Home Posts tagged elephant attack

ಶಿಬಾಜೆ: ಅಜಿರಡ್ಕದಲ್ಲಿ ಕಾಡಾನೆ ದಾಳಿ- ಕೃಷಿ ನಾಶ

ಕೊಕ್ಕಡ : ಶಿಬಾಜೆ ಗ್ರಾಮದ ಅಜಿರಡ್ಕ ಶ್ರೀಧರ ರಾವ್ ರವರ ತೋಟಕ್ಕೆ ಮೇ 7ರಂದು ತಡರಾತ್ರಿ ಕಾಡಾನೆ ದಾಳಿ ಮಾಡಿ ಪಸಲಿಗೆ ಬರುವ ತೆಂಗಿನ ಗಿಡ, ಕೊಕ್ಕೋ ಗಿಡ, ಬಾಳೆಗಿಡ ಅಪಾರ ಪ್ರಮಾಣದಲ್ಲಿ ನಾಶ ಮಾಡಿದೆ. ಈ ಹಿಂದೆಯೂ ಇವರ ತೋಟಕ್ಕೆ ಧಾಳಿ ಮಾಡಿದ್ದು ಕೃಷಿ ಹಾನಿ ಉಂಟು ಮಾಡಿತ್ತು, ಮೇ 6ರಂದು ಶಿಶಿಲ ಗ್ರಾಮದ ಕಳ್ಳಾಜೆ ದಿವಾಕರ ಗೌಡ ಇವರ ತೋಟಕ್ಕೂ ಧಾಳಿ ಮಾಡಿರುವ ಬಗ್ಗೆ

ಗೋಳಿತ್ತೊಟ್ಟು: ಕಾಡಾನೆ ದಾಳಿ-ಕೃಷಿ ನಾಶ

ನೆಲ್ಯಾಡಿ: ಗೋಳಿತ್ತೊಟ್ಟು ಪರಿಸರದಲ್ಲಿ ಕಳೆದ 1 ವಾರದಿಂದ ಕಾಡಾನೆಯೊಂದು ಕೃಷಿ ತೋಟಗಳಿಗೆ ದಾಳಿ ನಡೆಸಿ ಅಪಾರ ಕೃಷಿ ನಾಶಗೊಳಿಸಿರುವುದಾಗಿ ವರದಿಯಾಗಿದೆ. ಗೋಳಿತ್ತೊಟ್ಟು ಗ್ರಾಮದ ಚೆನ್ನಪ್ಪ ಗೌಡ ಕುದ್ಕೋಳಿ, ಚಿದಾನಂದ ಗೌಡ ಅನಿಲ, ಪಿಲಿಫ್ ಬಳಕ ಹಾಗೂ ಪರಿಸರದ ನಿವಾಸಿಗಳ ತೋಟಗಳಿಗೆ ಕಾಡಾನೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಕೃಷಿ ನಾಶಗೊಳಿಸಿದೆ. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಎ.11ರಂದು ಪರಿಸರಕ್ಕೆ ಭೇಟಿ ನೀಡಿದ್ದು ಅರಣ್ಯದಂಚಿನಲ್ಲಿ

ಕೊಕ್ಕಡ: ಕಾಡಾನೆ ದಾಳಿ ಅಪಾರ ಕೃಷಿಗೆ ಹಾನಿ

ಕೊಕ್ಕಡ: ಇಲ್ಲಿಯ ಗುಂಪಕಲ್ಲು ತೆಂಕುಬೈಲು, ಕೆಂಗಡೇಲು, ಮುಂಡೂರುಪಳಿಕ್ಕೆ ಪ್ರದೇಶದಲ್ಲಿ ಒಂಟಿಸಲಗವು ಮಾ.13ರಂದು ರಾತ್ರಿ ದಾಳಿ ನಡೆಸಿದ್ದು ಕೃಷಿಗೆ ಹಾನಿ ಮಾಡಿದೆ. ಕೆಲವು ದಿನಗಳಿಂದ ಕಾಡಾನೆಯು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದು ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿಯನ್ನು ನೀಡುತ್ತಿದ್ದು, ನಿನ್ನೆ ರಾತ್ರಿ ಗುಂಪಕಲ್ಲು ತೆಂಕುಬೈಲು, ಕೆಂಗಡೇಲು, ಮುಂಡೂರುಪಳಿಕ್ಕೆ ಪ್ರದೇಶದಲ್ಲಿ ಕಾಡಾನೆ ಸಂಚಾರ ಮಾಡಿದ್ದು ತೋಟಕ್ಕೆ ನುಗ್ಗಿ ಅಲ್ಲಿನ ಬಾಳೆ

ಕೊಕ್ಕಡ: ಕೃಷಿ ತೋಟಕ್ಕೆ ಕಾಡಾನೆ ದಾಳಿ; ಅಡಿಕೆ, ಬಾಳೆ ಕೃಷಿ ಧ್ವಂಸ

ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಸಮೀಪದ ವಡ್ರಳಿಕೆ ಎಂಬಲ್ಲಿ ಕಾಡಾನೆ ಕೃಷಿ ತೋಟಗಳಿಗೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಉಂಟಾಗಿದೆ. ರಫಾಯಲ್ ಸ್ಟ್ರೆಲ್ಲಾ ಎಂಬವರ ತೋಟಕ್ಕೆ ದಾಳಿ ಮಾಡಿದ ಕಾಡಾನೆ ಅಡಿಕೆ, ಬಾಳೆ ಕೃಷಿಯನ್ನು ಧ್ವಂಸ ಮಾಡಿದ್ದು, ಇದರಿಂದಾಗಿ ಕೃಷಿಕರಿಗೆ ಅಪಾರ ನಷ್ಟ ಉಂಟಾಗಿದೆ.ಪದೇ ಪದೇ ಈ ರೀತಿಯ ದಾಳಿಯಿಂದ ಕೃಷಿಕರಿಗೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಇಲಾಖೆಯವರು ಪರಿಶೀಲಿಸಿ, ಕೃಷಿ ನಷ್ಟದ ಬಗ್ಗೆ