ಶಿವಪಾಡಿ ಅತಿರುದ್ರ ಮಹಾಯಾಗ : “ಆತಿಥ್ಯ ಭಾರತೀಯ ಸಂಸ್ಕೃತಿ” ಕಜಂಪಾಡಿ ಸುಬ್ರಹ್ಮಣ್ಯ ಭಟ್

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 27, 2023 ರ ಸೋಮವಾರದಂದು ನಡೆದ ಅತಿರುದ್ರ ಮಹಾಯಾಗದ ಆರನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಣಿಪಾಲದ ಜನಪ್ರಿಯ ಉದ್ಯಮಿಯಾದ ಆತ್ಮರಾಮ್ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಂಬೈ ಭಾಗೀರಥಿ ಕೆಮಿಕಲ್ಸ್ ನ ಉದ್ಯಮಿ ಬಾಲಕೃಷ್ಣ ಭಂಡಾರಿ, ಎ ಐ ಸಿ ಸಿ ಒಬ್ಸರ್ವರ್ ಟೀಮ್ ನ ಮುಖ್ಯಸ್ಥರಾದ ಮುರಳಿ ಶೆಟ್ಟಿ, ಉದ್ಯಮಿಗಳಾದ ಸೀತರಾಮ್ ಸಾಮಂತ್, ಸಾಲಿಗ್ರಾಮ ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ, ಎ ಐ ಸಿ ಸಿ ಉಡುಪಿಯ ಕಾಂಗ್ರೆಸ್ ನಾಯಕರಾದ ದಿವಾಕರ್ ಕುಂದರ್, ಉಡುಪಿ ನಗರಸಭೆ ಅಧ್ಯಕ್ಷರಾದ ಸುಮಿತ್ರಾ ನಾಯಕ್, ಆರ್ ಎಸ್ ಎಸ್ ಪ್ರಮುಖರಾದ ಶಂಭು ಶೆಟ್ಟಿ, ಉಡುಪಿ ಪ್ರಾಧಿಕಾರದ ಅಧ್ಯಕ್ಷರಾದ ಮನೋಹರ್ ಕಲ್ಮಾಡಿ, ಮಂಗಳೂರಿನ ಅಖಿಲ ಭಾರತೀಯ ಜ್ಞಾನ ಭಾರತಿ ಪ್ರಕಾಶನ ನಿಯಮಿತ ಅಧ್ಯಕ್ಷರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಜಿಲ್ಲಾ ಸಂಚಾಲಕರಾದ ಡಾ. ನಾರಾಯಣ ಶೆಣೈ, ಅತಿರುದ್ರ ಮಹಾಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಪ್ರಕಾಶ್ ಕುಕ್ಕೆಹಳ್ಳಿ, ಅತಿರುದ್ರ ಮಹಾಯಾಗದ ಕೋಶಾಧಿಕಾರಿ ಸತೀಶ್ ಪಾಟೀಲ್, ಶಿವಪಾಡಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಭಾಕರ ಸಾಮಂತ, ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಪ್ರಸಾದ ವಿತರಣಾ ಸಮಿತಿಯ ಮುಖ್ಯಸ್ಥರಾದ ಶಕುಂತಲಾ ಶ್ಯಾನುಭಾಗ್, ಸ್ವಾಗತ ಸಮಿತಿಯ ಮುಖ್ಯಸ್ಥರಾದ ಮಾಧುರಿ ಪಾಟೀಲ್, ಪರ್ಕಳದ ಉದ್ಯಮಿ ಶ್ರೀರಾಮ ಪ್ರಭು, ಸರಳೇಬೆಟ್ಟು ವಾರ್ಡ್ ಕೌನ್ಸೆಲರ್ ವಿಜಯಲಕ್ಷ್ಮಿ, ಮಣಿಪಾಲ ಸ್ನೇಹ ಸಂಗಮದ ಅಧ್ಯಕ್ಷರಾದ ಗುರುರಾಜ, ಸ್ವದೇಶಿ ಔಷಧಿ ಭಂಡಾರದ ಕೀರ್ತಿ ವಿ. ಪ್ರಭು ಮತ್ತು ಮಣಿಪಾಲ ಕೌನ್ಸೆಲರ್ ಕಲ್ಪನಾ ಸುಧಾಮ ಉಪಸ್ಥಿತರಿದ್ದರು.

ನಂತರ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು, ಸೂರ್ಯೋದಯದ ಮುನ್ನ ಎದ್ದರೆ, ಆ ಮನೆ ದೇವಾಲಯವಾಗುವುದು. ಮನೆಯಲ್ಲಿ ಮಂತ್ರ – ಶ್ಲೋಕಗಳನ್ನು ಮಕ್ಕಳು ಕೇಳಿದರೆ, ಆ ಮನೆ ವಿದ್ಯಾಲಯವಾಗುವುದು. ನಮ್ಮ ಮನೆಗೆ ಬಂದವರಿಗೆ ಆನಂದವಾಗಬೇಕು. ಆತಿಥ್ಯವೆಂಬುದು ಭಾರತೀಯ ಸಂಸ್ಕೃತಿ. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಅತಿಥಿ ದೇವೋ ಭವ ಹೇಳಿದ ದೇಶವಿದು. ಮನೆಗೆ ಬಂದವರಿಗೆ ಒಳ್ಳೆಯ ಆತಿಥ್ಯ ನೀಡಿದರೆ, ಆ ಮನೆ ಆಧಾರಲಯವಾಗುವುದು ಎಂದರು.

ಧಾರ್ಮಿಕ ಉಪನ್ಯಾಸದ ಬಳಿಕ ವಿದುಷಿ ಪವನಾ ಬಿ. ಆಚಾರ್ಯ ಮತ್ತು ವಿದ್ಯಾರ್ಥಿಗಳಿಂದ “ಏಕಾದಶ ವೀಣಾ ವಾದನ” ಮತ್ತು ಸಾಲಿಗ್ರಾಮ ಮೇಳದಿಂದ “ಭೀಷ್ಮ ವಿಜಯ” ಯಕ್ಷಗಾನ ಬಯಲಾಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.