ವಿದ್ಯಾರ್ಥಿನಿಗೆ ಹೃದಯಾಘಾತ : ಸಮಯಪ್ರಜ್ಞೆ ಮೆರೆದ ಚಾಲಕ
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ಚಾಲಕ ಹಾಗು ನಿರ್ವಾಹಕ ಬಸ್ಸನ್ನು ಆಂಬುಲೆನ್ಸ್ ಮಾದರಿಯಲ್ಲಿ ಚಲಾಯಿಸಿ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ್ದಾರೆ. ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
13ಈ ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸು ಎಂದಿನಂತೆ ಕುಳೂರು ಮಾರ್ಗವಾಗಿ ಚಲಿಸುತಿತ್ತು. ಅದರಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರಲ್ಲಿ ಕಾಲೇಜು ವಿದ್ಯಾರ್ಥಿ ತಟ್ಟನೆ ಎದೆ ನೋವೆಂದು ಹಾರ್ಟ್ ಅಟ್ಯಾಕ್ ನ ಸೂಚನೆ ನೀಡುತ್ತಿದ್ದಂತೆ ಎಚೆತ್ತುಗೊಂಡ ಬಸ್ಸಿನ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದರ್ ಹಾಗು ಮಹೇಶ್ ಪೂಜಾರಿ ಸುರೇಶ್ ಯೋಚಿಸದೆ ಎಲ್ಲಾ ಪ್ರಯಾಣಿಕರನ್ನು ಹೊತ್ತುಕೊಂಡು ಆಂಬುಲೆನ್ಸ್ ಮಾದರಿಯಲ್ಲಿ ಸೈರಾನ್ ಹಾಕಿಕೊಂಡು 6km ದೂರವನ್ನು 6 ನಿಮಿಷಗಳಲ್ಲಿ ಪ್ರಯಾಣಿಸಿ/ಕ್ರಮಿಸಿ ನಗರದ ಕಂಕನಾಡಿ ಆಸ್ಪತ್ರೆಯ ಹೊರಗಣವನ್ನು ಯಾರ ಅಪ್ಪಣೆಯನ್ನು ಕೇಳದೆ ಪ್ರಾಮುಖ್ಯತೆ ಯನ್ನು ಅರಿತು ಒಳ ಪ್ರವೇಶಿಸಿ ವಿದ್ಯಾರ್ಥಿ ಯನ್ನು casualty ವಾರ್ಡ್‌ಗೆ ಕ್ಲಪ್ತ ಸಮಯದಲ್ಲಿ ಸೇರಿಸಿ ಜೀವ ಉಳಿಸಿದ್ದಾರೆ. ಈ ಕೆಲಸ ನೋಡುತ್ತಿದ್ದ ಸಾರ್ವಜನಿಕರನ್ನು ಮೂಕ ವಿಸ್ಮಯರನ್ನಾಗಿಸಿದೆ ಹಾಗು ಅವರ ಪ್ರಶಂಷೆ ಗೆ ಪಾತ್ರವಾಗಿದೆ.ಕರಾವಳಿಯಲ್ಲಿ ಬಸ್ಸು ಚಾಲಕ ನಿರ್ವಹಕ ಶ್ರಮಿಕ ವರ್ಗ ಮಾನವೀಯತೆ ಯ ಆಗರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.