ಜನವರಿ 15:ಮಂಗಳೂರಿಗೆ ಸಂಪೂಜ್ಯ ಸ್ವಾಮಿಪೂರ್ಣಾಮೃತಾನಂದ ಪುರಿ

ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಹಿರಿಯ ಶಿಷ್ಯ ಹಾಗೂ ಮಠದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಂಪೂಜ್ಯ ಸ್ವಾಮಿ ಪೂರ್ಣಾಮೃತಾನಂದ ಪುರಿಯವರು ಜನವರಿ15 ರಂದು ಭಾನುವಾರ ಮಂಗಳೂರಿಗೆ ಆಗಮಿಸಲಿರುವರು.ಅಂದು ಸಂಜೆ ಮಂಗಳೂರು ನಗರದ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂನಲ್ಲಿ ಜರುಗುವ ಆಧ್ಯಾತ್ಮಿಕ ಕಾರ್ಯಕ್ರಮ ” ಅಮೃತ ವೈಭವ” ದಲ್ಲಿ ಭಾಗವಹಿಸಲಿರುವರು. ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ಉಪಸ್ಥಿತಿಯಲ್ಲಿ ,ಸ್ವಾಮೀಜಿಯವರ ಸಾರಥ್ಯದಲ್ಲಿ ಶ್ರೀ ಗುರು ಪಾದುಕಾಪೂಜೆ, ಧ್ಯಾನ, ಸತ್ಸಂಗ,ಭಜನೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಪೂರ್ಣ ಕುಂಭ ಸ್ವಾಗತ,ಅಮೃತ ವಿದ್ಯಾಲಯಂ ವಿದ್ಯಾರ್ಥಿಗಳಿಂದ ವೇದ ಮಂತ್ರ ಪಠನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿರುವುದು.ಜಾತಿ, ಮತ, ಧರ್ಮ ಮತ್ತು ವರ್ಣ ಭೇದವಿಲ್ಲದೆ ಎಲ್ಲರಿಗೂ ಪ್ರವೇಶಾವಕಾಶವಿರುತ್ತದೆ.ಆದುದರಿಂದ ಸ್ವಾಮೀಜಿಯವರ ಆಶೀರ್ವಚನ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಬಂದು ಭಾಗವಹಿಸಿ ಪ್ರಯೋಜನ ಪಡೆಯಬೇಕಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತ ಕುಮಾರ್ ಪೆರ್ಲ ತಿಳಿಸಿರುತ್ತಾರೆ.
