ಕುಂದಾಪುರದ ಶಾಸ್ತ್ರಿ ಸರ್ಕಲ್ ನಿಂದ ಅಲಂಕೃತ ವಾಹನದಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಚೆಂಡೆ, ವಾದ್ಯಗಳ ಮೂಲಕ ವೈಭವದ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪೆÇ್ರ| ಕೊತ್ತಾಡಿ ಉಮೇಶ್ ಶೆಟ್ಟಿ, ಉದ್ಯಮಿಗಳಾದ ರವಿ ಟಿ. ನಾಯ್ಕ್, ಶ್ರೀಶನ್ ಮಾತನಾಡಿದರು. ಪುರಸಭೆ ಸದಸ್ಯರಾದ ಶೇಖರ ಪೂಜಾರಿ, ವಿ. ಪ್ರಭಾಕರ, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಸುಭಾಷ್ ಖಾರ್ವಿ, ಮತ್ತಿತರರು ಉಪಸ್ಥಿತರಿದ್ದರು.

ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಪ್ರಾಸ್ತಾವಿಕ ಮಾತನಾಡಿದರು. ಸಿಟಿ ಜೇಸಿಐ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಸ್ವಾಗತಿಸಿ, ಹರ್ಷವರ್ಧನ್ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.