ಕಾಪು ವಿಧಾನಸಭಾ ಕ್ಷೇತ್ರ, ಚುನಾವಣಾ ಪ್ರಣಾಳಿಕೆ ಬಿಡುಗಡೆ
ಭಾರತೀಯ ಜನತಾ ಪಾರ್ಟಿ 121 ಕಾಪು ವಿಧಾನಸಭಾ ಕ್ಷೇತದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮವು, ಭಾರತೀಯ ಜನತಾ ಪಾರ್ಟಿಯ ಚುನಾವಣಾ ಕಾರ್ಯಾಲಯ ಕಾಪುವಿನಲ್ಲಿ ನೆರವೇರಿತು
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಮಟ್ಟಾರ್ ರತ್ನಾಕರ ಹೆಗ್ಡೆಯವರು ಬಿಡುಗಡೆಗೊಳಿಸಿದರು.
ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಯವರು ಮಾತನಾಡಿ, ಪ್ರಣಾಳಿಕೆಯಲ್ಲಿರುವ ಅಭಿವೃದ್ಧಿಗಳನ್ನು ನೆರವೇರಿಸುದಾಗಿ ಭರವಸೆಯನ್ನು ನೀಡಿದರು. ನಾವೆಲ್ಲರೂ ಕಾಪು ಕ್ಷೇತ್ರವನ್ನು ರಾಜ್ಯದ ನಂಬರ್ 1 ಕ್ಷೇತ್ರವನ್ನಾಗಿ ಮಾಡೋಣ ಎಂದು ಹೇಳಿದರು.
ಈ ಸಂಧರ್ಭ ಕಾಪು ವಿಧಾನಸಭಾ ಶಾಸಕರಾದ ಶ್ರೀ ಲಾಲಾಜಿ ಮೆಂಡನ್, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ದೆಹಲಿ ಶಾಸಕರು ಹಾಗೂ ಚುನಾವಣಾ ಪ್ರವಾಸಿ ಪ್ರಭಾರಿ ಶ್ರೀ ವಿಜೇಂದ್ರ ಗುಪ್ತ, ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್ ಬಂಟ್ವಾಳ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಕ್ಷೇತ್ರ ಚುನಾವಣಾ ಪ್ರಣಾಳಿಕೆ ಸಮಿತಿ ಸದಸ್ಯರಾದ ಉಪೇಂದ್ರ ನಾಯಕ್, ಕೇಸರಿ ಯುವರಾಜ್, ಕಾಪು ಕ್ಷೇತ್ರ ಮಾಧ್ಯಮ ಸಂಯೋಜಕರಾದ ಕಿರಣ್ ಆಳ್ವ ಹಾಗೂ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೆಲ್ಲರೂ ಉಪಸ್ಥಿತರಿದ್ದರು.