ಕೊಕ್ಕಡ: ಕಾಡಾನೆ ದಾಳಿ ಅಪಾರ ಕೃಷಿಗೆ ಹಾನಿ
ಕೊಕ್ಕಡ: ಇಲ್ಲಿಯ ಗುಂಪಕಲ್ಲು ತೆಂಕುಬೈಲು, ಕೆಂಗಡೇಲು, ಮುಂಡೂರುಪಳಿಕ್ಕೆ ಪ್ರದೇಶದಲ್ಲಿ ಒಂಟಿಸಲಗವು ಮಾ.13ರಂದು ರಾತ್ರಿ ದಾಳಿ ನಡೆಸಿದ್ದು ಕೃಷಿಗೆ ಹಾನಿ ಮಾಡಿದೆ.
ಕೆಲವು ದಿನಗಳಿಂದ ಕಾಡಾನೆಯು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದು ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿಯನ್ನು ನೀಡುತ್ತಿದ್ದು, ನಿನ್ನೆ ರಾತ್ರಿ ಗುಂಪಕಲ್ಲು ತೆಂಕುಬೈಲು, ಕೆಂಗಡೇಲು, ಮುಂಡೂರುಪಳಿಕ್ಕೆ ಪ್ರದೇಶದಲ್ಲಿ ಕಾಡಾನೆ ಸಂಚಾರ ಮಾಡಿದ್ದು ತೋಟಕ್ಕೆ ನುಗ್ಗಿ ಅಲ್ಲಿನ ಬಾಳೆ ಕೃಷಿ, ಅಡಿಕೆ ಗಿಡಗಳನ್ನು ಹಾನಿ ಮಾಡಿದ್ದು ಅಪಾರ ಕೃಷಿ ನಾಶವಾಗಿದೆ.
ಇದೀಗ ಸಾರ್ವಜನಿಕರಲ್ಲಿ ವಾಹನ ಸವಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಸಿಬ್ಬಂದಿಗಳು ಅರಣ್ಯ ಕಾಡಾನೆಯ ಚಲನವಲನ ಬಗ್ಗೆ ಮಾಹಿತಿಯನ್ನು ಹಾಗೂ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.