ಮಂಗಳೂರು : ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ
ವಿಶ್ವದ ಹಲವಾರು ದೇಶಗಳಲ್ಲಿ ಅಕ್ಟೋಬರ್ 25ರಂದು ಕಾಣಲಿರುವ ಸೂರ್ಯಗ್ರಹಣ, ಭಾರತದ ಭೂಭಾಗದಲ್ಲಿ ಪಾರ್ಶ್ವ ಸೂರ್ಯಗ್ರಹಣವಾಗಿ ಗೋಚರಿಸಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಸುಮಾರು ಘಂಟೆ ಸಂಜೆ 5:09 ರಿಂದ 6:06ರ ವರೆಗೆ ಕಾಣಸಿಗುವ ಈ ಘಟನೆಯಲ್ಲಿ ಸುಮಾರು ಘಂಟೆ ಸಂಜೆ 5:50ರ ಹೊತ್ತಿಗೆ ಅತಿಹೆಚ್ಚು ಅಂದರೆ ಸೂರ್ಯನ ಬಿಂಬದ 10.9% ಶೇಕಡದಷ್ಟು ಭಾಗವನ್ನು ಮರೆಮಾಚಲಿದೆ.
ಗ್ರಹಣವೀಕ್ಷಣೆ ಬರಿಗಣ್ಣಿನಿಂದ ನೋಡುವುದು ಹಾನಿಕಾರಕ. ಇದನ್ನು ದೂರದರ್ಶಕದಿಂದ (ಟೆಲೆಸ್ಕೋಪ್) ಪರದೆಯ ಮೇಲೆ ಕಾಣಲಾಗುವ ಗ್ರಹಣದ ಬಿಂಬ ಅಥವಾ ಲಭ್ಯವಿರುವ ಪ್ರಮಾಣೀಕರಿಸಿದ ಸೌರಕನ್ನಡಕವನ್ನು ಬಳಸಿಯೇ ನೋಡಬೇಕು.
ಈ ನಿಟ್ಟಿನಲ್ಲಿ, ಸಾರ್ವಜನಿಕರಿಗೆ ಸುಲಭವಾಗಿ ಗ್ರಹಣ ವೀಕ್ಷಣೆ ಮಾಡಲು ಯೆನೆಪೋಯ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ, ಬಲ್ಮಠದಲ್ಲಿರುವ ಯೆನೆಪೋಯ ಪದವಿ ಕಾಲೇಜಿನ 6ನೇ ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರಿನ ಹವ್ಯಾಸಿ ಖಗೋಲಶಾಸ್ತ್ರಜ್ಞರ ಸಂಘದ ಶ್ರೀ ರೋಹಿತ್ ರಾವ್ ಮತ್ತು ಡಾ. ಸಂಗೀತಲಕ್ಷ್ಮಿ ಎಂ.ಜೆ ಇವರು ತಿಳಿಸಿರುತ್ತಾರೆ. ಮನೆಯಲ್ಲಿಯೇ ಗ್ರಹಣ ವೀಕ್ಷಣೆ ಮಾಡುವ ಆಸಕ್ತರು ತಮಗೆ ಸೂಕ್ತವಾದ ಪ್ರದೇಶದಲ್ಲಿ ಸೌರಕನ್ನಡಕವನ್ನು ಬಳಸಿಯೇ ನೋಡಬೇಕಾಗಿ, ಮತ್ತು ಸೌರಕನ್ನಡಕಗಳನ್ನು ಮುಂಚಿತವಾಗಿ ಡಾ. ಸಂಗೀತಲಕ್ಷ್ಮೀ (ದೂರವಾಣಿ: 9448790070) ಇವರಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.