ಪಠ್ಯಪುಸ್ತಕದಿಂದ ಜೀವನ ಕೌಶಲ್ಯ ದೊರೆಯುವುದಿಲ್ಲ
ಉಜಿರೆ, ಸೆ. 23: “ಈಗಿನ ಪಠ್ಯಕ್ರಮಗಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸುವ ಕಡೆಗೆ ಮಾತ್ರ ಗಮನ ನೀಡುತ್ತದೆ, ಹೊರತು ಬದುಕಲು
ಬೇಕಾದ ಜೀವನ ಕೌಶಲ್ಯ ಕಲಿಸುವುದಿಲ್ಲ. ಜೀವನಸುಗಮವಾಗಿ ಸಾಗಿಸಲುಬುದ್ಧಿವಂತಿಕೆ,ಉತ್ಸಾಹ,ಶ್ರದ್ಧೆ, ಬದ್ಧತೆಯ ಅಂಶಗಳು
ಅಗತ್ಯವಾಗಿದೆ. ಇವುಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಸಿಸಿಎ
ಸಂಗವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಸಿಸಿಎ ಸಂಘದ 2023-24ನೇ ಸಾಲಿನ ಉದ್ಘಾಟನೆಯ ಸಮಯದಲ್ಲಿ
ಡಾ. ರವಿ ಎಂ ಎನ್ ಮಾತನಾಡಿದರು.
ಉಜಿರೆಯ ಶ್ರೀಧ.ಮ. ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಸೆ. 23 ಬೆಳಗ್ಗೆ 10 ಗಂಟೆಗೆ 2023-24 ನೇ ಸಾಲಿನ ಕಾಮರ್ಸ್
ಕ್ಯಾಂಪಸ್ ಅಸೋಸಿಯೇಷನ್(ಸಿಸಿಎ) ಸಂಘಕ್ಕೆ ಚಾಲನೆ ನೀಡಲಾಯಿತು. ಜಿ ಎಫ್ ಜಿ ಸಿ ಮೆಲಂತಬೆಟ್ಟು
ಕಾಲೇಜಿನಸಹಾಯಕಪ್ರಾಧ್ಯಾಪಕಡಾ. ರವಿ ಎಂಎನ್ಕಾರ್ಯಕ್ರಮ ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಎ ಕುಮಾರ್
ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಆಡಳಿತದ ವಿದ್ಯಾರ್ಥಿಗಳನ್ನು ಒಳಗೊಂಡ ಸಂಘ
ಇದಾಗಿದ್ದು, ವಿದ್ಯಾರ್ಥಿಗಳ ಕೌಶಲ್ಯ, ವ್ಯವಹಾರಿಕ ಗುಣ-ನಡತೆ, ಪ್ರತಿಭೆಗಳನ್ನು ಅನಾವರಣ ಮಾಡುವ ಉದ್ದೇಶದಿಂದ ಹಲವಾರು
ಚಟುವಟಿಕೆಗಳನ್ನು ನಡೆಸುವ ಯೋಜನೆ ಹಮ್ಮಿಕೊಂಡಿದೆ.
ಇದೇ ಸಂದರ್ಭದಲ್ಲಿ‘ಜಿಎಸ್‌ಟಿಲಾ &ಚಿmಠಿ; ಪ್ರಾಕ್ಟಿಸಸ್ ಮತ್ತುಇನ್ ಕಮ್ ಟ್ಯಾಕ್ಸ್ಲಾ &ಚಿmಠಿ; ಪ್ರಾಕ್ಟಿಸಸ್’ಎಂಬಎರಡುಪುಸ್ತಕ ಬಿಡುಗಡೆ
ಮಾಡಲಾಯಿತು. ಈ ಪುಸ್ತಕವನ್ನು ಡಾ. ರವಿ ಎಂ ಎನ್, ಡಾ. ಸುಮನ್ ಶೆಟ್ಟಿ ಹಾಗೂ ಸಹಾಯಕಪ್ರಾಧ್ಯಾಪಕ ಭಾನುಪ್ರಕಾಶ್ ಬಿ ಇ
ಇವರು ಬರೆದಿದ್ದಾರೆ. ಇದರೊಂದಿಗೆ ‘ವನಿಕ’ –ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆಡಾ.
ರತ್ನಾವತಿ ಕೆಸಂಘದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸಂಘದ ಕಾರ್ಯದರ್ಶಿ ಸುವಿತ್ ಶೆಟ್ಟಿ ಕಳೆದ ವರ್ಷದ ಸಂಘದ
ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಡಾ. ರವಿ ಎಂ ಎನ್, ಡಾ. ಬಿ.ಎ ಕುಮಾರ್ ಹೆಗ್ಡೆ, ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥೆಶ್ರೀಮತಿಶಾಕುಂತಲಾ,
ವಾಣಿಜ್ಯ ವಿಭಾಗ ಮುಖ್ಯಸ್ಥೆಡಾ. ರತ್ನಾವತಿ ಕೆ,ಸಂಘದ ಉಸ್ತುವಾರಿ ಪ್ರಾಧ್ಯಾಪಕರಾದ ವಿನುತ ಹಾಗೂ ಗುರುರಾಜ್, ಸಂಘದಸಿ ಇ ಓ
ಆದರ್ಶಬೇಕಲ್ಮತ್ತು ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜೆನಿಫರ್ ಮತ್ತು ಮಧುರ ಕಾರ್ಯಕ್ರಮ ನಿರೂಪಿಸಿ, ಆದರ್ಶಬೇಕಲ್
ಸ್ವಾಗತಿಸಿ, ಶರಧಿ ಹೊಳ್ಳವಂದಿಸಿದರು.