ಗೃಹ ಸಚಿವರ ಹೇಳಿಕೆ ಅಡಿಕೆ ಬೆಳೆಗಾರರಿಗೆ ಮಾಡಿದ ಅವಮಾನ : ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿಕೆ

ಗೃಹ ಸಚಿವರು ಅಡಿಕೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು. ಅದು ಅಗತ್ಯವಿಲ್ಲ ಎಂಬ ರೀತಿ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಅಡಿಕೆ ಬೆಳೆಗಾರರಿಗೆ ಮಾಡಿದಂತಹ ಅವಮಾನವಾಗಿದೆ ಎಂದು ಮಾಜಿ ಶಾಸಕ ಶಕುಂತಳಾ ಶೆಟ್ಟಿ ಹೇಳಿದರು.ಅವರು ಪುತ್ತೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಡಿಕೆ ಬೆಳೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಎನ್ನುವ ಬದಲು ಅವರು ಅದಕ್ಕೆ ಯಾವ ರೀತಿ ಪರಿಹಾರ ನೀಡಬಹುದು ಎಂಬುವುದನ್ನು ಯೋಚಿಸಬೇಕಾಗಿದೆ. ಅಡಿಕೆಗೆ ಭಾರತದ ಇತಿಹಾಸದಲ್ಲೇ ಉತ್ತಮ ಸ್ಥಾನವಿದೆ. ಎಲ್ಲಾ ವಿಚಾರದಲ್ಲೂ ಅಡಿಕೆ ಹೆಚ್ಚಾಗಿ ಉಪಯೋಗವಾಗುತ್ತದೆ. ಈ ಹಿನ್ನೆಲೆ ಅಡಿಕೆಗೆ ಪ್ರೋತ್ಸಾಹ ನೀಡಬಾರದು ಎಂಬುವುದನ್ನು ಬಿಟ್ಟು ಆಮದು ಆಗುವ ಅಡಿಕೆಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಅಡಿಕೆ ಬೆಳೆಗಾರರು, ರೈತರು ಸೇರಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುವ ಸನ್ನಿವೇಶ ಬರಬಹುದು ಎಂದರು.

Related Posts

Leave a Reply

Your email address will not be published.